ಸದ್ದಿಲ್ಲದೇ ನಡೆಯಿತು ಚೈತು- ಶೋಭಿತಾ ನಿಶ್ಚಿತಾರ್ಥ; ನಾಗಾರ್ಜುನ ಪ್ರತಿಕ್ರಿಯೆ

ಅಂತೆಕಂತೆ ಸುದ್ದಿಗಳೆಲ್ಲಾ ನಿಜವಾಗಿದೆ. ತೆಲುಗು ನಟ ನಾಗಾಚೈತನ್ಯಾ ಹಾಗೂ ನಟಿ ಶೋಬಿತಾ ದುಲಿಪಾಲ ಮದುವೆ ನಿಶ್ಚಯವಾಗಿದೆ. ಸಮಂತಾಗೆ ಡಿವೋರ್ಸ್ ಕೊಟ್ಟ ಬಳಿಕ ಚೈತು ಶೋಭಿತಾ ಜೊತೆ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಎಲ್ಲಾ ಸುಳ್ಳು ಎನ್ನುತ್ತಲೇ ಇದ್ದ ಜೋಡಿ ಇದೀಗ ಉಂಗುರ ಬದಲಿಸಿಕೊಂಡಿದ್ದಾರೆ.

ಸ್ವತಃ ನಾಗಾರ್ಜುನ ಟ್ವೀಟ್ ಮಾಡಿ ಮಗನ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ್ದಾರೆ. ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. "ಇವತ್ತು ಬೆಳಗ್ಗೆ ನನ್ನ ಮಗ ನಾಗಚೈತನ್ಯ ಹಾಗೂ ಶೋಭಿತಾ ದುಲಿಪಾಲ ಎಂಗೇಜ್‌ಮೆಂಟ್ ನಡೆಯಿತು. ಈ ವಿಚಾರವನ್ನು ಹಂಚಿಕೊಳ್ಳಲು ಬಹಳ ಖುಷಿಯಾಗುತ್ತಿದೆ. ಶೋಭಿತಾಳನ್ನು ನಮ್ಮ ಮನೆಗೆ ಸ್ವಾಗತಿಸಲು ಖುಷಿಯಾಗುತ್ತಿದೆ. ಜೋಡಿಗೆ ಶುಭಾಶಯ" ಎಂದು ನಾಗ್ ಟ್ವೀಟ್ ಮಾಡಿದ್ದಾರೆ.

Naga Chaitanya and Sobhita Dhulipala get engaged earlier this morning

8. 8. 8 ಅನಂತ ಪ್ರೀತಿಯ ಆರಂಭ ಎಂದು ನಾಗ್ ಸೇರಿಸಿದ್ದಾರೆ. ಈ ದಿನವನ್ನು ಹಲವರು ಬಹಳ ವಿಶೇಷ ಎಂದು ಭಾವಿಸಿದ್ದಾರೆ. ಇದೇ ದಿನ ಚೈತು-ಶೋಭಿತಾ ಮದುವೆ ನಿಶ್ಚಿತಾರ್ಥ ನಡೆದಿದೆ. ಇತ್ತ ನಟ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮುಹೂರ್ತ ಕೂಡ ಇದೇ ವಿಶೇಷ ದಿನದಂದು ನೆರವೇರಿದೆ.

ಹಿಂದೆ ನಾಗಚೈತನ್ಯಾ ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. 'ಏ ಮಾಯಾ ಚೆಸಾವೆ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಶುರುವಾದ ಪರಿಚಯ, ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಕೊನೆಗೆ ಪೋಷಕರ ಒಪ್ಪಿಗೆ ಪಡೆದು ಜೋಡಿ 2017ರಲ್ಲಿ ಮದುವೆ ಆಗಿದ್ದರು. ಗೋವಾದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಆದರೆ 4 ವರ್ಷಗಳ ಬಳಿಕ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ತಾವಿಬ್ಬರು ದೂರಾಗುತ್ತಿರುವ ಬಗ್ಗೆ ಚೈತು-ಸ್ಯಾಮ್ ಮಾಹಿತಿ ನೀಡಿದ್ದರು. ಬಳಿಕ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಬಳಿಕ ಚೈತನ್ಯಾ ಜೊತೆ ಶೋಬಿತಾ ಹೆಸರು ತಳುಕು ಹಾಕಿಕೊಂಡಿತ್ತು. ವಿದೇಶದಲ್ಲಿ ಇಬ್ಬರೂ ಒಂದು ರೆಸ್ಟೊರೆಂಟ್‌ನಲ್ಲಿ ಒಟ್ಟಿಗೆ ಕುಳಿತಿದ್ದ ಫೋಟೊ ವೈರಲ್ ಆಗಿ ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿತ್ತು. ಆದರೆ ಇಬ್ಬರೂ ಈ ಬಗ್ಗೆ ಮೌನ ವಹಿಸಿದ್ದರು.

ಚೈತು- ಶೋಭಿತಾ ಕದ್ದು ಮುಚ್ಚಿ ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರು. ಇತ್ತೀಚೆಗೆ ಇಬ್ಬರೂ ಸಫಾರಿಗೆ ಹೋಗಿದ್ದ ಫೋಟೊಗಳನ್ನು ಹಂಚಿಕೊಂಡಿದ್ದರು. ಒಂದೇ ಲೊಕೇಶನ್‌ನಲ್ಲಿದ್ದ ಫೋಟೊಗಳನ್ನು ಪೋಸ್ಟ್ ಮಾಡಿದ್ದು ಇಬ್ಬರ ಡೇಟಿಂಗ್ ಬಗ್ಗೆ ಮತ್ತಷ್ಟು ಸುಳಿವು ನೀಡಿತ್ತು. ಇದೀಗ ಅಂತಿಮವಾಗಿ ಇಬ್ಬರೂ ಮದುವೆ ಆಗಲು ಸಿದ್ಧರಾಗಿದ್ದಾರೆ. ಮದುವೆ ಯಾವಾಗ ಎನ್ನುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.

ಸದ್ಯ ನಾಗಚೈತನ್ಯಾ 'ತಂಡೆಲ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿಶ್ಚಿತಾರ್ಥಕ್ಕಾಗಿ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಮತ್ತೊಂದು ಕಡೆ ಶೋಬಿತಾ 'ಸಿತಾರ' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳಿನ 'ಪೊನ್ನಿಯಿನ್ ಸೆಲ್ವನ್' ಸರಣಿ ಚಿತ್ರದಲ್ಲಿ ಶೋಭಿತಾ ನಟಿಸಿ ಗೆದ್ದಿದ್ದರು. ವಾನತ್ತಿ ಎನ್ನುವ ಮಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.

ನಟಿ ಸಮಂತಾ ತಮ್ಮ ಡಿವೋರ್ಸ್ ಬಗ್ಗೆ ಈ ಹಿಂದೆ ಪರೋಕ್ಷವಾಗಿ ಹಲವು ಬಾರಿ ಮಾತನಾಡಿದ್ದರು. ತಮ್ಮದು ಯಾವುದೇ ತಪ್ಪು ಇಲ್ಲ ಎಂದು ಹೇಳಿದ್ದರು. ಇದೀಗ ಚೈತು- ಶೋಬಿತಾ ನಿಶ್ಚಿತಾರ್ಥದ ಬಗ್ಗೆ ಆಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Nagarjuna Akkineni confirms his son Naga Chaitanya and Sobhita engagement;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X