For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿಮಾನಿಗಳಿಗೆ ಬೇಸರದ ಸುದ್ದಿ

  |

  ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ಬಹುನಿರೀಕ್ಷೆಯ ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದರು. ಸಾರಂಗ ದರಿಯಾ ಹಾಡಿನ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಾಯಿ ಪಲ್ಲವಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಸಾಯಿ ಪಲ್ಲವಿ ಡಾನ್ಸ್ ಗಾಗಿ ಕಾದು ಕುಳಿತಿದ್ದರು.

  ಇನ್ನೇನು ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರ್ತಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ 'ಲವ್ ಸ್ಟೋರಿ' ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿನಿಮಾತಂಡದ ಈ ನಿರ್ಧಾರ ಭಾರಿ ನಿರಾಸೆ ಮೂಡಿಸಿದೆ.

  ತೆಲುಗು ನಟನ ಜೊತೆಗೆ ಸಾಯಿ ಪಲ್ಲವಿ ಮದುವೆ!? ಹಿರಿಯ ನಟ ಹೇಳಿದ್ದು ಹೀಗೆತೆಲುಗು ನಟನ ಜೊತೆಗೆ ಸಾಯಿ ಪಲ್ಲವಿ ಮದುವೆ!? ಹಿರಿಯ ನಟ ಹೇಳಿದ್ದು ಹೀಗೆ

  ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ ಎಂದು ನಿರ್ದೇಶಕ ಶೇಖರ್ ಕಮ್ಮುಲ ಮಾಹಿತಿ ನೀಡಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ, ನಾವು ಕೂಡ ಉತ್ಸುಕರಾಗಿದ್ದೇವೆ ಆದರೀಗ ದೇಶದಾದ್ಯಂತ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಸಿನಿಮಾ ಮುಂದೂಡಿರುವುದಾಗಿ ಹೇಳಿದ್ದಾರೆ.

  ಅಂದಹಾಗೆ ಲವ್ ಸ್ಟೋರಿ ಸಿನಿಮಾ ಇದೇ ತಿಂಗಳು 16ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಆದರೀಗ ಮುಂದಕ್ಕೆ ಹೋಗಿದ್ದು ಹೊಸ ಬಿಡುಗಡೆ ದಿನಾಂಕ ಇನ್ನು ಬಹಿರಂಗವಾಗಿಲ್ಲ. ಕೊರೊನಾ ಪರಿಸ್ಥಿತಿ ನೋಡಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಗ ಚೈತನ್ಯ, 'ಕಳೆದ ಕೆಲವು ದಿನಗಳಿಂದ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ಸಿನಿಮಾ ಬಿಡುಗಡೆ ಮಾಡುವುದು ಈಗ ಸರಿಯಾದ ಸಮಯವಲ್ಲ. ಚಿತ್ರವನ್ನು ತಡವಾಗಿ ಬಿಡುಗಡೆ ಮಾಡುತ್ತೇವೆ' ಎಂದಿದ್ದಾರೆ.

  ಚಿತ್ರದಲ್ಲಿ ನಾಗ ಚೈತನ್ಯ ರೇವಂತ್ ಎನ್ನುವ ಪಾತ್ರದಲ್ಲಿ ಮಿಂಚಿದ್ದಾರೆ. ಸಾಯಿ ಪಲ್ಲವಿ ಮೌನಿಕಾ ಪಾತ್ರದಲ್ಲಿ ನಟಿಸಿದ್ದಾರೆ. ರೇವಂತ್ ಮತ್ತು ಮೌನಿಕಾ ಲವ್ ಸ್ಟೋರಿ ನೋಡಲು ಚಿತ್ರಾಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಕುತೂಹಲ ಹೆಚ್ಚಿಸಿರುವ ಲವ್ ಸ್ಟೋರಿ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾದು ನೋಡಬೇಕು.

  English summary
  Nag Chaitanya and Sai Pallavi starrer Love Story movie release date postponed due to corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X