ಫೋಟೋಗಳು: ಮಾಲ್ಡೀವ್ಸ್ ಪ್ರವಾಸ ಮುಗಿಸಿ ವಾಪಸ್ ಆದ ನಾಗಚೈತನ್ಯ ಮತ್ತು ಸಮಂತಾ
ತೆಲುಗು ಸಿನಿಮಾರಂಗದ ಕ್ಯೂಟ್ ಕಪಲ್ ನಾಗಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಮಾಲ್ಡೀವ್ಸ್ ಪ್ರವಾಸ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮಲ್ಡೀವ್ಸ್ ಪ್ರವಾಸದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸಮಂತಾ ಮಾಲ್ಡೀವ್ಸ್ ಪ್ರವಾಸದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದರು. ಲಾಕ್ ಡೌನ್ ಕಾರಣ ಅನೇಕ ತಿಂಗಳಿಂದ ಮನೆಯಲ್ಲೇ ಕುಳಿತು ಕಾಲಕಳೆದಿದ್ದ ಸಮಂತಾ ಪತಿಯ ಜೊತೆ ವಿದೇಶ ಪ್ರವಾಸಕ್ಕೆ ಹೋಗಿ ಸಖತ್ ಎಂಜಾಯ್ ಮಾಡಿ ಬಂದಿದ್ದಾರೆ. ಹೌದು ಇಬ್ಬರು ಟ್ರಿಪ್ ಎಂಜಾಯ್ ಮಾಡಿ ಹೈದರಾಬಾದ್ ಗೆ ವಾಪಸ್ ಆಗಿದ್ದಾರೆ. ಮುಂದೆ ಓದಿ..

ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಸಮಂತಾ ದಂಪತಿ
ನಾಗಚೈತನ್ಯ ಜೊತೆ ಸಮಂತಾ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಾಲ್ಡೀವ್ಸ್ ಗೆ ತೆರಳಿದ್ದ ಸಮಂತಾ ಅಲ್ಲಿಂದ ಸಿಕ್ಕಾಪಟ್ಟೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಕಿನಿಯಲ್ಲಿ ಮಿಂಚಿದ್ದ ನಾಗಚೈತನ್ಯ ಪತ್ನಿ
ಸಮಂತಾ ಸುಂದರ ಫೋಟೋಗಳು ಅಭಿಮಾನಿಗಳ ನಿದ್ದೆಗೆಡಿಸಿತ್ತು. ಇತ್ತೀಚಿಗೆ ಬಿಳಿ ಬಣ್ಣದ ಬಿಕಿನಿ ತೊಟ್ಟು ಮಾಲ್ಡೀವ್ಸ್ ಬೀಚ್ ನಿಂದ ನಡೆದುಕೊಂಡು ಬರುತ್ತಿರುವ ಸಮಂತಾ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಕಡಲ ತೀರದಲ್ಲಿ ಸಖತ್ ಹಾಟ್ ಆದ ಸಮಂತಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಮಂತಾ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬಂದಿವೆ.

ಸ್ಯಾಮ್ ಜಾಮ್ ಟಾಕ್ ಶೋನಲ್ಲಿ ಸಮಂತಾ
ಸಮಂತಾ ಸದ್ಯ ಸ್ಯಾಮ್ ಜಾಮ್ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಟಾಲಿವುಡ್ ನ ಸ್ಟಾರ್ ಕಲಾವಿದರು ಭಾಗಿಯಾಗಿದ್ದಾರೆ. ಚಿರಂಜೀವಿ, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ತಮನ್ನಾ, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
Recommended Video

ಸಮಂತಾ ಸಿನಿಮಾಗಳು
ಇದೀಗ ಪ್ರವಾಸ ಮುಗಿಸಿ ವಾಪಸ್ ಆಗಿರುವ ಸಮಂತಾ ಮತ್ತೆ ಸ್ಯಾಮ್ ಜಾಮ್ ಟಾಕ್ ಶೋನಲ್ಲಿ ಭಾಗಿಯಾಗಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಘ್ನೇಶ್ ಶಿವನ್ ನಿರ್ದೇಶನದ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲು ಬ್ಯುಸಿಯಾಗಿದ್ದಾರೆ.


Click it and Unblock the Notifications











