ಪುಷ್ಪ 2 ಅಪ್‌ಡೇಟ್‌ ದಿನಾಂಕ ಘೋಷಿಸಿದ ಚಿತ್ರತಂಡ; ಅಪ್‌ಡೇಟ್ ಇದೇ ಇರಬಹುದಾ?

2021ರ ಡಿಸೆಂಬರ್ 17ರಂದು ಬಿಡುಗಡೆಗೊಂಡಿದ್ದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಶನ್‌ನ ಮೊದಲ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ದ ರೈಸ್ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿ ಆ ವರ್ಷ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಂಡಿತು.

ಹೀಗೆ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಪುಷ್ಪ ದ ರೈಸ್ ಚಿತ್ರದ ಮುಂದುವರಿದ ಭಾಗ ಪುಷ್ಪ ದ ರೂಲ್‌ಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾಯುತ್ತಿದ್ದಾರೆ. ಮೊದಲ ಭಾಗದಲ್ಲಿ ಸಾಮಾನ್ಯ ಕೂಲಿಯಾಳಾಗಿದ್ದ ನಾಯಕ ಪುಷ್ಪ ಯಾವ ರೀತಿ ರಕ್ತಚಂದನವನ್ನು ಕಳ್ಳ ಸಾಗಣೆ ಮಾಡಿ ಸಿಂಡಿಕೇಟ್‌ನ ಪ್ರಭಾವಿಯಾಗಿ ಬೆಳೆದ ಎಂಬುದನ್ನು ತೋರಿಸಲಾಗಿತ್ತು. ತನ್ನ ಎದುರಾಳಿಗಳನ್ನೆಲ್ಲಾ ಅಂಜದೇ ಎದುರು ಹಾಕಿಕೊಳ್ಳುತ್ತಿದ್ದ ಪುಷ್ಪ ಎಸ್‌ಪಿ ಭನ್ವರ್ ಸಿಂಗ್ ಶೆಖಾವತ್ ಕಂಡರೆ ಗಪ್‌ಚುಪ್ ಆಗಿಬಿಡ್ತಿದ್ದ.

Mytri Movie Makers announced the update date of Pushpa the rule movie

ಹೀಗೆ ಎಸ್‌ಪಿ ಭನ್ವರ್ ಸಿಂಗ್ ಶೆಖಾವತ್ ಮುಂದೆ ಕುನ್ನಿಯಂತೆ ಹೇಳಿದ ಮಾತನ್ನು ಕೇಳಿಕೊಂಡಿದ್ದ ಪುಷ್ಪ ಕ್ಲೈಮ್ಯಾಕ್ಸ್‌ನಲ್ಲಿ ತನ್ನ ಅಸಲಿ ಮುಖವನ್ನು ಆತನಿಗೆ ಪರಿಚಯಿಸಿದ್ದ. ಎಸ್‌ಪಿ ಭನ್ವರ್ ಸಿಂಗ್ ಶೆಖಾವತ್‌ಗೆ ಅವಾಜ್ ಹಾಕಿದ ಪುಷ್ಪ ತೊಡೆ ತಟ್ಟಿ ತನ್ನದೇ ಮದುವೆಗೆ ಬರಿಮೈನಲ್ಲಿ ಆಗಮಿಸಿ ರಗಡ್ ಆಗಿ ಯಾರೇ ಬಂದರೂ ನನ್ನನ್ನು ತಡೆಯೋಕೆ ಆಗಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದ.

