ನಾಗಚೈತನ್ಯ ಮನೆಗೆ ಬಂದ ಸಿಲ್ವರ್ ಸುಂದರಿ ; 3.5 ಕೋಟಿ ಕಾರಿನ ವಿಶೇಷತೆಗಳೇನು..?

ಸಮಂತಾ ಜೊತೆ ಸಂಸಾರ ಮುರಿದು ಬಿದ್ದ ಮೇಲೆ ನಾಗಚೈತನ್ಯ ಹೊಸ ಬದುಕಿನತ್ತ ಹೆಜ್ಜೆ ಹಾಕಿದ್ದಾರೆ. ಹಳೆಯದನ್ನೆಲ್ಲ ಮರೆತು ತಮ್ಮ ಮನೆ ಮತ್ತು ಸಿನಿಮಾದಲ್ಲಿ ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನೂ .. ಇದೇ ಸಮಯದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ನಡುವೆ ಪ್ರೇಮಾಂಕುರವಾದ ಸುದ್ದಿ ಇದೆ. ಹಳೆಯ ಪ್ರೇಮದಲ್ಲಿ ಮುದುಡದೇ, ಹರುಷಕ್ಕೊಂದು ಹೊಸ ನೆಲೆ ಹುಡುಕುತ್ತಿದ್ದಾರೆ ಅನ್ನುವ ಭಾವನೆ ಅನೇಕರಲ್ಲಿದೆ. ಇದು.. ನಿಜಾನಾ.. ಸುಳ್ಳಾ.. ಗೊತ್ತಿಲ್ಲ. ಆದರೆ ಸದ್ಯಕ್ಕೆ ನಾಗಚೈತನ್ಯ ಹುರುಪಿನಲ್ಲಿರುವುದು ನಿಜಾ. ಇದಕ್ಕೆ ಪೂರಕವಾಗಿ ನಾಗಚೈತನ್ಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

Naga Chaitanya has added a Porsche 911 GT3 RS worth Rs 3 5 crore to his collection

ಹೌದು, ನಾಗಚೈತನ್ಯಗೆ ಮೊದಲಿಂದ ಕಾರುಗಳ ಮೇಲೆ ವ್ಯಾಮೋಹ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಾಗಚೈತನ್ಯ ಬಳಿ 1.75 ಕೋಟಿ ರೂಪಾಯಿ ಮೌಲ್ಯದ ಫೆರಾರಿ ಎಫ್430
ಕಾರು ಇದೆ. 3.43 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಕೂಡ ನಾಗಚೈತನ್ಯ ಗ್ಯಾರೇಜ್‌ನಲ್ಲಿದೆ. 1.30 ಕೋಟಿ ಬೆಲೆ ಬಾಳುವ ಬಿಎಂಡಬ್ಲೂ ಎಲ್‌ಐ ಕಾರು ಇದೆ. ಇಷ್ಟೇ ಅಲ್ಲ 2.12 ಕೋಟಿಯ ನಿಸಾನ್ GT-R ಮತ್ತು 2.28 ಕೋಟಿಯ ಮರ್ಸಿಡಿಸ್ ಬೆಂಜ್ G-Class G 63 AMG ಕಾರು ಕೂಡ ನಾಗಚೈತನ್ಯ ಅವರ ಬಳಿ ಇವೆ. ಆ ಸಾಲಿಗೆ ಈಗ ಪೊರ್ಶೆ 911 GT3 ಕಾರು ಕೂಡ ಸೇರಿಕೊಂಡಿದೆ.

ಹೌದು, 3.51 ಕೋಟಿ ರೂಪಾಯಿ ಬೆಲೆ ಬಾಳುವ ಅತ್ಯಾಕರ್ಷಕವಾದ ಪೊರ್ಶೆ 911 GT3 ಕಾರನ್ನ ನಾಗಚೈತನ್ಯ ಖರೀದಿಸಿದ್ದಾರೆ. ಕೇವಲ ಇಬ್ಬರು ಮಾತ್ರ ಕುಳಿತು ಪ್ರಯಾಣ ಮಾಡಬಲ್ಲ
ಈ ಕಾರು 3996 cc, 6 ಸಿಲಿಂಡರ್ ಎಂಜಿನ್ ಹೊಂದಿದೆ. ಇನ್ನೂ ಒಂದು ಲೀಟರ್ ಪೆಟ್ರೋಲ್‌ಗೆ ಕೇವಲ 7.4 ಕೀಲೋ ಮೀಟರ್ ಮೈಲೇಜ್ ನೀಡುವ ಈ ಕಾರಿನ 296 ಕಿ.ಮಿ.

518 bhp ಪವರ್ ಹಾಗೂ 465 Nm ಟಾರ್ಕ್ ಸಾಮರ್ಥ್ಯ ಹೊಂದಿರುವ ಸಿಲ್ವರ್ ಕಲರ್ ಪೊರ್ಶೆ 911 GT3 ಕಾರಿನಲ್ಲಿ 07 ಏರ್‌ಬ್ಯಾಗ್ ಇವೆ. ಇನ್ನೂ ಆಂಧ್ರದಲ್ಲಿನ ಜನ ಮಾತನಾಡಿಕೊಳ್ಳುತ್ತಿರುವಂತೆ ಹೈದ್ರಾಬಾದ್‌ನಲ್ಲಿ ಈ ದುಬಾರಿ ಪೊರ್ಶೆ 911 GT3 ಕಾರನ್ನ ಖರೀದಿಸಿದ ಮೊದಲ ವ್ಯಕ್ತಿ ನಾಗಚೈತನ್ಯ. ಉಳಿದಂತೆ ಈ ಕಾಸ್ಟ್ಲೀ ಕಾರುಗಳನ್ನ ಹೊರತು ಪಡಿಸಿದರೆ ದುಬಾರಿ ಬೈಕ್ ಗಳು ಕೂಡ ನಾಗಚೈತನ್ಯ ಅವರ ಬಳಿ ಇವೆ.

ಸದ್ಯಕ್ಕೆ ನಾಗಚೈತನ್ಯ ಹೊಸ ಕಾರು ಖರೀದಿಸಿದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನೂ ಇದೇ ಸಮಯದಲ್ಲಿ ಕೇವಲ 2 ಸೀಟರ್ ಇರುವ ಈ ಕಾರಿನಲ್ಲಿ ನಾಗಚೈತನ್ಯ ಪಕ್ಕ ಕುಳಿತು ಪ್ರಯಾಣ ಮಾಡುವ ಆ ವ್ಯಕ್ತಿ ಯಾರು ಅನ್ನುವ ಚಿಂತೆ ಕೂಡ ಅನೇಕರಿಗೆ ಕಾಡುತ್ತಿದೆ. ಶೋಭಿತಾ ಧೂಳಿಪಾಲ ಅವರ ಜೊತೆ ಲಾಂಗ್ ಡ್ರೈವ್ ಹೋಗಲೆಂದೇ ನಾಗ ಚೈತನ್ಯ ಈ ಕಾರನ್ನ ಖರೀದಿಸಿರಬಹುದಾ ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ.

More from Filmibeat

English summary
Naga Chaitanya has made headlines with his latest purchase: a Porsche valued at ₹3.5 crore. Take a glimpse at his opulent car collection through these pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X