ಸಮಂತಾ ನೆನಪುಗಳನ್ನು ಶಾಶ್ವತವಾಗಿ ಅಳಿಸಿ ಹಾಕಿದ ನಾಗಚೈತನ್ಯ...!

ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ. ಇದಕ್ಕೆ ಸಮಂತಾ ಮತ್ತು ನಾಗಚೈತನ್ಯ ಮತ್ತೊಂದು ಉದಾಹರಣೆ.

ಹೌದು, ಪರಸ್ಪರ ಆರು ವರ್ಷ ಹುಚ್ಚರಂತೆ ಪ್ರೀತಿ ಮಾಡಿ,ಆ ನಂತರ ಅದ್ಧೂರಿ ಮದುವೆಯಾಗಿ ನಾಲ್ಕು ವರ್ಷಗಳ ದಾಂಪತ್ಯ ಗೀತೆಯನ್ನು ಹಾಡಿದ ಇಬ್ಬರು ಸದ್ಯ ಎಲ್ಲವನ್ನೂ ಮರೆತು ಮುನ್ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆ ಕಡೆ ಶೋಭಿತಾ ಜೊತೆ ನಾಗಚೈತನ್ಯ ಮದುವೆಗೆ ಸಿದ್ಧವಾಗಿದ್ದರೆ, ಈ ಕಡೆ ಸಮಂತಾ ಚಿತ್ರರಂಗದಲ್ಲಿ ನೆಮ್ಮದಿಯನ್ನು ಹುಡುಕುತ್ತಿದ್ದಾರೆ.

Naga Chaitanya Deletes His Last Instagram Post Featuring Ex-Wife Samantha Ruth Prabhu

ಇದು ಅವರ ಅವರ ವ್ಯೆಯಕ್ತಿಕ ಬದುಕು ಮತ್ತು ವ್ಯೆಯಕ್ತಿಕ ಆಯ್ಕೆಯಾದರೂ ಶೋಭಿತಾ ಮನೆಯಲ್ಲಿ ಮೊನ್ನೆ ಸಂಭ್ರಮ ಸಡಗರದಿಂದ ಹಬ್ಬದ ಶಾಸ್ತ್ರ ನೆರವೇರಿದ ಬೆನ್ನಲ್ಲೇ ಅನೇಕರು ನಾಗಚೈತನ್ಯಗೆ ಟ್ರೋಲ್ ಮಾಡುತ್ತಿದ್ದರು. ಯಾಕೆಂದರೆ.. ಸಮಂತಾ ಅವರಿಂದ ದೂರವಾದ ಮೇಲೆ ನಾಗಚೈತನ್ಯ ತಮ್ಮ ಮಾಜಿ ಪತ್ನಿ ಜೊತೆ ಇರುವ ಭಾವಚಿತ್ರಗಳನ್ನು ಡಿಲೀಟ್ ಮಾಡಿದ್ದರು. ಆದರೆ. ನೆನಪಿಗೆ ಮೂರು ಫೋಟೋಗಳನ್ನು ಉಳಿಸಿಕೊಂಡಿದ್ದರು.

