ತಮಿಳು ನಿರ್ದೇಶಕನಿಗೆ 5 ಕೋಟಿ ಆಫರ್ ನೀಡಿದ ತೆಲುಗು ಸಿನಿಮಾ ನಿರ್ಮಾಣ ಸಂಸ್ಥೆ

ಸಿನಿಮಾದ ಕ್ಯಾಪ್ಟನ್ ನಿರ್ದೇಶಕನೆಂದೇ ಹೇಳಲಾಗುತ್ತದೆ. ಆದರೆ ಸಂಭಾವನೆ ವಿಷಯಕ್ಕೆ ಬಂದಾಗ ನಾಯಕನಿಗೇ ಹೆಚ್ಚು ಸಂಭಾವನೆ. ಎಷ್ಟೋ ಬಾರಿ ನಿರ್ದೇಶಕನ ಸಂಭಾವನೆ ಆ ಸಿನಿಮಾದ ನಾಯಕನ ಅರ್ಧದಷ್ಟು ಸಹ ಇರುವುದಿಲ್ಲ.

ಆದರೆ ಕೆಲವು ನಿರ್ಮಾಣ ಸಂಸ್ಥೆಗಳಿವೆ ನಿರ್ದೇಶಕನ ಮೌಲ್ಯ ಅವುಗಳಿಗೆ ಗೊತ್ತಿದೆ. ಹಾಗಾಗಿಯೇ ನಿರ್ದೇಶಕರಿಗೆ ಹೆಚ್ಚಿನ ಸಂಭಾವನೆ ನೀಡಿ ಸಿನಿಮಾ ಮಾಡಿಸಿಕೊಳ್ಳುತ್ತವೆ. ಅಂಥಹುಗಳಲ್ಲಿ ತೆಲುಗಿನ ಮೈತ್ರಿ ಮೂವೀಸ್ ಸಹ ಒಂದು.

'ಶ್ರೀಮಂತುಡು', 'ಜನತಾ ಗ್ಯಾರೇಜ್', 'ರಂಗಸ್ಥಳ', 'ಉಪ್ಪೆನ', 'ಮತ್ತು ಒದಲರಾ' ಇನ್ನೂ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಮೈತ್ರಿ ಮೂವಿ ಮೇಕರ್ಸ್ ಈಗ ಪ್ರಸ್ತುತ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾಕ್ಕೆ ಬಂಡವಾಳ ಹೂಡಿದೆ. ಜೊತೆಗೆ ಮಹೇಶ್ ಬಾಬು ನಟಿಸುತ್ತಿರುವ 'ಸರ್ಕಾರು ವಾರಿ ಪಾಟ' ಸಿನಿಮಾಕ್ಕೂ ಬಂಡವಾಳ ಹೂಡಿದೆ.

ತಮಿಳಿನ ನಿರ್ದೇಶಕನಿಗೆ ಆಫರ್

ತಮಿಳಿನ ನಿರ್ದೇಶಕನಿಗೆ ಆಫರ್

ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯು ತಮಿಳಿನ ಪ್ರತಿಭಾವಂತ ನಿರ್ದೇಶಕನಿಗಾಗಿ ಭಾರಿ ದೊಡ್ಡ ಮೊತ್ತದ ಸಂಭಾವನೆಯನ್ನೇ ನೀಡುತ್ತಿದೆ. ಸಿನಿಮಾ ನಾಯಕನಿಗೂ ಕಡಿಮೆ ಇಲ್ಲದಂತೆ ಸಂಭಾವನೆ ನೀಡಿ ಸಿನಿಮಾ ಮಾಡಿಸಿಕೊಳ್ಳುತ್ತಿದೆ ಈ ನಿರ್ಮಾಣ ಸಂಸ್ಥೆ.

ಐದು ಕೋಟಿ ಆಫರ್ ನೀಡಿರುವ ನಿರ್ಮಾಣ ಸಂಸ್ಥೆ

ಐದು ಕೋಟಿ ಆಫರ್ ನೀಡಿರುವ ನಿರ್ಮಾಣ ಸಂಸ್ಥೆ

ತಮಿಳಿನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಲೋಕೇಶ್ ಕನಗರಾಜ್‌ಗೆ ಮೈತ್ರಿ ಮೂವೀಸ್ 5 ಕೋಟಿ ಸಂಭಾವನೆ ನೀಡುವುದಾಗಿ ಆಫರ್ ನೀಡಿದೆ. ಲೋಕೇಶ್ ಕನಗರಾಜ್ ಮೈತ್ರಿ ಮೂವೀಸ್‌ಗಾಗಿ ದ್ವಿಭಾಷೆ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

ಮೈತ್ರಿ ಮೂವೀಸ್‌ಗಾಗಿ ದ್ವಿಭಾಷೆ ಸಿನಿಮಾ

ಮೈತ್ರಿ ಮೂವೀಸ್‌ಗಾಗಿ ದ್ವಿಭಾಷೆ ಸಿನಿಮಾ

2016 ರ 'ಅವಿಯಲ್' ಸಿನಿಮಾದಿಂದ ನಿರ್ದೇಶನ ಆರಂಭಿಸಿದ ಲೋಕೇಶ್, ಕಾರ್ತಿ ನಟಿಸಿದ ತಮಿಳಿನ 'ಖೈದಿ' ಸಿನಿಮಾ ಹಾಗೂ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಮೈತ್ರಿ ಮೂವೀಸ್‌ಗಾಗಿ ದ್ವಿಭಾಷೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

Recommended Video

ಪ್ರೀತಿಯ ಮಗಳ ಕ್ಯೂಟ್ ವಿಡಿಯೋ ಶೇರ್ ಮಾಡಿದ Radhika Pandit | Filmibeat Kannada
ಸಂಸ್ಥೆಯ ಬಳಿ ನಾಯಕರ ಡೇಟ್ಸ್ ಇವೆ

ಸಂಸ್ಥೆಯ ಬಳಿ ನಾಯಕರ ಡೇಟ್ಸ್ ಇವೆ

ಲೋಕೇಶ್ ಕನಗರಾಜ್ ಬಳಿ ಕತೆ ಈಗಾಗಲೇ ರೆಡಿ ಇದೆ. ಆದರೆ ನಾಯಕ ಅಂತಿಮವಾಗಿಲ್ಲ. ಮೈತ್ರಿ ಮೂವೀಸ್ ಬಳಿ ಈಗಾಗಲೇ ಕೆಲವು ಸೂಪರ್ ಸ್ಟಾರ್ ನಟರ ಡೆಟ್ಸ್‌ಗಳಿವೆ. ಅವುಗಳಲ್ಲಿ ಯಾರಿಗಾದರೂ ಒಬ್ಬರಿಗೆ ಲೋಕೇಶ್ ಕನಗರಾಜನ್ ನಿರ್ದೇಶನ ಮಾಡಲಿದ್ದಾರೆ.

More from Filmibeat

English summary
Mythri movie makers offered 5 crore rs to Tamil movie director Lokesh Kanagaraj to direct a bilingual movie for them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X