ಶೋಭಿತಾ ಜೊತೆ ನಾಗ ಚೈತನ್ಯ ಕಾಡು-ಮೇಡು ಪ್ರವಾಸ ; ಮತ್ತೊಮ್ಮೆ ತಗ್ಲಾಕೊಂಡ ಸಮಂತಾ ಮಾಜಿ ಗಂಡ..?
ಸಮಂತಾ ಅವರಿಂದ ನಾಗಚೈತನ್ಯ ದೂರವಾದ ನಂತರ, ಪಕ್ಕದ ಆಂಧ್ರದಲ್ಲಿ ಅನೇಕರು ನಾಗಚೈತನ್ಯಗೆ ಮತ್ತೊಂದು ಮದುವೆ ಮಾಡಿಸುವ ಶಪಥವನ್ನ ಮಾಡಿದ್ದಾರೆ. ನಾಗಚೈತನ್ಯ ನಡೆ-ನುಡಿಯ ಮೇಲೆ ಕಣ್ಣಿಟ್ಟಿದ್ದಾರೆ.ಇದಕ್ಕೆ ಪುಷ್ಠಿ ನೀಡುವಂತೆ ಸಮಂತಾ ತೆಕ್ಕೆಯಿಂದ ಮೆಲ್ಲಗೆ ಜಾರಿದ ನಾಗಚೈತನ್ಯ, ಸೀದಾ ಶೋಭಿತಾ ಪಕ್ಕದಲ್ಲಿ ಬಿದ್ದಿದ್ದಾರೆ ಅನ್ನುವ ಅನುಮಾನ ಅನೇಕರಲ್ಲಿ ಇದೆ. ಇದೇ ಅನುಮಾನಕ್ಕೆ ಈಗ ರೆಕ್ಕೆ-ಪುಕ್ಕ ಮೂಡಿವೆ.
ಹೌದು, ಅಸಲಿಗೆ.. ಶೋಭಿತಾ ನಾಗಪುರದ ತಿಪೇಶ್ವರ್ ವನ್ಯಜೀವಿಧಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಡು-ಮೇಡು ಸುತ್ತಾಡಿದ್ದಾರೆ. ತಮ್ಮ ಈ ಪ್ರವಾಸದ ನೆನಪು ಸದಾ ಹಸಿರಾಗಿರಲಿ ಎಂದು ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಫೋಟೋಗಳನ್ನ ಅಪ್ಲೋಡ್ ಮಾಡಿದ್ದಾರೆ.

ವಿಶೇಷ ಅಂದರೆ.. ನಾಗಚೈತನ್ಯ ಕೂಡ ಇಂತಹದ್ದೇ ಕೆಲಸವನ್ನೂ ಮಾಡಿದ್ದಾರೆ. ವ್ಯತ್ಯಾಸ ಏನೆಂದರೆ ಶೋಭಿತಾ ಕಾಡು ಪ್ರೇಮ ಮೂರು ದಿನದ ಹಿಂದೆ ಜಗಜ್ಜಾಹೀರಾದರೆ, ನಾಗಚೈತನ್ಯ ಅವರ ಪ್ರೇಮ ಎರಡು ದಿನದ ಹಿಂದೆ ಬಯಲಾಗಿದೆ. ಇನ್ನೂ ನಾಗಚೈತನ್ಯ ಅವರ ಈ ಫೋಟೋವನ್ನ ಶೋಭಿತಾ ಮೆಚ್ಚಿಕೊಂಡಿದ್ದಾರೆ ಕೂಡ. ಈ ಕಾರಣಕ್ಕೆ.. ಇಬ್ಬರ ಫೋಟೋಗಳನ್ನ ಅಕ್ಕ-ಪಕ್ಕ ಇಟ್ಟು ಹೋಲಿಕೆಯನ್ನ ಮಾಡ್ತಿರುವ ಅನೇಕರು, ಇಬ್ಬರಿಗೂ ಪ್ರೇಮದ ಅಮಲು ಏರಿರುವುದು ನೂರಕ್ಕೆ ನೂರು ನಿಜಾ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಪ್ರೇಮಾಂಕುರದ ಸುಳಿವು, ಮೊದಲು.. ಲಂಡನ್‌ನಲ್ಲಿ ಸಿಕ್ಕಿತ್ತು. ಇಬ್ಬರ ಡಿನ್ನರ್ ಡೇಟ್ ಗೆ ಅಲ್ಲಿನ ಪಂಚತಾರಾ ಹೊಟೇಲ್ ಸಾಕ್ಷಿಯಾಗಿದೆ ಅನ್ನುವ ಅನುಮಾನ ಅನೇಕರಿಗೆ ಬಂದಿತ್ತು. ಯಾಕೆಂದರೆ ಅಲ್ಲಿಯ ಶೆಫ್ ಅಭಿಮಾನಿ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಾಗಚೈತನ್ಯ ದುರಾದೃಷ್ಟ, ಬ್ಯಾಕ್‌ಗ್ರೌಂಡ್‌ನಲ್ಲಿ ಶೋಭಿತಾ ಮುಖ ಮುಚ್ಚಿಕೊಂಡಿದ್ದರು.
ಅವತ್ತು ನಾಗಚೈತನ್ಯ ಮತ್ತು ಶೋಭಿತಾ ಫೋಟೋ ವೈರಲ್ ಆದ ಬೆನ್ನಲ್ಲಿಯೇ, ಸಮಂತಾ ಸಂಬಂಧದ ಪಾಠ ಮಾಡಿದ್ದರು. ಯಾರು ಯಾರ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರೆ ನನಗೇನು? ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರೊಟ್ಟಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿ ಆದ್ರು ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆ ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ಸಮಂತಾ ಹೇಳಿದ್ದಾಗಿ ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ಸಮಂತಾ ಈ ವಿಚಾರ ತಳ್ಳಿ ಹಾಕಿದ್ದರು. ನಾನು ಯಾವತ್ತು ಈ ರೀತಿ ಹೇಳಿಯೇ ಇಲ್ಲ ಎಂದಿದ್ದರು.