ಆ ಪೈಕಿ ಒಂದು ವಿಚ್ಛೇದನವನ್ನು ಘೋಷಿಸಿದ್ದ ಫೋಸ್ಟ್ ಒಂದಾಗಿದ್ದರೆ ಮತ್ತೊಂದು ಮಜಿಲಿ ಚಿತ್ರದ ಪೋಸ್ಟರ್ ಇತ್ತು. ಇವೆರಡು ಹೊರತು ಪಡಿಸಿ ರೇಸ್ ಕಾರ್ ಸಮಂತಾ ಜೊತೆ ನಿಂತಿದ್ದ ಫೋಟೋವನ್ನು ಕೂಡ ಹಾಗೇ ಉಳಿಸಿಕೊಂಡಿದ್ದರು. ಆದರೆ ಇದಕ್ಕೆ ಕೆಲವರು ಅಪಸ್ವರ ತೆಗೆದಿದ್ದರು. ನಾಗಚೈತನ್ಯ ಅವರನ್ನು ನಿಂದಿಸಿದ್ದರು. ಶೋಭಿತಾ ಜೊತೆ ಮದುವೆಯಾಗ್ತಿದ್ದೀರಾ, ಇನ್ಯಾಕೇ ಫೋಟೋಗಳನ್ನು ಹಾಗೇ ಉಳಿಸಿಕೊಂಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದರು. ದಯವಿಟ್ಟು ಸಮಂತಾ ಜೊತೆ ಇರುವ ಫೋಟೊ ಡಿಲೀಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಕೆಲ ದಿನಗಳ ಹಿಂದೆ ಮೊದಲೆರಡು ಫೋಟೋಗಳನ್ನು ಕೆಲ ದಿನಗಳ ಹಿಂದೆ ಡಿಲೀಟ್ ಮಾಡಿದ್ದ ನಾಗಚೈತನ್ಯ ರೇಸ್ ಕಾರ್ ಜೊತೆ ನಿಂತಿದ್ದ ಫೋಟೋವನ್ನು ಮಾತ್ರ ಹಾಗೇ ಉಳಿಸಿಕೊಂಡಿದ್ದರು. ಆದರೆ ಈಗ ಆ ಫೋಟೋವನ್ನು ಕೂಡ ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ. ಈ ಮೂಲಕ ಸಮಂತಾ ಅವರ ನೆನಪುಗಳನ್ನು ಶಾಶತ್ವವಾಗಿ ತಮ್ಮ ಸಾಮಾಜಿಕ ಜಾಲತಾಣದಿಂದ ಅಳಸಿ ಹಾಕಿದ್ದಾರೆ.

ಇನ್ನುಳಿದಂತೆ ಸಮಂತಾ ಅವರ ನೆನಪುಗಳನ್ನೆಲ್ಲ ಅಳಿಸಿ ಹಾಕಿರುವ ನಾಗಚೈತನ್ಯ ಸದ್ಯದಲ್ಲಿಯೇ ಶೋಭಿತಾ ಅವರ ಜೊತೆ ಮತ್ತೊಮ್ಮೆ ಸಪ್ತಪದಿಯನ್ನು ತುಳಿಯಲಿದ್ದಾರೆ. ಸದ್ದು ಗದ್ದಲ ಇಲ್ಲದೇ ಮದುವೆ ಸಂಪ್ರದಾಯಗಳು ಶೋಭಿತಾ ಮತ್ತು ನಾಗಚೈತನ್ಯ ಮನೆಯಲ್ಲಿ ಶುರುವಾಗಿದ್ದು ಸಂಭ್ರಮ ಮನೆ ಮಾಡಿದೆ. ಇನ್ನೂ ನಾಗಚೈತನ್ಯ ಮತ್ತು ಶೋಭಿತಾ ಮದುವೆ ಎಲ್ಲಿ ನಡೆಯಲಿದೆ ಮತ್ತು ಯಾವತ್ತು ನಡೆಯಲಿದೆ ಎನ್ನುವ ಪ್ರಶ್ನೆಗೆ ಕೂಡ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ರಾಜಸ್ಥಾನ ಇವರಿಬ್ಬರ ಅದ್ಧೂರಿ ಮದುವೆಗೆ ಸಾಕ್ಷಿಯಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಶೀಘ್ರದಲ್ಲಿಯೇ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಗಟ್ಟಿಮೇಳ ಮೊಳಗಲಿದೆ.

ಅಂದ್ಹಾಗೇ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಪ್ರೇಮಾಂಕುರದ ಸುಳಿವು, ಮೊದಲು.. ಲಂಡನ್‌ನಲ್ಲಿ ಸಿಕ್ಕಿತ್ತು. ಅಲ್ಲಿಂದ ಶುರುವಾದ ಇವರ ಪ್ರೇಮಕ್ಕೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿತ್ತು. ಆಗಸ್ಟ್ 08ರಂದು ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಮಾಡಿಕೊಳ್ಳುವ ಮೂಲಕ ನಾಗಚೈತನ್ಯ ಮತ್ತು ಶೋಭಿತಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಅಂತೆ-ಕಂತೆಗಳಿಗೆಲ್ಲ ಪೂರ್ಣ ವಿರಾಮ ಹಾಕಿದರು.

More from Filmibeat

Read more about: samantha naga chaitanya tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X