ಪ್ರತಿ ವರ್ಷ ಆತನಿಗೆ ಐಫೋನ್ ಗಿಫ್ಟ್ ಕೊಡುವುದೇಕೆ ನಟಿ ಅನುಷ್ಕಾ ಶೆಟ್ಟಿ?
ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ಮಾತ್ರ ನಟಿಸಲೇ ಇಲ್ಲ. ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿ ತೆಲುಗು ನಟಿಯೇ ಆಗಿಬಿಟ್ಟಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ಸ್ವೀಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗ್ಬಿಟ್ಟಿದೆ. ಇದೀಗ 2 ಚಿತ್ರಗಳಲ್ಲಿ ಒಟ್ಟೊಟ್ಟಿಗೆ ನಟಿಸ್ತಿದ್ದಾರೆ.
ಅನುಷ್ಕಾ ಶೆಟ್ಟಿ ನಟನೆಯಿಂದ ಮಾತ್ರವಲ್ಲ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದಲೂ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗುತ್ತಾರೆ. ಇನ್ನು ಆಪ್ತರಿಗೆ ಕೆಲವೊಮ್ಮೆ ಪ್ರಾಮೀಸ್ ಮಾಡುವ ಸ್ವೀಟಿ ಅದನ್ನು ತಪ್ಪದೇ ನಡೆಸಿಕೊಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ವಿದೇಶದ ಕಾರ್ ಡ್ರೈವರ್‌ಗೆ 12 ಲಕ್ಷ ರೂ. ಕಾರನ್ನು ಆಕೆ ಉಡುಗೊರೆಯಾಗಿ ಕೊಟ್ಟಿದ್ದು ಬಹಳ ಸುದ್ದಿ ಆಗಿತ್ತು. ಇದೇ ರೀತಿ ಚಿತ್ರರಂಗದಲ್ಲಿ ಕೆಲವರಿಗೆ ಸ್ವೀಟಿ ಆಗಾಗ್ಗೆ ಬಗೆಬಗೆಯ ಗಿಫ್ಟ್ ಕೊಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾ ಹಿಟ್ ಆದರೆ ನಟ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ನಿರ್ಮಾಪಕರು ಗಿಫ್ಟ್ ಕೊಡುವುದನ್ನು ನೋಡಿದ್ದೇವೆ. ಆದರೆ ಸಂಗೀತ ನಿರ್ದೇಶಕರೊಬ್ಬರಿಗೆ ಅನುಷ್ಕಾ ಶೆಟ್ಟಿ ಪ್ರತಿವರ್ಷ ಸ್ಪೆಷಲ್ ಗಿಫ್ಟ್ ಕೊಡಿಸುತ್ತಾರೆ. ಇದನ್ನು ಖುದ್ದು ಆ ಸಂಗೀತ ನಿರ್ದೇಶಕರು ಈಗ ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ಸ್ವೀಟಿ ಕೊಡಿಸಿದ ಗಿಫ್ಟ್ ಅನ್ನು ಕೂಡ ತೋರಿಸಿದ್ದಾರೆ.
ಸಂಗೀತ ನಿರ್ದೇಶಕ ಎಸ್. ತಮನ್‌ಗೆ ಅನುಷ್ಕಾ ಶೆಟ್ಟಿ ಹೀಗೆ ಪ್ರತಿ ವರ್ಷ ಐಫೋನ್ ಗಿಫ್ಟ್ ಕೊಡುತ್ತಿದ್ದಾರೆ. ತಮನ್ ತೆಲುಗು, ತಮಿಳಿನ ಬಹಳ ಬೇಡಿಕೆಯ ಸಂಗೀತ ನಿರ್ದೇಶಕ. ಕನ್ನಡದ ಕೆಲ ಚಿತ್ರಕ್ಕೆ ಟ್ಯೂನ್ ಹಾಕಿ ಗೆದ್ದಿದ್ದಾರೆ. ಸದ್ಯ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಹಾಗೂ ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಚಿತ್ರಕ್ಕೆ ಅವರು ಟ್ಯೂನ್ ಹಾಕುತ್ತಿದ್ದಾರೆ.

