For Quick Alerts
  ALLOW NOTIFICATIONS  
  For Daily Alerts

  ಹುಡುಗಿ ಜೊತೆ ರೊಮ್ಯಾನ್ಸ್ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಚೈತು!

  |

  ಟಾಲಿವುಡ್ ನಟ ನಾಗಚೈತನ್ಯಾ 'ಲಾಲ್‌ ಸಿಂಗ್ ಚಡ್ಡ' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಪ್ರಮೋಷನ್‌ ಭಾಗವಾಗಿ ಸಾಕಷ್ಟು ಇಂಟ್ರೆಸ್ಟಿಂಗ್‌ ವಿಚಾರಗಳ ಬಗ್ಗೆ ಚೈತು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಹುಡುಗಿ ಜೊತೆ ರೊಮ್ಯಾನ್ಸ್ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

  ಟಾಲಿವುಡ್ ಮನ್ಮಥ ನಾಗಾರ್ಜುನ ಪುತ್ರ ನಾಗಚೈತನ್ಯ. ತಾತ ಹಾಗೂ ತಂದೆಯ ಹಾದಿಯಲ್ಲಿ ಚೈತು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ಪತ್ನಿ ಸಮಂತಾ ಡೈವೋರ್ಸ್ ಕೊಟ್ಟು ಸುದ್ದಿ ಆಗಿದ್ದರು. ಈ ಡೈವೋರ್ಸ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಇನ್ನು ನಿಂತಿಲ್ಲ. ಮತ್ತೊಂದು ಕಡೆ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  ಮಹೇಶ್ ಹಾಗೂ ಪವನ್ ಫ್ಯಾನ್ಸ್ ನಡುವೆ ಜಟಾಪಟಿ: ಪಂಡು- ಸಂಜು ಫೈಟ್‌ನಲ್ಲಿ ಗೆಲ್ಲೊದ್ಯಾರು?ಮಹೇಶ್ ಹಾಗೂ ಪವನ್ ಫ್ಯಾನ್ಸ್ ನಡುವೆ ಜಟಾಪಟಿ: ಪಂಡು- ಸಂಜು ಫೈಟ್‌ನಲ್ಲಿ ಗೆಲ್ಲೊದ್ಯಾರು?

  ಆಮಿರ್ ಖಾನ್ ನಟನೆಯ 'ಲಾಲ್‌ ಸಿಂಗ್ ಚಡ್ಡ' ಚಿತ್ರದಲ್ಲಿ ನಾಗಚೈತನ್ಯ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಸಿನಿಮಾ ಪ್ರಚಾರಕ್ಕಾಗಿ ಇಬ್ಬರು ಹೈದರಾಬಾದ್, ಮುಂಬೈನಲ್ಲಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಚೈತು ತಮಾಷೆಯ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ.

  ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರಂತೆ ನಾಗಚೈತನ್ಯ

  ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರಂತೆ ನಾಗಚೈತನ್ಯ

  ಸ್ವತಃ ನಾಗಚೈತನ್ಯ ಆ ಫನ್ನಿ ಮೊಮೆಂಟ್‌ ಅನ್ನು ನೆನಪಿಸಿಕೊಂಡಿದ್ದಾರೆ. "ನಾನು ಹೈದರಾಬಾದ್‌ನಲ್ಲಿ ಒಮ್ಮೆ ಕಾರಿನ ಹಿಂಬದಿ ಸೀಟ್‌ನಲ್ಲಿ ಪ್ರೇಯಸಿ ಜೊತೆ ರೊಮ್ಯಾನ್ಸ್ ಮಾಡ್ತಿದ್ದೆ. ಅ ಸಮಯದಲ್ಲಿ ಅದು ತಪ್ಪು ಅಂತ ನನಗೆ ಅನ್ನಿಸಿರಲಿಲ್ಲ. ನಾನು ಏನು ಮಾಡ್ತಿದ್ದೀನಿ ಅನ್ನುವುದು ನನಗೆ ಗೊತ್ತಿತ್ತು. ಆದರೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದೆ" ಎಂದಿದ್ದಾರೆ. ಆದರೆ ಆ ಗರ್ಲ್‌ ಫ್ರೆಂಡ್ ಯಾರು ಅನ್ನುವುದನ್ನು ಮಾತ್ರ ಚೈತು ಹೇಳಿಲ್ಲ.

  ಸಮಂತಾ ಎದುರು ಸಿಕ್ಕರೆ ಏನು ಮಾಡುತ್ತೀರಿ? ಆಸಕ್ತಿಕರ ಉತ್ತರ ನೀಡಿದ ನಾಗ ಚೈತನ್ಯಸಮಂತಾ ಎದುರು ಸಿಕ್ಕರೆ ಏನು ಮಾಡುತ್ತೀರಿ? ಆಸಕ್ತಿಕರ ಉತ್ತರ ನೀಡಿದ ನಾಗ ಚೈತನ್ಯ

  ಹೆಚ್ಚು ಓಪನ್ ಅಪ್ ಆಗುತ್ತಿರುವ ನಟ

  ಹೆಚ್ಚು ಓಪನ್ ಅಪ್ ಆಗುತ್ತಿರುವ ನಟ

  ನಾಗಚೈತನ್ಯ ಇತ್ತೀಚೆಗೆ ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ. ಮೊದಲೆಲ್ಲಾ ಸಂದರ್ಶನಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸೋಕೆ ತಡಬಡಾಯಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಜೀವನದ ಕುರಿತು ಹೆಚ್ಚು ಓಪನ್ ಅಪ್ ಆಗುತ್ತಿದ್ದಾರೆ. ಇತ್ತೀಚೆಗೆ ಶೋಭಿತಾ ಧೂಳಿಪಾಲ ಜೊತೆ ನಾಗಚೈತನ್ಯಾ ಲವ್ವಿ ಡವ್ವಿ ನಡೀತಿದೆ ಅನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಈ ಬಗ್ಗೆ ಇಬ್ಬರೂ ಮಾತನಾಡುವ ಗೋಜಿಗೆ ಹೋಗಲಿಲ್ಲ.

