For Quick Alerts
  ALLOW NOTIFICATIONS  
  For Daily Alerts

  ಮಂಚು ಮನೋಜ್ ಚಿತ್ರಕ್ಕೆ ಕನ್ನಡತಿ ನಭಾ ನಟೇಶ್ ಹೀರೋಯಿನ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಮತ್ತು ಮನೋರಂಜನ್ ರವಿಚಂದ್ರನ್ ನಟನೆಯ 'ಸಾಹೇಬ' ಚಿತ್ರಗಳಲ್ಲಿ ನಟಿಸಿದ ಸುಂದರಿ ನಭಾ ನಟೇಶ್.

  ಕನ್ನಡದಲ್ಲಿ ಎರಡ್ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡ ಮೇಲೆ ತೆಲುಗು ಸಿನಿ ಅಂಗಳದ ಕಡೆ ಮುಖ ಮಾಡಿದ ನಭಾ ನಟೇಶ್ ಗೆ ಈಗ ಅದೃಷ್ಟ ಖುಲಾಯಿಸಿದೆ. ನಭಾ ನಟೇಶ್ ರವರ ಮೊದಲ ತೆಲುಗು ಸಿನಿಮಾ 'ನನ್ನು ದೋಚುಕುಂಡುವಟೆ' ಅಷ್ಟೇನು ಸಕ್ಸಸ್ ಕಾಣಲಿಲ್ಲ. ಆದ್ರೆ, ಎರಡನೇ ಚಿತ್ರ 'ಇಸ್ಮಾರ್ಟ್ ಶಂಕರ್' ಹಿಟ್ ಆಯ್ತು. ಇಲ್ಲಿಂದ ನಭಾ ನಟೇಶ್ ಲಕ್ ಚೇಂಜ್ ಆಯ್ತು.

  ನಭಾ ನಟೇಶ್ ಗೆ ಟಾಲಿವುಡ್ ನಲ್ಲಿ ಆಫರ್ ಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ಟಾಲಿವುಡ್ ನ ಹಿರಿಯ ನಟ ಮೋಹನ್ ಬಾಬು ಪುತ್ರ ಮಂಚು ಮನೋಜ್ ಚಿತ್ರದಲ್ಲಿ ನಾಯಕಿ ಆಗುವ ಅವಕಾಶ ನಭಾ ನಟೇಶ್ ಗೆ ಸಿಕ್ಕಿದೆ.

  ತೆಲುಗು ಸಿನಿಮಾ ಹಿಟ್ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ನಭಾ ನಟೇಶ್ತೆಲುಗು ಸಿನಿಮಾ ಹಿಟ್ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ನಭಾ ನಟೇಶ್

  ತೆಲುಗು ನಟ ಮಂಚು ಮನೋಜ್ 'ಎಂ.ಎಂ.ಆರ್ಟ್ಸ್' ಎಂಬ ಸ್ವಂತ ಬ್ಯಾನರ್ ಆರಂಭಿಸಿದ್ದಾರೆ. ಆ ಮೂಲಕ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಮಂಚು ಮನೋಜ್ ತಮ್ಮ ಹೊಸ ಚಿತ್ರಕ್ಕೆ ನಾಯಕಿ ಆಗುವ ಅವಕಾಶವನ್ನು ನಭಾ ನಟೇಶ್ ಗೆ ಕೊಟ್ಟಿದ್ದಾರೆ.

  ಎರಡು ವರ್ಷಗಳಿಂದ ಸತತ ಫ್ಲಾಪ್ ಗಳನ್ನೇ ಕೊಟ್ಟಿದ್ದ ಮಂಚು ಮನೋಜ್ ಇದೀಗ ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ಪತ್ನಿಗೆ ವಿಚ್ಛೇದನ ಕೊಟ್ಟಿರುವ ಮಂಚು ಮನೋಜ್ ಇನ್ಮೇಲೆ ಸಿನಿಮಾ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿಕೊಳ್ಳುತ್ತೇನೆ ಅಂತ ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಚಿತ್ರ ನಿರ್ಮಾಣ ಮಾಡಲು ಹೊರಟಿದ್ದಾರೆ.

  ದುಬಾರಿ ಕಾರು ಖರೀದಿಸಿದ 'ಪಟಾಕ' ನಭಾ ನಟೇಶ್ದುಬಾರಿ ಕಾರು ಖರೀದಿಸಿದ 'ಪಟಾಕ' ನಭಾ ನಟೇಶ್

  ಸದ್ಯಕ್ಕೆ ಮಂಚು ಮನೋಜ್ ನಿರ್ಮಾಣದ ಚಿತ್ರದಲ್ಲಿ ನಭಾ ನಟೇಶ್ ಹೀರೋಯಿನ್ ಎಂಬಷ್ಟೇ ಮಾಹಿತಿ ಲಭಿಸಿದೆ. ಚಿತ್ರದ ನಿರ್ದೇಶಕರು ಯಾರು.? ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕ ಕೂಡಲೆ ನಾವು ನಿಮಗೆ ಅಪ್ ಡೇಟ್ ಮಾಡ್ತೀವಿ.

  English summary
  Kannada Actress Nabha Natesh Nabha Natesh to act in Manchu Manoj Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X