'ತೆಲುಗು ಇಂಡಿಯನ್ ಐಡೆಲ್' ಎನ್ನುವ ಕಿರುತೆರೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿಯೂ ತಮನ್ ಗುರ್ತಿಸಿಕೊಂಡಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಅನುಷ್ಕಾ ಶೆಟ್ಟಿ ಬಗ್ಗೆ ತಮನ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ 'ಭಾಗಮತಿ' ಸಿನಿಮಾ ಸಮಯದಲ್ಲಿ ಸ್ವೀಟಿ ಕೊಟ್ಟ ಮಾತಿನಂತೆ ಪ್ರತಿವರ್ಷ ಒಂದೊಂದು ಐಫೋನ್ ಗಿಫ್ಟ್ ಕೊಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿ ಸೆಪ್ಟೆಂಬರ್‌ನಲ್ಲಿ ನನಗೊಂದು ಹೊಸ ಐಫೋನ್ ಉಡುಗೊರೆ ಕೊಡಿಸುವುದಾಗಿ ಅನುಷ್ಕಾ ಶೆಟ್ಟಿ ಹೇಳಿದ್ದರು. ಅದರಂತೆ ನನಗೆ ಈ ವರ್ಷವೂ ಫೋನ್ ಸಿಕ್ಕಿದೆ ಎಂದು ತಮನ್ ಹೇಳಿದ್ದಾರೆ. "ಹೀರೊಯಿನ್ ಅಂತ ಅಲ್ಲ, ಆಕೆ ನನಗೆ ಬಹಳ ಇಷ್ಟವಾದ ವ್ಯಕ್ತಿ. ಆಕೆಯ ಮನಸ್ಸು ಬಂಗಾರ, ಸೌಂದರ್ಯದ ವಿಚಾರ ಪಕ್ಕಕ್ಕಿಟ್ಟರೆ ಆಕೆ ಬಹಳ ಒಳ್ಳೆ ವ್ಯಕ್ತಿ. ಇನ್‌ಸೈಡ್ ಬ್ಯೂಟಿಫುಲ್" ಎಂದು ತಮನ್ ಕೊಂಡಾಡಿದ್ದಾರೆ.
"ನನಗೆ ಕೊಟ್ಟ ಮಾತಿನಂತೆ ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ನನಗೆ ಒಂದು ಐಫೋನ್ ಗಿಫ್ಟ್ ಬರುತ್ತದೆ. ಈಗ ಬಳಸುತ್ತಿರುವ ಫೋನ್ ಕೂಡ ಅದೇ. 'ಭಾಗಮತಿ' ಚಿತ್ರೀಕರಣದ ವೇಳೆ ನನಗೆ ಐಫೋನ್ ಅಂದ್ರೆ ಇಷ್ಟ ಎಂದು ಅನುಷ್ಕಾ ಶೆಟ್ಟಿ ಬಳಿ ಹೇಳಿದ್ದೆ. ಸಿನಿಮಾ ಗೆದ್ರೆ ಕೊಡಿಸಬೇಕು ಎಂದು ಹೇಳಿದ್ದೆ. ಹಾಗಾಗಿ ಪ್ರತಿವರ್ಷ ಐಫೋನ್ ಗಿಫ್ಟ್ ಆಗಿ ಕೊಡಿಸುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಆಫೀಸ್‌ನಿಂದ ಮೂಲಕ ಅನುಷ್ಕಾ ಶೆಟ್ಟಿ ಕಡೆಯಿಂದ ನನಗೆ ಐಫೋನ್ ಬರುತ್ತದೆ" ಎಂದಿದ್ದಾರೆ.
"ನನಗೆ ಅನುಷ್ಕಾ ಶೆಟ್ಟಿ ಅಂದ್ರೆ ಬಹಳ ಇಷ್ಟ. ಆಕೆಯ ನನ್ನ ಜೀವನ. ನಾನು ಈವರೆಗೆ ನೋಡಿದ ಬೆಸ್ಟ್ ಹ್ಯೂಮನ್‌ಬೀಯಿಂಗ್" ಎಂದು ತಮನ್ ಹೇಳಿರುವುದು ವೈರಲ್ ಆಗುತ್ತಿದೆ. ಸಂಗೀತ ನಿರ್ದೇಶಕನ ಮಾತು ಕೇಳಿ ಅನುಷ್ಕಾ ಶೆಟ್ಟಿ ಅಭಿಮಾನಿಗಳು ಮೆಚ್ಚಿಕೊಂಡು ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಸದ್ಯ ಸ್ವೀಟಿ ತೆಲುಗಿನ 'ಘಾಟಿ' ಹಾಗೂ ಮಲಯಾಳಂನ 'ಕಥನಾರ್' ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











