"ನನಗೆ ಹೆಣ್ಣು ಮಗು ಬೇಕು, ಆದರೆ ಪತಿ ಸಹಕರಿಸುತ್ತಿಲ್ಲ"; ನಟಿ ಅನಸೂಯ ಹೇಳಿಕೆ ವೈರಲ್

ತೆಲುಗು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಹಾಟ್ ಹಾಟ್ ಫೋಟೊಶೂಟ್‌ಗಳಲ್ಲಿ ಮಿಂಚುವ ಬೆಡಗಿ ಬೋಲ್ಡ್ ಕಾಮೆಂಟ್‌ಗಳಿಂದ ಪದೇ ಪದೆ ಸುದ್ದಿ ಆಗುತ್ತಾರೆ. ಕೆಲ ದಿನಗಳ ಹಿಂದೆ ನಟ ವಿಜಯ್ ದೇವರಕೊಂಡ ಅಭಿಮಾನಿಗಳು ಜೊತೆ ಕಿರಿಕ್ ಮಾಡಿಕೊಂಡಿದ್ದರು.

'ಲೈಗರ್' ಚಿತ್ರದ ಸಮಯದಲ್ಲಿ ಆಕೆ ಮಾಡಿದ್ದ ಒಂದು ಟ್ವೀಟ್ ಭಾರೀ ಸದ್ದು ಮಾಡಿತ್ತು. ಅದಕ್ಕೆ ಪ್ರತಿಯಾಗಿ ದೇವರಕೊಂಡ ಅಭಿಮಾನಿಗಳು ಆಕೆಯನ್ನು ಆಂಟಿ ಎಂದು ಕರೆದು ಟ್ರೋಲ್ ಮಾಡಿದ್ದರು. ಈ ಬಗ್ಗೆ ಅನಸೂಯ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಈ ತಿಕ್ಕಾಟ ಬಹಳ ದಿನ ಮುಂದುವರೆಯಿತು. ಇತ್ತೀಚೆಗೆ ಆಕೆಯ ಕ್ರೇಜ್ ಕಮ್ಮಿ ಆಗಿದೆ. ಸದ್ಯ 3ನೇ ಮಗು ಮಾಡಿಕೊಳ್ಳುವ ಬಗ್ಗೆ ಅನಸೂಯ ಕಾಮೆಂಟ್ ವೈರಲ್ ಆಗುತ್ತಿದೆ.

My Husband is not cooperative for the Third Child actress Anasuya Bharadwaj comments goes viral

ಮೊನ್ನೆ ಮೊನ್ನೆ ಬಿಡುಗಡೆಯಾದ 'ಪುಷ್ಪ'-2 ಚಿತ್ರದಲ್ಲಿ ದ್ರಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಮಿಂಚಿದ್ದರು. ಅದಕ್ಕೂ ಮುನ್ನ 'ರಂಗಸ್ಥಳಂ' ಚಿತ್ರದ ರಂಗಮತ್ತ ಪಾತ್ರ ಒಳ್ಳೆ ಹೆಸರು ತಂದುಕೊಂಡಿತ್ತು. ತೆಲುಗು ಕಿರುತೆರೆಯ ಜಬರ್ದಸ್ತ್ ಶೋ ನಿರೂಪಕಿಯಾಗಿ ಅನಸೂಯ ಗಮನ ಸೆಳೆದರು. ಅಲ್ಲೂ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಬಳಿಕ ಚಿತ್ರಗಳ ಅವಕಾಶಗಳು ಸಿಕ್ಕಿತ್ತು.

ಸುಸಂಕ್ ಭಾರಧ್ವಜ್ ಎಂಬುವವರನ್ನು 14 ವರ್ಷಗಳ ಹಿಂದೆ ಅನಸೂಯ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಈಗ ನನಗೆ ಹೆಣ್ಣು ಮಗು ಮಾಡಿಕೊಳ್ಳುವ ಆಸೆ ಇದೆ. ಆದರೆ ಅದಕ್ಕೆ ನಮ್ಮ ಪತಿ ಸಹಕರಿಸುತ್ತಿಲ್ಲ ಎಂದು ಅನಸೂಯ ಹೇಳಿರುವುದು ವೈರಲ್ ಆಗುತ್ತಿದೆ.

