ರಾಜಮೌಳಿ ಜೊತೆ ವೈಮನಸ್ಸು: ನಮ್ಮ ಅಣ್ಣನಿಗೆ ಯಾರನ್ನು ಹೇಗೆ ಬಳಸಿಕೊಳ್ಳಬೇಕು ಗೊತ್ತು ಎಂದ ತಂಗಿ ಶ್ರೀಲೇಖ!

ಎಸ್‌.ಎಸ್ ರಾಜಮೌಳಿ ಸಿನಿಮಾಗಳ ಸಕ್ಸಸ್ ಸೀಕ್ರೆಟ್ ಅವರ ಫ್ಯಾಮಿಲಿ. ಮೌಳಿ ಕುಟುಂಬ ಸದಸ್ಯರೇ ಸಿನಿಮಾ ನಿರ್ಮಾಣದ ಕೆಲ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. ಇನ್ನು ಮೌಳಿ ಸಹೋದರಿ ಶ್ರೀಲೇಖಾ ಒಳ್ಳೆ ಸಂಗೀತ ನಿರ್ದೇಶಕಿ ಹಾಗೂ ಗಾಯಕಿ. ಆದರೆ ಈವರೆಗೆ ಆಕೆ ಅಣ್ಣನ ಸಿನಿಮಾಗಳಲ್ಲಿ ಕೆಲಸ ಮಾಡಿಲ್ಲ.

ಸೋಲಿಲ್ಲದ ಸರದಾರ ರಾಜಮೌಳಿ. 'ಸ್ಟೂಡೆಂಟ್ ನಂಬರ್‌ ವನ್' ಇಂದ ಹಿಡಿದು ಈ ವರ್ಷ ತೆರೆಗೆ ಬಂದ 'RRR'ವರೆಗೆ ಎಲ್ಲವೂ ಹಿಟ್ ಲಿಸ್ಟ್ ಸೇರಿವೆ. ಮೌಳಿ ಸಿನಿಮಾಗಳಿಗೆ ತಂದೆ ಕಥೆ ಬರೆದರೆ, ಪತ್ನಿ ಕಾಸ್ಟ್ಯೂಮ್ ಡಿಸೈನರ್. ಸೋದರ ಸಂಬಂಧಿ ಎಮ್. ಎಮ್‌ ಕೀರವಾಣಿ ಮ್ಯೂಸಿಕ್ ಡೈರೆಕ್ಟರ್. ಕೀರವಾಣಿ ಪತ್ನಿ ಲೈನ್ ಪ್ರೊಡ್ಯೂಸರ್, ಮತ್ತೊಬ್ಬ ಸಹೋದರ ಸಂಬಂಧಿ ಸ್ಕ್ರಿಪ್ಟ್ ವರ್ಕ್‌ನಲ್ಲಿ ಔಆಗಿ ಆಗುತ್ತಾರೆ. ಆದರೆ ಸಹೋದರಿ ಶ್ರೀಲೇಖಾಗೆ ಮಾತ್ರ ಅಣ್ಣನ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ಇಬ್ಬರ ನಡುವೆ ವೈಮನಸ್ಸು ಇರುವುದೇ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತದೆ. ಈ ಬಗ್ಗೆ ಸ್ವತಃ ಶ್ರೀಲೇಖಾ ಈಗ ಮೌನ ಮುರಿದಿದ್ದಾರೆ.

ಮಹಿಳಾ ಸಂಗೀತ ನಿರ್ದೇಶಕಿ ಶ್ರೀಲೇಖಾ ಸಾಕಷ್ಟು ತೆಲುಗು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಆದರೆ ರಾಜಮೌಳಿ ನಿರ್ದೇಶನದ ಸಿನಿಮಾಗಳಲ್ಲಿ ಮಾತ್ರ ಕೆಲಸ ಮಾಡಿಲ್ಲ. ಈ ಬಗ್ಗೆ ಶ್ರೀಲೇಖಾ ಹೇಳುವುದು ಹೀಗೆ..

ರಾಜಮೌಳಿ ಬಗ್ಗೆ ಸಹೋದರಿ ಮಾತು

ರಾಜಮೌಳಿ ಬಗ್ಗೆ ಸಹೋದರಿ ಮಾತು

"ನಮ್ಮ ಕುಟುಂಬವೆಲ್ಲಾ ಒಟ್ಟಾಗಿಯೇ ಇದ್ದೇವೆ. ನಮ್ಮ ಕೆಲಸಗಳ ವಿಷಯದಲ್ಲಿ ಅವರವರ ನಿರ್ಧಾರ ಅವರದ್ದು. ರಾಜಮೌಳಿ- ಕೀರವಾಣಿ ಕಾಂಬಿನೇಷನ್ ಹಿಟ್ ಆದ ಕಾರಣ ಅದನ್ನು ಮುಂದುವರೆಸುತ್ತಿದ್ದಾರೆ. ರಾಜಮೌಳಿ ಅಣ್ಣನಿಗೆ ಯಾರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಬಹಳ ಚೆನ್ನಾಗಿ ಗೊತ್ತಿದೆ. ನನ್ನ ಹಾಗೂ ಅಣ್ಣ ರಾಜಮೌಳಿ ನಡುವೆ ಉತ್ತಮ ಒಡನಾಟ ಇದೆ" ಎಂದು ಶ್ರೀಲೇಖಾ ಹೇಳಿದ್ದಾರೆ.

