For Quick Alerts
  ALLOW NOTIFICATIONS  
  For Daily Alerts

  'ದಿ ವಾರಿಯರ್' ಸಿನಿಮಾವನ್ನು ತಿರಸ್ಕರಿಸಿದ್ದ ಜೂ.ಎನ್‌ಟಿಆರ್-ಅಲ್ಲು ಅರ್ಜುನ್!

  |

  ಲಿಂಗುಸಾಮಿ ನಿರ್ದೇಶನದ ಸಿನಿಮಾ 'ದಿ ವಾರಿಯರ್' ಇದೇ ವಾರ ಬಿಡುಗಡೆಯಾಗಿದೆ. ಆಂಧ್ರ-ತೆಲಂಗಾಣದಲ್ಲಿ ಈ ಸಿನಿಮಾಗೆ ಉತ್ತಮ ಗಳಿಕೆ ಕಂಡಿದೆ. ರಾಮ್‌ ಪೋಥಿನೇನಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲಿಂಗುಸಾಮಿ ಹಾಗೂ ರಾಮ್ ಪೋಥಿನೇನಿ ಕಾಂಬಿನೇಷನ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  ಮೊದಲ ದಿನವೇ 'ದಿ ವಾರಿಯರ್' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬಾಕ್ಸಾಫೀಸ್ ಕಲೆಕ್ಷನ್ ಉತ್ತಮವಾಗಿದೆ ಎಂದು ಟಾಲಿವುಡ್‌ ಹೇಳುತ್ತಿದೆ. ಪಕ್ಕಾ ಮಾಸ್ ಸಿನಿಮಾಗೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದ್ರೀಗ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

  ದಿ ವಾರಿಯರ್ ಕೈ ಬಿಟ್ಟಿದ್ದ ಜೂ.ಎನ್‌ಟಿಆರ್-ಅಲ್ಲು ಅರ್ಜುನ್

  'ದಿ ವಾರಿಯರ್' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದ್ದರೆ, ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಲಿಂಗುಸಾಮಿ ಈ ಕಥೆಯನ್ನು ಮೊದಲ ಟಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಿಗೆ ಹೇಳಿದ್ದರಂತೆ. ಜೂ.ಎನ್‌ಟಿಆರ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಮೊದಲ ಈ ಸಿನಿಮಾದ ಕಥೆಯನ್ನು ಒಪ್ಪಿಸಿದ್ದರು. ಆದರೆ, ಇಬ್ಬರೂ ಈ ಸಿನಿಮಾವನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.

  ಜೂ.ಎನ್‌ಟಿಆರ್ ಈಗಾಗಲೇ ಇಂತಹದ್ದೇ ಕಥೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಅಲ್ಲು ಅರ್ಜುನ್ 'ಪುಷ್ಪ' ರೇಂಜ್‌ನಲ್ಲಿ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಈ ಕಾರಣಕ್ಕೆ ಇಬ್ಬರೂ 'ದಿ ವಾರಿಯರ್' ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

  ಎರಡೇ ದಿನಕ್ಕೆ 10 ಕೋಟಿ ರೂ. ಶೇರ್

  ಲಿಂಗುಸಾಮಿ ನಿರ್ದೇಶಿಸಿದ 'ದಿ ವಾರಿಯರ್' ಸಿನಿಮಾ ಎರಡೇ ದಿನಕ್ಕೆ ಸುಮಾರು 10.65 ಕೋಟಿ ರೂ. ಯಷ್ಟು ಶೇರ್ ನಿರ್ಮಾಪಕರಿಗೆ ಸೇರಿದೆ ಎನ್ನಲಾಗಿದೆ. ವಿಶ್ವದಾದ್ಯಂತ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಸಿನಿಮಾಗೆ ಹಾಕಿದ 70 ಕೋಟಿ ಬಜೆಟ್ ಒಂದೇ ವಾರದಲ್ಲಿ ಮರಳಿ ಬರುತ್ತೆ ಎಂದು ಟಾಲಿವುಡ್ ಮಾತಾಡುತ್ತಿದೆ.

  N Lingusamy Directed The Warriorr Movie Rejected By Jr NTR and Allu Arjun

  ರಾಮ್ ಪೋಥಿನೇನಿ ಜೊತೆ ಕ್ರಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಅಕ್ಷರ ಗೌಡ, ನಾಧಿಯಾ, ಸೇರಿದಂತೆ ಹಲವರು ನಟಿಸಿದ್ದಾರೆ. ದೇವಿ ಶ್ರೀ ಪ್ರಸಾದ್ ಈ ಸಿನಿಮಾಗೆ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.

  ರಾಮ್ ಪೋಥಿನೇನಿ 'ದಿ ವಾರಿಯರ್' ಬಳಿಕ ಬೋಯಾಪಟಿ ಶ್ರೀನು ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಕೃಷ್ಣ ಅಭಿನಯದ 'ಅಖಂಡ' ಸಿನಿಮಾವನ್ನು ಬೋಯಾಪಟಿ ಶ್ರೀನು ನಿರ್ದೇಶಿಸಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 150 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು.

  English summary
  N Lingusamy Directed The Warriorr Movie Rejected By Jr NTR and Allu Arjun, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X