'ಲವ್ ಸ್ಟೋರಿ' ಭರ್ಜರಿ ಬಿಸಿನೆಸ್: ಮೂರು ದಿನಕ್ಕೆ ಗಳಿಸಿದ್ದೆಷ್ಟು?

ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಕೊರೊನಾ ಬಿಕ್ಕಟ್ಟಿನ ನಡುವೆಯೂ ಥಿಯೇಟರ್‌ನಲ್ಲಿ ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಒಳ್ಳೆಯ ಗಳಿಕೆ ಕಂಡಿದೆ.

ಸೆಪ್ಟೆಂಬರ್ 24 ರಂದು ಲವ್ ಸ್ಟೋರಿ ಚಿತ್ರ ವರ್ಲ್ಡ್‌ವೈಡ್ ತೆರೆಕಂಡಿದೆ. ಭಾರಿ ನಿರೀಕ್ಷೆಯೊಂದಿಗೆ ಪ್ರೇಕ್ಷಕರೆದುರು ಬಂದ ಈ ಚಿತ್ರಕ್ಕೆ ಮೊದಲ ವಾರ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ಮೂರು ದಿನಕ್ಕೆ ದಾಖಲೆ ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

ಲವ್ ಸ್ಟೋರಿ ಸಿನಿಮಾದ ಗಳಿಕೆ ಬಗ್ಗೆ ದಕ್ಷಿಣದ ಖ್ಯಾತ ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದು, ಮೊದಲ ಮೂರು ದಿನಕ್ಕೆ ವರ್ಲ್ಡ್‌ವೈಡ್ 38 ಕೋಟಿ ಬಾಚಿಕೊಂಡಿದೆಯಂತೆ. ಮೊದಲ ದಿನ 16 ಕೋಟಿ ಗಳಿಸಿದ್ದ ಲವ್ ಸ್ಟೋರಿ ವಾರಾಂತ್ಯಕ್ಕೆ 38 ಕೋಟಿ ಕಲೆಕ್ಷನ್ ಮಾಡಿ ಚಿತ್ರರಂಗಕ್ಕೆ ರಿಲೀಫ್ ಕೊಟ್ಟಿದೆ.

Naga chaitanya Love Story First weekend Collection

ಲವ್ ಸ್ಟೋರಿ ಸಿನಿಮಾದ ದಿನವಾರು ಗಳಿಕೆ ನೋಡಿದ್ರೆ....

- ಸೆಪ್ಟೆಂಬರ್ 24 ರಂದು ಶುಕ್ರವಾರ 16:73 ಕೋಟಿ

- ಸೆಪ್ಟೆಂಬರ್ 25 ಶನಿವಾರ 10:46 ಕೋಟಿ

- ಸೆಪ್ಟೆಂಬರ್ 26 ಭಾನುವಾರ 11:27 ಕೋಟಿ. ಈ ಮೂಲಕ ಮೂರು ದಿನ ದಿನಕ್ಕೆ 38:46 ಕೋಟಿ.

ಯುಎಸ್‌ ಬಾಕ್ಸ್ ಆಫೀಸ್‌ನಲ್ಲೂ ಲವ್ ಸ್ಟೋರಿ ಸಿನಿಮಾ ದಾಖಲೆಯ ಗಳಿಕೆ ಕಂಡಿದೆ. ಮೊದಲ ಮೂರು ದಿನಕ್ಕೆ ಯುಎಸ್‌ನಲ್ಲಿ 7.54 ಕೋಟಿ ಬಾಚಿಕೊಂಡಿದೆ ಎಂದು ವರದಿಯಾಗಿದೆ.

ನಾಗಚೈತನ್ಯ ವೃತ್ತಿ ಜೀವನದಲ್ಲಿ ಲವ್ ಸ್ಟೋರಿ ಸಿನಿಮಾ ಮೊದಲ ದಿನ ಹಾಗೂ ವಾರಾಂತ್ಯದಲ್ಲಿ ಅತ್ಯುತ್ತಮ ಗಳಿಕೆ ಕಾಣುವ ಮೂಲಕ ದಾಖಲೆ ಬರೆದಿದೆ. ವರದಿಗಳ ಪ್ರಕಾರ ಆಂಧ್ರ ಮತ್ತು ತೆಲಂಗಾಣದಲ್ಲಿ 700ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಇನ್ನು ವರ್ಲ್ಡ್‌ವೈಡ್ 1000ಕ್ಕೂ ಅಧಿಕ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರಿ-ರಿಲೀಸ್ ಬಿಸಿನೆಸ್‌ನಲ್ಲಿ ಲವ್ ಸ್ಟೋರಿ ಸಿನಿಮಾ 26 ಕೋಟಿ ಬಾಚಿಕೊಂಡಿದೆಯಂತೆ.

ಇನ್ನು ಶೇಖರ್ ಕಮ್ಮುಲ ಈ ಚಿತ್ರ ನಿರ್ದೇಶಿಸಿದ್ದು, ನಾರಾಯಣ್ ದಾಸ್ ಕೆ ನಾರಂಗ್, ಪುಷ್ಕರ್ ರಾಮ್ ಮೋಹನ್ ರಾವ್ ಜಂಟಿಯಾಗಿ ನಿರ್ಮಿಸಿದ್ದಾರೆ. ನಾಗಚೈತನ್ಯ, ಸಾಯಿ ಪಲ್ಲವಿ ಜೊತೆ ದೇವಯಾನಿ, ರಾವ್ ರಮೇಶ್, ಪೋಸನಿ ಕೃಷ್ಣ ಮುರಳಿ, ರಾಜೀವ್ ಕನಕಾಲ. ಈಶ್ವರಿ ರಾವ್ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Telugu actor Naga chaitanya and sai pallavi starrer Love Story movie First weekend Collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X