For Quick Alerts
  ALLOW NOTIFICATIONS  
  For Daily Alerts

  Veerayya Vs Veerasimha: ಒಂದೇ ಸಂಸ್ಥೆಯ 2 ಚಿತ್ರಗಳ ಮಧ್ಯೆ ಫೈಟ್: ಏನಿದು ಸಂಕ್ರಾಂತಿ ಲೆಕ್ಕಾಚಾರ?

  |

  ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿ ಸಂಭ್ರಮದಲ್ಲೇ ಜನವರಿ 13ಕ್ಕೆ ಸಿನಿಮಾ ತೆರೆಗಪ್ಪಳಿಸ್ತಿದೆ. ಜನವರಿ 12ಕ್ಕೆ ರಿಲೀಸ್ ಆಗ್ತಿರೋ 'ವೀರಸಿಂಹ ರೆಡ್ಡಿ' ಹಾಗೂ 'ವಾಲ್ತೇರು ವೀರಯ್ಯ' ಬಾಕ್ಸಾಫೀಸ್ ಕ್ಲ್ಯಾಶ್ ಫಿಕ್ಸ್ ಆದಂತಾಗಿದೆ.

  ಯಾವುದೇ ಸಿನಿಮಾ ನಿರ್ಮಾಣ ಸಂಸ್ಥೆ ಕೂಡ ಬಾಕ್ಸಾಫೀಸ್ ಫೈಟ್‌ಗೆ ಒಪ್ಪುವುದಿಲ್ಲ. ಎಷ್ಟೇ ಆದರೂ ದುಡ್ಡಿನ ಲೆಕ್ಕಾಚಾರ ಅಲ್ಲವೇ. ಕೋಟಿ ಕೋಟಿ ಬಂಡವಾಳ ಹಾಕಿ ಮತ್ತೊಂದು ಸಿನಿಮಾದಿಂದ ತೊಂದರೆ ಆಗುತ್ತೆ ಎಂದರೆ ಆ ದಿನ ಸಿನಿಮಾ ರಿಲೀಸ್ ಮಾಡಲು ಒಪ್ಪುವುದಿಲ್ಲ. ಆದರೆ ಈ ಬಾರಿ ಸುಗ್ಗಿ ಹಬ್ಬಕ್ಕೆ ಟಾಲಿವುಡ್‌ನಲ್ಲಿ ವಿಚಿತ್ರ ಸನ್ನಿವೇಶ ಎದುರಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣದ 2 ಬಹುನಿರೀಕ್ಷಿತ ಸಿನಿಮಾಗಳು ಒಂದು ದಿನದ ಅಂತರದಲ್ಲಿ ತೆರೆಗೆ ಬರ್ತಿವೆ.

  ಸಂಕ್ರಾಂತಿ ರೇಸ್‌ಗೆ ಚಿರಂಜೀವಿ ಎಂಟ್ರಿ; 'ಪೊಂಗಲ್ ವಿನ್ನರ್' ಪಟ್ಟಕ್ಕಾಗಿ ನಾಲ್ವರು ಸ್ಟಾರ್‌ಗಳ ನಡುವೆ ಕಾಳಗ!ಸಂಕ್ರಾಂತಿ ರೇಸ್‌ಗೆ ಚಿರಂಜೀವಿ ಎಂಟ್ರಿ; 'ಪೊಂಗಲ್ ವಿನ್ನರ್' ಪಟ್ಟಕ್ಕಾಗಿ ನಾಲ್ವರು ಸ್ಟಾರ್‌ಗಳ ನಡುವೆ ಕಾಳಗ!

  ನಂದಮೂರಿ ಫ್ಯಾಮಿಲಿ ಹಾಗೂ ಚಿರಂಜೀವಿ ಫ್ಯಾಮಿಲಿ ನಡುವಿನ ಜಿದ್ದಾಜಿದ್ದಿ ಇಂದು ನೆನ್ನೆಯದಲ್ಲ. ಈ ಹಿಂದೆ ಸಾಕಷ್ಟು ಬಾರಿ ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎದುರು ಬದರುರಾಗಿದೆ. ಕೆಲವೊಮ್ಮೆ ಚಿರು ಗೆದ್ದರೆ ಮತ್ತೆ ಕೆಲವೊಮ್ಮೆ ಬಾಲಕೃಷ್ಣ ಗೆದ್ದಿದ್ದಾರೆ.

  ಸಂಕ್ರಾಂತಿಗೆ ಚಿರು Vs ಬಾಲಯ್ಯ ಫೈಟ್

  ಸಂಕ್ರಾಂತಿಗೆ ಚಿರು Vs ಬಾಲಯ್ಯ ಫೈಟ್

  ಕೆ. ಎಸ್ ರವೀಂದ್ರ ನಿರ್ದೇಶನದ 'ವಾಲ್ತೇರು ವೀರಯ್ಯ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಚಿರು ಮಾಸ್ ಲುಕ್‌ನಲ್ಲಿ ಮಿಂಚಿದ್ದಾರೆ. ರವಿತೇಜಾ ಸಾಥ್ ಕೂಡ ಸಿಕ್ಕಿದೆ. ಗೋಪಿಚಂದನ್ ಮಲಿನೇನಿ ನಿರ್ದೇಶನದ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ಬಾಲಯ್ಯ ಮತ್ತೊಮ್ಮೆ ಮೀಸೆ ತಿರುವಿದ್ದಾರೆ. ದುನಿಯಾ ವಿಜಿ ಕೂಡ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ 2 ಚಿತ್ರಗಳ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 2 ಚಿತ್ರಗಳು ಸಂಕ್ರಾತಿಗೆ ರಿಲೀಸ್ ಆಗ್ತಿವೆ.

