For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷನಾದ ನಾಗ ಚೈತನ್ಯ

  |

  ಟಾಲಿವುಡ್ ಸಿನಿಮಾರಂಗದಲ್ಲಿ ಮಹೇಶ್ ಬಾಬು ಮತ್ತು ನಾಗ ಚೈತನ್ಯ ಇಬ್ಬರೂ ಸ್ಟಾರ್ ನಟನಾಗಿ ಗುರುತಿಸಿಕೊಂಡವರು. ಇಬ್ಬರಿಗೂ ತನ್ನದೆ ಆದ ಅಭಿಮಾನಿ ಬಳಗವಿದೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಾಗಚೈತನ್ಯ ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದಾರೆ. ಈ ಸುದ್ದಿ ಈಗ ಮಹೇಶ್ ಮತ್ತು ಚೈ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

  ಅಷ್ಟಕ್ಕೂ ನಾಗ ಚೈತನ್ಯ, ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷನಾಗಿರುವುದು ಯಾಕೆ ಎನ್ನುವುದಕ್ಕೆ ಉತ್ತರ ಇಲ್ಲಿದೆ. ನಾಗ ಚೈತನ್ಯ ಮಹೇಶ್ ಬಾಬು ಅಭಿಮಾನಿ ಸಂಘದ ಅಧ್ಯಕ್ಷನಾಗಿರುವುದು ಸಿನಿಮಾದಲ್ಲಿ. ನಾಗ ಚೈತನ್ಯ ಹೊಸ ಸಿನಿಮಾದಲ್ಲಿ ಮಹೇಶ್ ಬಾಬು ಫ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಮೊದಲ ಕೊರೊನಾ ಪರೀಕ್ಷೆಯ ಅನುಭವ ಬಿಚ್ಚಿಟ್ಟ ನಟ ಮಹೇಶ್ ಬಾಬು ಪುತ್ರಿಮೊದಲ ಕೊರೊನಾ ಪರೀಕ್ಷೆಯ ಅನುಭವ ಬಿಚ್ಚಿಟ್ಟ ನಟ ಮಹೇಶ್ ಬಾಬು ಪುತ್ರಿ

  ನಾಗ ಚೈತನ್ಯ ಹೊಸ ಸಿನಿಮಾಗೆ ಥ್ಯಾಂಕ್ ಯೂ ಎಂದು ಟೈಟಲ್ ಇಡಲಾಗಿದೆ. ಸಿನಿಮಾಗೆ ವಿಕ್ರಮ್ ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಮನಂ, 13 ಬಿ, 24 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಿಕ್ರಮ್ ಇದೀಗ ಥ್ಯಾಂಕ್ ಯೂ ಸಿನಿಮಾ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ.

  ಚಿತ್ರದಲ್ಲಿ ನಾಗಚೈತನ್ಯ, ಅಭಿರಾಮ್ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರಮಂದಿರವೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲಿ ಮಹೇಶ್ ಬಾಬು ಪೋಸ್ಟರ್ ಗಳನ್ನು ಹಾಕಿದ್ದಾರೆ. ಮಹೇಶ್ ಬಾಬುಗೆ ಶುಭಕೋರುವ ಬ್ಯಾನರ್ ನಲ್ಲಿ ನಾಗ ಚೈತನ್ಯ ಹೆಸರು ಅಭಿರಾಮ್ ಎಂದು ಇದೆ.

  ನಿರ್ದೇಶಕ ವಿಕ್ರಮ್ ಮತ್ತು ನಾಗ ಚೈತನ್ಯ ಕಾಂಬಿನೇಷನ್ ನ ಎರಡನೇ ಸಿನಿಮಾ ಇದಾಗಿದೆ. ಮನಂ ನಂತಹ ಅದ್ಭುತ ಸಿನಿಮಾ ಮಾಡಿದ್ದ ವಿಕ್ರಮ್ ಇದೀಗ ಥ್ಯಾಂಕ್ ಯೂ ಮೂಲಕ ಗಮನ ಸೆಳೆಯುತ್ತಿದ್ದಾರೆ. ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಐಶ್ವರ್ಯ ಲಕ್ಷ್ಮೀ ಮತ್ತು ಅವಿಕಾ ಗೋರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tollywood Actor Naga Chaitanya becomes Mahesh Babu Fans President in Thank You movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X