ಹೀಗೆ ಮೊದಲ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ಎಸ್‌ಪಿ ಭನ್ವರ್ ಸಿಂಗ್ ಶೆಖಾವತ್ ಹಾಗೂ ಪುಷ್ಪ ನಡುವೆ ವೈರತ್ವ ಬೆಳೆದ ನಂತರ ಏನಾಗಲಿದೆ, ಇಬ್ಬರ ಹೋರಾಟದಲ್ಲಿ ಯಾರು ಗೆಲ್ತಾರೆ, ಕಥೆಗೆ ಇನ್ನೂ ಯಾರಾರು ಆಗಮಿಸುತ್ತಾರೆ ಎಂಬ ಪ್ರಶ್ನೆ ಹಾಗೂ ಕುತೂಹಲ ಸಿನಿ ರಸಿಕರಲ್ಲಿ ಮೂಡಿದೆ. ಇನ್ನು ಚಿತ್ರತಂಡ ಚಿತ್ರದ ಎರಡನೇ ಭಾಗ ಪುಷ್ಪ ದ ರೈಸ್‌ನ ಚಿತ್ರೀಕರಣವನ್ನು ನಡೆಸುತ್ತಿದ್ದು, ಇಲ್ಲಿಯವರೆಗೂ ಚಿತ್ರದ ಕುರಿತಾದ ಯಾವುದೇ ಅಪ್‌ಡೇಟ್ ಅನ್ನೂ ನೀಡಿಲ್ಲ.

ಆದರೆ ಈಗ ಚಿತ್ರತಂಡ ಅಪ್‌ಡೇಟ್ ನೀಡಲು ಮುಂದಾಗಿದ್ದು, ಇಂದು ( ಏಪ್ರಿಲ್ 4 ) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಪ್‌ಡೇಟ್ ದಿನಾಂಕವನ್ನು ಘೋಷಿಸಿದೆ. ನಾಳೆ ( ಏಪ್ರಿಲ್ 5 ) ಬೆಳಗ್ಗೆ 11.07ಕ್ಕೆ ಪುಷ್ಪ ದ ರೈಸ್ ಚಿತ್ರದ ಅಪ್‌ಡೇಟ್ ನೀಡಲಿದ್ದೇವೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಪೋಸ್ಟರ್ ಬಿಡುಗಡೆ ಮಾಡಿದೆ.

ಹೀಗೆ ಚಿತ್ರತಂಡ ಅಪ್‌ಡೇಟ್ ದಿನಾಂಕದ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆಯೇ ಯಾವ ಕುರಿತಾದ ಅಪ್‌ಡೇಟ್‌ ಇರಬಹುದು ಎಂಬ ಊಹೆಯಲ್ಲಿ ಸಿನಿ ರಸಿಕರು ಇದ್ದು, ಹಲವು ಸುದ್ದಿಗಳು ಈ ಕುರಿತು ಹರಿದಾಡುತ್ತಿವೆ. ಇನ್ನು ನಾಳೆ ( ಏಪ್ರಿಲ್ 5 ) ಪುಷ್ಪ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬವಿರುವ ಕಾರಣ ರಶ್ಮಿಕಾಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಪೋಸ್ಟರ್ ಬಿಡುಗಡೆ ಮಾಡಬಹುದು ಎಂದು ಕೆಲವರು ಊಹಿಸಿದ್ದರೆ,

ಇನ್ನೂ ಕೆಲವರು ಇದೇ ಏಪ್ರಿಲ್ 8ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಿದ್ದು, ಸ್ಟೈಲಿಷ್ ಸ್ಟಾರ್ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷ ಟೀಸರ್ ಬಿಡುಗಡೆ ಮಾಡಬಹುದು, ಆ ಟೀಸರ್‌ನ ದಿನಾಂಕ ಹಾಗೂ ಸಮಯವನ್ನು ಪ್ರಕಟಿಸುವ ಘೋಷಣೆ ಇದಾಗಿರಬಹುದು ಎಂದು ಊಹಿಸಿದ್ದಾರೆ. ಹೀಗೆ ಕುತೂಹಲ ಹುಟ್ಟಿಸಿರುವ ಈ ಅಪ್‌ಡೇಟ್ ಯಾವ ಅಂಶದ ಮೇಲಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Mytri Movie Makers announced the update date of Pushpa the rule movie. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X