  2 ಮೈತ್ರಿ ಸಂಸ್ಥೆಯ ಚಿತ್ರಗಳು

  2 ಮೈತ್ರಿ ಸಂಸ್ಥೆಯ ಚಿತ್ರಗಳು

  'ಶ್ರೀಮಂತುಡು', 'ಜನತಾ ಗ್ಯಾರೇಜ್', 'ರಂಗಸ್ಥಳಂ', 'ಪುಷ್ಪ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟು ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್. 'ವಾಲ್ತೇರು ವೀರಯ್ಯ' ಮತ್ತು 'ವೀರಸಿಂಹ ರೆಡ್ಡಿ' ಎರಡೂ ಸಿನಿಮಾಗಳನ್ನು ಇದೇ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡ್ತಿದೆ. ಇದೀಗ 2 ಸಿನಿಮಾಗಳ ರಿಲೀಸ್‌ ಡೇಟ್‌ ಅನ್ನು ಘೋಷಿಸಿದೆ. ಈ ಸಂಸ್ಥೆ ತಮ್ಮದೇ ಸಿನಿಮಾ ಎದುರು ಮತ್ತೊಂದು ಸಿನಿಮಾ ರಿಲೀಸ್ ಮಾಡುತ್ತಿರುವುದಕ್ಕೆ ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

  ವೀರಯ್ಯ- ಸಿಂಹ ಇಬ್ಬರು ಗೆಲ್ತಾರಾ?

  ವೀರಯ್ಯ- ಸಿಂಹ ಇಬ್ಬರು ಗೆಲ್ತಾರಾ?

  ಸಾಮಾನ್ಯವಾಗಿ ಯಾವುದೇ ಸಂಸ್ಥೆ ಈ ರೀತಿ ಎರಡು ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಮಾಡಲ್ಲ. ಆದರೆ ಇಲ್ಲಿ ನಡೆಯುತ್ತಿರುವುದು ಸಂಕ್ರಾಂತಿ ಲೆಕ್ಕಾಚಾರ. ಹೌದು. ಆಂಧ್ರ, ತೆಲಂಗಾಣದಲ್ಲಿ ಸುಗ್ಗಿ ಹಬ್ಬ ಬಹಳ ಜೋರಾಗಿರುತ್ತದೆ. ಮೂರ್ನಾಲ್ಕು ದಿನಗಳ ಕಾಲ ಜನ ಹಬ್ಬ ಆಚರಿಸುತ್ತಾರೆ. ಬೇರೆ ಬೇರೆ ಊರುಗಳಲ್ಲಿ ಇರುವವರು ತಮ್ಮ ತಮ್ಮ ಹುಟ್ಟುರಿಗೆ ಹೋಗಿ ಹಬ್ಬ ಆಚರಿಸುತ್ತಾರೆ. ಹಬ್ಬದ ನಂತರ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಒಂದಲ್ಲ, ಎರಡು, ಮೂರು ಸಿನಿಮಾಗಳನ್ನು ನೋಡುತ್ತಾರೆ. ಅದೇ ಕಾರಣಕ್ಕೆ ಮೈತ್ರಿ ಸಂಸ್ಥೆ ಬಹಳ ಧೈರ್ಯದಿಂದ 2 ಚಿತ್ರಗಳನ್ನು ತೆರೆಗೆ ತರ್ತಿದೆ.

  ಸುಗ್ಗಿ ಹಬ್ಬಕ್ಕೆ 4 ಚಿತ್ರಗಳು ತೆರೆಗೆ

  ಸುಗ್ಗಿ ಹಬ್ಬಕ್ಕೆ 4 ಚಿತ್ರಗಳು ತೆರೆಗೆ

  ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ 4 ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿದೆ. ವೀರಯ್ಯ' ಹಾಗೂ 'ವೀರಸಿಂಹ ರೆಡ್ಡಿ' ಜೊತೆಗೆ ತಮಿಳಿನ 'ವಾರಿಸು' ಮತ್ತು 'ತುನಿವು' ಸಿನಿಮಾಗಳು ತೆರೆಗಪ್ಪಳಿಸ್ತಿವೆ. ಕಾಲಿವುಡ್‌ನಲ್ಲಿ ಅಜಿತ್, ವಿಜಯ್ ಸಿನಿಮಾಗಳು ಒಟ್ಟೊಟ್ಟಿಗೆ ಥಿಯೇಟರ್‌ಗೆ ಬರಲು ಇದೇ ಸಂಕ್ರಾಂತಿ ಲೆಕ್ಕಾಚಾರವೇ ಕಾರಣ. ಇನ್ನು ಎರಡು ಚಿತ್ರಗಳು ತೆಲುಗಿಗೆ ಡಬ್ ಆಗಿ ರಿಲೀಸ್ ಆಗ್ತಿವೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ 4 ಸಿನಿಮಾಗಳ ಮಧ್ತೆ ಜಿದ್ದಾಜಿದ್ದಿನ ಫೈಟ್ ಗ್ಯಾರೆಂಟಿ.

  English summary
  Mythri is releasing two of their productions Waltair Veerayya and Veera Simha Reddy for Sankranthi. production housewould be releasing two biggies of Tollywood at the same Week. know More.
  Wednesday, December 7, 2022, 18:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X