ಅಷ್ಟಕ್ಕೂ ಅನಸೂಯ 40ರ ಹರೆಯದಲ್ಲಿ ನಟಿ ಅನುಸೂಯ ಮತ್ತೆ ತಾಯಿ ಆಗಬೇಕು ಎಂದುಕೊಳ್ಳುವುದಕ್ಕೆ ಒಂದು ಕಾರಣ ಇದೆ. ನನಗೆ ಹೆಣ್ಣು ಮಗು ಬೇಕು. ಹಾಗಾಗಿ ಮತ್ತೆ ತಾಯಿ ಆಗಬೇಕು ಎಂದು ಆಕೆ ಹೇಳಿದ್ದಾರೆ. ತೆಲುಗಿನ ಐಡಿ ಟಾಕೀಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ.

ಅನುಸೂಯ ಮಾತನಾಡಿ "ನಮ್ಮ ಮನೆಯಲ್ಲಿ ಹೇಳ್ತಿದ್ದೀನಿ ಹೆಣ್ಣು ಮಗು ಬೇಕು ಅಂತ, ಆದರೆ ನಮ್ಮ ಪತಿ ಸಹಕರಿಸುತ್ತಿಲ್ಲ" ಎಂದು ನಕ್ಕಿದ್ದಾರೆ. ಮಾತು ಮುಂದುವರೆಸಿ "ಹೆಣ್ಣು ಮಗು ಇಲ್ಲದೇ ಜೀವನವೇ ವ್ಯರ್ಥ ಎನಿಸುತ್ತಿದೆ. ಮನೆಯಲ್ಲಿ ಪತಿ, ಇಬ್ಬರು ಗಂಡು ಮಕ್ಕಳು. ಹೆಣ್ಣು ಮಗು ಇದ್ದರೆ ಬ್ಯಾಲೆನ್ಸ್ ಆಗುತ್ತದೆ. ಮನೆ ನೀಟ್ ಆಗಿರಬೇಕು ಅಂದ್ರೆ, ಹೆಣ್ಣು ಮಕ್ಕಳಿರಬೇಕು" ಎಂದು ಅನುಸೂಯ ವಿವರಿಸಿದ್ದಾರೆ.

ಮೂರನೇ ಮಗುವಿನ ಪತಿ ಯಾಕೆ ಒಪ್ಪುತ್ತಿಲ್ಲ ಎನ್ನುವುದನ್ನು ಅನಸೂಯ ಹೇಳಿದ್ದಾರೆ. ನಿನಗೇನು ಮಗು ಹೆತ್ತು ಕೆಲಸಕ್ಕೆ ಹೋಗಿ ಬಿಡುತ್ತೀಯಾ? ಆದರೆ ಲಾಲನೆ ಪಾಲನೆ ಮಾಡಿ ಸಾಕುವುದು ಯಾರು ಎನ್ನುತ್ತಾರೆ ಎಂದು ಅನಸೂಯ ಹೇಳಿಕೊಂಡಿದ್ದಾರೆ. ಆಕೆ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೂ ವೈಯಕ್ತಿಕ ವಿಚಾರವನ್ನು ಎಷ್ಟು ಬೋಲ್ಡ್ ಆಗಿ ಹೇಳಿದ್ಧಾರೆ ಎಂದು ಕೆಲವರು ಹುಬ್ಬೇರಿಸಿದ್ದಾರೆ.

'ಪುಷ್ಪ'-2 ಬಳಿಕ ತಮಿಳಿನ ಎರಡು ಚಿತ್ರಗಳಲ್ಲಿ ಅನಸೂಯ ನಟಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕಿರುತೆರೆಗೆ ಗುಡ್‌ಬೈ ಹೇಳಿದ್ದ ಆಕೆ ಇತ್ತೀಚಿಗೆ ಹೊಸ ರಿಯಾಲಿಟಿ ಶೋ ಮೂಲಕ ಮತ್ತೆ ವಾಪಸ್ ಆಗಿದ್ದರು. ಆದರೆ ಈ ಬಾರಿ ನಿರೂಪಕಿ ಅಲ್ಲ. ಬದಲಿಗೆ ತಂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

More from Filmibeat

English summary
Actress Anasuya Bharadwaj shared desire that she wanted a baby girl
Read more about: tollywood telugu actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X