ನಾಗಚೈತನ್ಯ-ಸಾಯಿ ಪಲ್ಲವಿ 'ಲವ್ ಸ್ಟೋರಿ' ಮೊದಲ ದಿನ ಗಳಿಸಿದ್ದೆಷ್ಟು?
ಕೊರೊನಾ ವೈರಸ್ ಭೀತಿಯಿಂದಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವ ಈ ಸಮಯದಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಥಿಯೇಟರ್‌ಗೆ ಬಂದಿದೆ.
ಸೆಪ್ಟೆಂಬರ್ 24 ರಂದು ಲವ್ ಸ್ಟೋರಿ ಚಿತ್ರ ವರ್ಲ್ಡ್‌ವೈಡ್ ತೆರೆಕಂಡಿದೆ. ಭಾರಿ ನಿರೀಕ್ಷೆಯೊಂದಿಗೆ ಪ್ರೇಕ್ಷಕರೆದುರು ಬಂದ ಈ ಚಿತ್ರಕ್ಕೆ ಮೊದಲ ದಿನ ಒಳ್ಳೆಯ ಪ್ರತಿಕ್ರಿ ಸಿಕ್ಕಿದೆ. ಅದಕ್ಕೆ ತಕ್ಕಂತೆ ಸ್ವಾಗತವೂ ಸಿಕ್ಕಿದೆ. ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಮತ್ತೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಹಜವಾಗಿ ಲವ್ ಸ್ಟೋರಿಗೆ ಪಾಸಿಟಿವ್ ಆಗಿ ಪರಿಣಮಿಸಿದೆ.
ಅಂದ್ಹಾಗೆ, ಲವ್ ಸ್ಟೋರಿ ಸಿನಿಮಾ ಮೊದಲ ದಿನ ವರ್ಲ್ಡ್‌ವೈಡ್ 16.73 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಈ ಕುರಿತು ದಕ್ಷಿಣದ ಖ್ಯಾತ ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿ, 'ಲವ್ ಸ್ಟೋರಿ ಸಿನಿಮಾ ಮೊದಲ ದಿನ 16 ಕೋಟಿ ಗಳಿಸಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಆಂಧ್ರ-ತೆಲಂಗಾಣದಲ್ಲಿ ಎಷ್ಟು?
ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮೊದಲ ದಿನ 10.46 ಕೋಟಿ ಬಾಚಿಕೊಂಡಿದೆ. ಇತರೆ ರಾಜ್ಯಗಳಲ್ಲಿ ಮೊದಲ ದಿನ 92 ಲಕ್ಷ ಗಳಿಸಿದೆ. ಇನ್ನು ವಿಶ್ವದ ಇತರೆ ದೇಶಗಳಲ್ಲಿ ಮೊದಲ ದಿನ 5.35 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಈ ಮೂಲಕ ಒಟ್ಟಾರೆ ಮೊದಲ ದಿನ 16.73 ಕೋಟಿ ಎಂದು ಅಂದಾಜಿಸಲಾಗಿದೆ.

ವೃತ್ತಿ ಜೀವನದ ಅತ್ಯುತ್ತಮ ಗಳಿಕೆ
ನಾಗ ಚೈತನ್ಯ ಚಿತ್ರಗಳ ಪೈಕಿ ಮೊದಲ ದಿನ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರ ಯಾವುದು?
- ಲವ್ ಸ್ಟೋರಿ: 10.46 ಕೋಟಿ
- ಮಜಿಲಿ: 5.6 ಕೋಟಿ
- ಸವ್ಯಾ ಸಾಚಿ: 3.29 ಕೋಟಿ
- ಶೈಲಜಾ ರೆಡ್ಡಿ ಅಲ್ಲುಡು: 6.93 ಕೋಟಿ
- ಯುದ್ಧಂ ಶರಣಂ: 1.86 ಕೋಟಿ
- ರಾರಂಡೋಯಿ ವೇಡುಕ ಚೂಡ್ದಾಂ: 4.2 ಕೋಟಿ