ಇನ್ನೂ ಇದೆಲ್ಲದರ ನಾಗಚೈತನ್ಯ ಅವರ ಅಭಿಮಾನಿಗಳಲ್ಲಿನ ಅಭಿಮಾನ ಜಾಗೃತಗೊಂಡಿತ್ತು. ಶೋಭಿತಾ ಹಾಗೂ ನಾಗ ಚೈತನ್ಯ ಸಂಬಂಧದ ಬಗ್ಗೆ ಸಮಂತಾರೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ನಾಗ ಚೈತನ್ಯ ಅಭಿಮಾನಿಗಳು ಆರೋಪ ಮಾಡಿದ್ದರು. ಇದಕ್ಕೆ ಖಡಕ್ ಆಗಿ ಉತ್ತರಿಸಿದ್ದ ಸಮಂತಾ, ''ಹುಡುಗಿಯರ ಬಗ್ಗೆ ಗಾಸಿಪ್ ಅನ್ನು ನಿಜವೆಂದು ನಂಬಲಾಗುತ್ತದೆ. ಹುಡುಗರ ಬಗ್ಗೆ ಗಾಸಿಪ್ ಹಬ್ಬಿದರೆ ಇದಕ್ಕೆ ಹುಡುಗಿಯೇ ಕಾರಣ ಎನ್ನುತ್ತೀರಾ. ಬುದ್ಧಿವಂತರಾಗಿ. ಜಗತ್ತು ಮುಂದುವರೆಯುತ್ತಿದೆ. ನೀವೂ ಕೂಡ ಮುಂದುವರೆಯಿರಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆಗೆ ಹೆಚ್ಚಿನ ಗಮನ ಕೊಡಿ. ಮುಂದೆ ಸಾಗಿ'' ಎಂದಿದ್ದರು.
ಇದೆಲ್ಲವೂ ನಡೆದು ಈ ಏಪ್ರಿಲ್ 03ಕ್ಕೆ ಒಂದು ವರ್ಷವಾಗಿದೆ. ಒಂದು ವರ್ಷದ ನಂತರ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಇರುವ ಸಂಬಂಧದ ಕುರಿತು ಚರ್ಚೆ ಇನ್ನೊಮ್ಮೆ ಆರಂಭವಾಗಿದೆ. ನಾಗಚೈತನ್ಯ ಅವರನ್ನ ಬಿಟ್ಟು ತುಂಬಾ ದೂರ ಹೋಗಿರುವ ಸಮಂತಾ ಈ ಬಾರಿ ಸುಮ್ನೆ ಇರ್ತಾರಾ ಅಥವಾ ಪ್ರತಿಕ್ರಿಯೆ ನೀಡ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ. ನಾಗಚೈತನ್ಯ - ಶೋಭಿತಾ ತಮ್ಮ ಈ ಸಂಬಂಧಕ್ಕೆ ಸ್ನೇಹದ ಬದಲು ಬೇರೆ ಹೆಸರನ್ನ ಇಡ್ತಾರಾ ಅನ್ನುವುದನ್ನೂ ಕೂಡ ಕಾದು ನೋಡಬೇಕಿದೆ'


Click it and Unblock the Notifications