ಡೈರೆಕ್ಟರ್ ಆದ್ಮೇಲೆ ಅಣ್ಣ ಬದಲಾದ!

ಡೈರೆಕ್ಟರ್ ಆದ್ಮೇಲೆ ಅಣ್ಣ ಬದಲಾದ!

"ಒಂದು ವೇಳೆ ನಾನು ಅವರ ಚಿತ್ರಕ್ಕೆ ಅವಸರ ಎಂದರೆ ಕಂಡಿತ ಅವಕಾಶ ಕೊಡುತ್ತಾರೆ. ಮುಂದೊಂದು ದಿನ ನನಗೂ ಅವರು ಅವಕಾಶ ಕೊಡುತ್ತಾರೆ. ಹೇಳುವುದಕ್ಕೆ ಆಗುವುದಿಲ್ಲ. ನಮ್ಮ ನಡುವೆ ಯಾವುದೇ ಭಿನ್ನಭಿಪ್ರಾಯ ಇಲ್ಲ. ನಾವು ವರ್ಷಕ್ಕೊಮ್ಮೆ ಸಂಕ್ರಾಂತಿ ಸಂಭ್ರಮದಲ್ಲಿ ಎಲ್ಲರೂ ಒಂದೆಡೆ ಸೇರುತ್ತೇವೆ. ರಾಜಮೌಳಿ ಚಿತ್ರರಂಗಕ್ಕೆ ಬರುವ ಮುಂಚೆ ಬಹಳ ಆತ್ಮೀಯವಾಗಿ ಇರುತ್ತಿದ್ದರು. ನನ್ನ ಗಾಯನಕ್ಕೆ ಸಾಕಷ್ಟು ಸಲಹೆ ಸೂಚನೆ ಕೊಡುತ್ತಿದ್ದರು. ಚಾಕ್ಲೆಟ್ ತಂದುಕೊಡುತ್ತಿದ್ದರು. ಡೈರೆಕ್ಟರ್ ಆಗಿ ಸಕ್ಸಸ್ ಕಂಡಮೇಲೆ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು" ಎಂದಿದ್ದಾರೆ.

ಕನ್ನಡ ಚಿತ್ರಗಳಿಗೂ ಶ್ರೀಲೇಖಾ ಸಂಗೀತ

ಕನ್ನಡ ಚಿತ್ರಗಳಿಗೂ ಶ್ರೀಲೇಖಾ ಸಂಗೀತ

ಶ್ರೀಲೇಖಾ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಕೆಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ 'ಮದುವೆ ಆಗೋಣ ಬಾ' ಹಾಗೂ 'ಬೆಂಕಿ ಬಿರುಗಾಳಿ' ಸಿನಿಮಾಗಳಿಗೆ ಟ್ಯೂನ್ ಹಾಕಿದ್ದರು. ತೆಲುಗಿನಲ್ಲಿ 'ಅಮ್ಮಾಯಿ ಬಾಗುಂದಿ', 'ಪ್ರೇಯಸಿ ರಾವೆ', ಶ್ರೀಕೃಷ್ಣ 2006, ಅ ಆ ಇ ಈ, ಶ್ರೀವಲ್ಲಿ, ಹಿಟ್-2 ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಮಹೇಶ್ ಬಾಬು ಚಿತ್ರಕ್ಕೆ ಮೌಳಿ ನಿರ್ದೇಶನ

ಮಹೇಶ್ ಬಾಬು ಚಿತ್ರಕ್ಕೆ ಮೌಳಿ ನಿರ್ದೇಶನ

ರಾಜಮೌಳಿ ನಿರ್ದೇಶನದ 'RRR' ಜಪಾನ್ ಭಾಷೆಗೆ ಡಬ್ ಆಗಿ ಸದ್ದು ಮಾಡ್ತಿದೆ. ವಿದೇಶದ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸದ್ಯ ಮುಂದಿನ ಸಿನಿಮಾ ಬಗ್ಗೆ ರಾಜಮೌಳಿ ಗಮನ ಹರಿಸಿದ್ದಾರೆ. ಮಹೇಶ್ ಬಾಬು ಜೊತೆ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ.

More from Filmibeat

English summary
music Director M. M. Srilekha Interesting Comments on Her Brother Director SS Rajamouli. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X