  ಪ್ರೇಕ್ಷಕರ ಜೊತೆ ನನ್ನ ಸಿನಿಮಾ ನೋಡಲ್ಲ

  ಪ್ರೇಕ್ಷಕರ ಜೊತೆ ನನ್ನ ಸಿನಿಮಾ ನೋಡಲ್ಲ

  ಸಾಮಾನ್ಯವಾಗಿ ಕಲಾವಿದರು ಪ್ರೇಕ್ಷಕರ ಜೊತೆ ಫಸ್ಟ್‌ ಡೇ ಫಸ್ಟ್‌ ಶೋ ತಮ್ಮ ಸಿನಿಮಾ ನೋಡಲು ಇಷ್ಟಪಡುತ್ತಾರೆ. ಯಾವ ದೃಶ್ಯಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನುವುದನ್ನು ನೋಡಿ ತಿಳಿಯುವ ಅಸೆ ಇರುತ್ತದೆ. ಆದರೆ ನಾಗಚೈತನ್ಯಾಗೆ ಆ ಧೈರ್ಯ ಇಲ್ಲವಂತೆ. ಅದಕ್ಕೆ ಕಾರಣವನ್ನು ಕೊಟ್ಟಿದ್ದಾರೆ. "ನನ್ನ ಮೊದಲ ಸಿನಿಮಾ ಜೋಶ್ ರಿಲೀಸ್ ಆದಾಗ ಸಂಭ್ರಮಾಚರಣೆ ಜೋರಾಗಿತ್ತು. ನಂತರ ನಾನು ಪ್ರೇಕ್ಷಕರ ಜೊತೆ ಸಿನಿಮಾ ನೋಡಲು ಒಳಗೆ ಹೋಗಿ ಕೂತಿದ್ದೆ. ಆ ಸಿನಿಮಾ ಚೆನ್ನಾಗಿ ಓಡಲಿಲ್ಲ. ಸಿನಿಮಾ ಮುಗಿದ್ಮೇಲೆ ಜನ ಸುಮ್ಮನೆ ಎದ್ದು ಹೊರಟುಬಿಟ್ಟರು. ನನಗೆ ಅದು ದೊಡ್ಡ ಪೆಟ್ಟು ಕೊಟ್ಟಿತ್ತು. ನಾನು ಜನರನ್ನು ರಂಜಿಸೋಕೆ ಇಲ್ಲಿರೋದು, ಆದರೆ ಅದು ನನ್ನಿಂದ ಆಗಲಿಲ್ಲ ಅನ್ನಿಸಿತ್ತು. ಆ ಘಟನೆ ನನಗೆ ಬಹಳ ಕಲಿಸಿತು. ಅಂದಿನಿಂದ ನಾನ್ಯಾವತ್ತು ನನ್ನ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಲಿಲ್ಲ. ಒಂದಲ್ಲ ಒಂದು ದಿನ ಹೋಗಬೇಕು" ಎಂದಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ ತಿಣುಕಾಡುತ್ತಿರುವ 'ಲಾಲ್‌ ಸಿಂಗ್'

  ಬಾಕ್ಸಾಫೀಸ್‌ನಲ್ಲಿ ತಿಣುಕಾಡುತ್ತಿರುವ 'ಲಾಲ್‌ ಸಿಂಗ್'

  ಆಮಿರ್‌ ಖಾನ್ ಹಾಗೂ ಕರೀನಾ ಕಪೂರ್ ನಟನೆಯ 'ಲಾಲ್‌ ಸಿಂಗ್ ಚಡ್ಡ' ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಂಪೂರ್ಣವಾಗಿ ಸೋತಿದೆ. ಗುರುವಾರ ರಿಲೀಸ್ ಆದ ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ 37.96 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ಚಿತ್ರಕ್ಕೆ ಈ ಪಾಟಿ ಹಿನ್ನಡೆಯಾಗಿರುವುದು ಇದೇ ಮೊದಲು. ಇತ್ತೀಚೆಗೆ ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಸಕ್ಸಸ್ ಕಾಣ್ತಿಲ್ಲ. 'ಲಾಲ್‌ ಸಿಂಗ್ ಚಡ್ಡಾ' ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ನಾಗಚೈತನ್ಯಾಗೆ ಅವಕಾಶ ಕೊಟ್ಟು ಟಾಲಿವುಡ್‌ನಲ್ಲಿ ಗೆಲ್ಲುವ ಪ್ರಯತ್ನವೂ ವಿಫಲವಾಗಿದೆ.

  English summary
  Naga Chaitanya Caught By Police While Romance With A Girl In Car. Know more.
  Monday, August 15, 2022, 20:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X