'ಚೆಂದ ಚೆಂದ ಚೆಂದ ನನ್ನ ಗಂಡ' ಎಂದ ಸಮಂತಾ: ನಾಗ ಚೈತನ್ಯ ಕೊಟ್ಟ ಪ್ರತಿಕ್ರಿಯೆ ಹೀಗಿದೆ
ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಸಮಂತಾ-ನಾಗಚೈತನ್ಯ ಒಂದು. ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿದೆ. ಸಿನಿಮಾಗಳಲ್ಲಿ ಮತ್ತು ಖಾಸಗಿ ಬದುಕು ಎರಡರಲ್ಲಿಯೂ ಈ ಜೋಡಿ ಗಮನ ಸೆಳೆಯುತ್ತದೆ.
Recommended Video
ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಸಕ್ರಿಯರಾಗಿರುತ್ತಾರೆ. ನಿರಂತರವಾಗಿ ಒಂದಿಲ್ಲೊಂದು ಪೋಸ್ಟ್‌ಗಳನ್ನು,ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ನಾಗ ಚೈತನ್ಯ ಇದಕ್ಕೆ ತದ್ವಿರುದ್ಧ. ಅವರು ಸಾಮಾಜಿಕ ಜಾಲತಾಣಕ್ಕೆ ಬರುವುದೇ ಅಪರೂಪ. ಯಾವಾಗಲೋ ಒಮ್ಮೆ ಫೋಟೊ ಹಂಚಿಕೊಳ್ಳುತ್ತಾರೆ. ಬೇರೆವರಿಗೆ ಕಾಮೆಂಟ್ ಹಾಕುತ್ತಾರೆ. ಅದರಲ್ಲೂ ತಮ್ಮಿಬ್ಬರ ಫೋಟೊಗಳನ್ನು ಹಾಕಿಕೊಳ್ಳುವುದು ತೀರಾ ಕಡಿಮೆ. ಈ ವಿಚಾರದಲ್ಲಿ ಇಬ್ಬರದೂ ವಿರುದ್ಧ ಗುಣ. ಮುಂದೆ ಓದಿ...

ರಾಣಾ-ಮಿಹೀಕಾ ನಿಶ್ಚಿತಾರ್ಥ
ಬುಧವಾರ ನಡೆದ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ನಿಶ್ಚಿತಾರ್ಥ ಸಮಾರಂಭದಲ್ಲಿ ಸಮಂತಾ ಮತ್ತು ನಾಗಚೈತನ್ಯ ಕೂಡ ಭಾಗವಹಿಸಿದ್ದರು. ಭಾವಿ ದಂಪತಿಯೊಂದಿಗಿನ ಫೋಟೊವನ್ನು ಸಮಂತಾ ಶುಕ್ರವಾರ ಹಂಚಿಕೊಂಡಿದ್ದಾರೆ.

ಒಳ್ಳೆಯ ಸುದ್ದಿ
2020ನೇ ಇಸವಿಯ ಅತ್ಯಂತ ಒಳ್ಳೆಯ ಸುದ್ದಿಯನ್ನು ನಮಗೆ ನೀಡಿದ್ದಕ್ಕಾಗಿ ರಾಣಾ ಮತ್ತು ಮಿಹೀಕಾ ಅವರಿಗೆ ಧನ್ಯವಾದಗಳು. ಎಂದೆಂದಿಗೂ ಖುಷಿಯಾಗಿರಿ ಎಂದು ಸಮಂತಾ ಹೇಳಿದ್ದರು.

ನನ್ನ ಗಂಡ ಎಷ್ಟು ಚೆಂದ...
ನಂತರ ಸಮಂತಾ ನಾಗ ಚೈತನ್ಯ ಅವರ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. 'ಅಮ್ಮ, ಆಂಟಿಯರು, ತಂಗಿ, ಸ್ನೇಹಿತರು, ಗೆಳೆಯರಿಗೆ ಕಳುಹಿಸಿದ ಬಳಿಕ ಈಗ ಇನ್‌ಸ್ಟಾಗ್ರಾಂ ಸರದಿ. ನೋಡೀ ನನ್ನ ಗಂಡ ಎಷ್ಟು ಸುಂದರವಾಗಿದ್ದಾನಲ್ಲವೇ?' ಎಂದು ಬರೆದಿದ್ದಾರೆ.

ಸಮಂತಾ ಕಾಲೆಳೆದ ನಾಗ ಚೈತನ್ಯ
'ಗಂಡ ಈಗ ಹಾರಲು ಎಲ್ಲೋ ದೊಡ್ಡದೊಂದು ಹೊಂಡ ತೆಗೆಯುತ್ತಿರಬೇಕು' ಎಂದು ತಮ್ಮ ತುಂಟತನದ ಪೋಸ್ಟ್‌ಗೆ ಆಗ ಚೈತನ್ಯ ಸುಸ್ತಾಗಿರುತ್ತಾರೆ ಎಂಬುದನ್ನು ಹೇಳಿದ್ದರು. ಅದಕ್ಕೆ ಚೈತನ್ಯ ಅಪರೂಪಕ್ಕೆಂಬಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಪೇಯ್ಡ್ ಪಾರ್ಟ್ನರ್‌ಶಿಪ್ ಪೋಸ್ಟ್‌ಗಳಲ್ಲಿ ಒಂದಂತೆ ಕಾಣಿಸುತ್ತದೆ ಎಂದು ತಮಾಷೆಯಾಗಿ ಹೇಳಿದ್ದಾರೆ. 'ಓ ನೀವು ಇನ್‌ಸ್ಟಾಗ್ರಾಂ ಕೂಡ ನೋಡುತ್ತೀರಾ?' ಎಂದು ಸಮಂತಾ ಮತ್ತೆ ಕಾಲೆಳೆಯಲು ಪ್ರಯತ್ನಿಸಿದ್ದಾರೆ.

ಒಂದೇ ಕುಟುಂಬದವರು
ಇನ್‌ಸ್ಟಾ ಸ್ಟೋರಿಯಲ್ಲಿಯೂ ತಮ್ಮಿಬ್ಬರ ಫೋಟೊ ಹಾಕಿರುವ ಸಮಂತಾ, 'ಎರಡು ತಿಂಗಳ ಬಳಿಕ ಹೀಗೆ ಡ್ರೆಸ್ ಮಾಡಿಕೊಂಡಾಗ' ಎಂದು ಬರೆದಿದ್ದಾರೆ. ನಾಗಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ (ನಾಗಾರ್ಜುನ ಮೊದಲ ಪತ್ನಿ), ತೆಲುಗಿನ ನಟ ವೆಂಕಟೇಶ್ ದಗ್ಗುಬಾಟಿ ಹಾಗೂ ನಿರ್ಮಾಪಕ ಸುರೇಶ್ ಬಾಬು ಅವರ ಸಹೋದರಿ. ಅಂದರೆ ರಾಣಾ ದಗ್ಗುಬಾಟಿಯ ಸೋದರತ್ತೆ. ಈ ಕಾರಣಕ್ಕಾಗಿ ನಾಗ ಚೈತನ್ಯ ಮತ್ತು ಸಮಂತಾ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Click it and Unblock the Notifications











