For Quick Alerts
  ALLOW NOTIFICATIONS  
  For Daily Alerts

  ನಟ ನಾಗ ಚೈತನ್ಯಗೆ ಜೋಡಿಯಾದ ಮತ್ತೋರ್ವ ಕನ್ನಡತಿ: 'Thank You' ಎಂದ ನಟಿ ಯಾರು?

  |

  ಟಾಲಿವುಡ್‌ನಲ್ಲಿ ಕನ್ನಡ ನಟಿಯರದ್ದೇ ಹವಾ. ತೆಲುಗು ಚಿತ್ರರಂಗದಲ್ಲಿ ಕನ್ನಡದ ಅನೇಕ ನಟಿಮಣಿಯರು ಮಿಂಚುತ್ತಿದ್ದಾರೆ. ಇದೀಗ ತೆಲುಗು ಸ್ಟಾರ್ ನಟ ನಾಗ ಚೈತನ್ಯ ಹೊಸ ಸಿನಿಮಾಗೆ ಕನ್ನಡದ ಮತ್ತೋರ್ವ ನಟಿ ನಾಯಕಿಯಾಗಿ ಆಯ್ಕೆ ಯಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಅದು ಮತ್ಯಾರು ಅಲ್ಲ ನಟಿ ನಭಾ ನಟೇಶ್. ಟಾಲಿವುಡ್ ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ನಭಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಾಗ ಚೈತನ್ಯ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಗ ಚೈತನ್ಯ ನಟನೆಯ 'ಥ್ಯಾಂಕ್ಯು' ಸಿನಿಮಾಗೆ ನಭಾ ನಾಯಕಿ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

  ಅಮೀರ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತೆಲುಗಿನ ಯುವ ನಟಅಮೀರ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತೆಲುಗಿನ ಯುವ ನಟ

  'ಥ್ಯಾಂಕ್ಯು' ಚಿತ್ರಕ್ಕೆ ವಿಕ್ರಮ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮನಂ, ಹೆಲೋ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿಕ್ರಮ್ ಕುಮಾರ್ ಥ್ಯಾಂಕ್ಯು ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಸಿನಿಮಾ ಇದಾಗಿದ್ದು, ನಾಗ ಚೈತನ್ಯ ಮತ್ತು ನಭಾ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ.

  ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜ್ ಬಂಡವಾಳ ಹೂಡುತ್ತಿದ್ದಾರೆ. ಎಸ್ ಎಸ್ ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾತಂಡ ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡಲಿದೆ.

  ನಟ ನಾಗ ಚೈತನ್ಯ ಸದ್ಯ ಲವ್ ಸ್ಟೋರಿ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಹಾಡುಗಳು ಮತ್ತು ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಲವ್ ಸ್ಟೋರಿ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ಗೋವಾದಲ್ಲಿ ಸೊನಾಲ್ ಜೊತೆ ಡಾರ್ಲಿಂಗ್ ಕೃಷ್ಣ ಫುಲ್ ಬ್ಯುಸಿ | Filmibeat Kannada

  ಇನ್ನು ನಭಾ ನಟೇಶ್ ಹಿಂದಿಯ ಸೂಪರ್ ಹಿಟ್ ಅಂಧಾಧುನ್ ತೆಲುಗು ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ನಟ ನಿತಿನ್‌ಗೆ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಸಿನಿಮಾ ಬಳಿಕ ತೆಲುಗಿನಲ್ಲಿ ನಭಾ ಲಕ್ಕೇ ಬದಲಾಗಿದೆ. ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

  English summary
  Kannada Actress Nabha Natesh likely to playing leading lady opposite Naga Chaitanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X