1000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ
ವಿಶೇಷ ಅಂದ್ರೆ ನಾಗಚೈತನ್ಯ ವೃತ್ತಿ ಜೀವನದಲ್ಲಿ ಲವ್ ಸ್ಟೋರಿ ಸಿನಿಮಾ ಮೊದಲ ದಿನ ಅತ್ಯುತ್ತಮ ಗಳಿಕೆ ಕಂಡ ಚಿತ್ರವಾಗಿದೆ. ಇನ್ನು ಎರಡನೇ ಲಾಕ್‌ಡೌನ್ ಬಳಿಕ ದೇಶದಲ್ಲಿ ತೆರೆಕಂಡ ಚಿತ್ರಗಳ ಪೈಕಿಯೂ ಲವ್ ಸ್ಟೋರಿ ದಾಖಲೆಯ ಹಣ ಕಲೆಕ್ಷನ್ ಮಾಡಿದೆ. ವರದಿಗಳ ಪ್ರಕಾರ ಆಂಧ್ರ ಮತ್ತು ತೆಲಂಗಾಣದಲ್ಲಿ 700ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಇನ್ನು ವರ್ಲ್ಡ್‌ವೈಡ್ 1000ಕ್ಕೂ ಅಧಿಕ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರಿ-ರಿಲೀಸ್ ಬಿಸಿನೆಸ್‌ನಲ್ಲಿ ಲವ್ ಸ್ಟೋರಿ ಸಿನಿಮಾ 26 ಕೋಟಿ ಬಾಚಿಕೊಂಡಿದೆಯಂತೆ.
ಇನ್ನು ಶೇಖರ್ ಕಮ್ಮುಲ ಈ ಚಿತ್ರ ನಿರ್ದೇಶಿಸಿದ್ದು, ನಾರಾಯಣ್ ದಾಸ್ ಕೆ ನಾರಂಗ್, ಪುಷ್ಕರ್ ರಾಮ್ ಮೋಹನ್ ರಾವ್ ಜಂಟಿಯಾಗಿ ನಿರ್ಮಿಸಿದ್ದಾರೆ. ನಾಗಚೈತನ್ಯ, ಸಾಯಿ ಪಲ್ಲವಿ ಜೊತೆ ದೇವಯಾನಿ, ರಾವ್ ರಮೇಶ್, ಪೋಸನಿ ಕೃಷ್ಣ ಮುರಳಿ, ರಾಜೀವ್ ಕನಕಾಲ. ಈಶ್ವರಿ ರಾವ್ ಸೇರಿದಂತೆ ಹಲವರು ನಟಿಸಿದ್ದಾರೆ.

ಕನ್ನಡ ಫಿಲ್ಮಿಬೀಟ್ ಸಹ ವಿಮರ್ಶೆ
ಶೇಖರ್ ಕಮ್ಮುಲರ ಹಿಂದಿನ ಸಿನಿಮಾಗಳನ್ನು ಗಮನಿಸಿದರೆ ಕೆತಗಳ ಮೂಲಕ ಮನಸ್ಸು ಮುಟ್ಟುವ ಪ್ರಯತ್ನಗಳನ್ನೇ ಅವರು ಮಾಡಿದ್ದಾರೆ, ಆದರೆ 'ಲವ್ ಸ್ಟೋರಿ' ಸಿನಿಮಾದಲ್ಲಿ ತುಸು ಗಟ್ಟಿಯಾದ ವಿಷಯವನ್ನು ಆರಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ಕೆಲವು ಸಂಭಾಷಣೆಗಳಂತೂ ತುಳಿತಕ್ಕೊಳಗಾದವರ ಎದೆಯಲ್ಲಿ ಕೆಚ್ಚು ಮೂಡುವಂತೆಯೂ, ಅಸ್ಪೃಶ್ಯತೆ ಆಚರಿಸುವವರ ಎದೆಗೆ ಮುಳ್ಳು ಚುಚ್ಚುವಂತೆಯೂ ಇವೆ. ''ದೇವಸ್ಥಾನ ಅವರದ್ದು, ಊರು ಅವರದ್ದು, ಕೊನೆಗೆ ಸ್ಮಶಾನವೂ ಅವರದ್ದು, ಬದುಕಿದ್ದಾಗ ನಾವು ಎಲ್ಲಿರಬೇಕು, ಹೇಗಿರಬೇಕು ಎಂದು ಅವರು ಹೇಳುತ್ತಾರೆ ಸತ್ತಮೇಲೆ ನಾವು ಎಲ್ಲಿರಬೇಕೆಂದೂ ಅವರೇ ನಿರ್ಧರಿಸುತ್ತಾರಾ?'' ಇಂಥಹಾ ಕೆಲವು ಜಾತಿ ಪದ್ಧತಿ ಪ್ರಶ್ನಿಸುವ ಸಾಲುಗಳು ಸಿನಿಮಾದಲ್ಲಿವೆ.
ಪೂರ್ತಿ ವಿಮರ್ಶೆ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Click it and Unblock the Notifications











