ಮತ್ತೆ ಒಂದೇ ಸಿನಿಮಾದಲ್ಲಿ ನಾಗ ಚೈತನ್ಯ - ಸಮಂತಾ; ಸಖತ್ ಕ್ರೇಜಿ ಎಂದ ಚೈತನ್ಯಾ!

ಡಿವೋರ್ಸ್ ಘೋಷಿಸಿದ ಬಳಿಕ ನಾಗಚೈತನ್ಯಾ- ಸಮಂತಾ ಜೋಡಿ ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಬ್ಯುಸಿ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಚೈತನ್ಯ ಡಿವೋರ್ಸ್ ಹಾಗೂ ಮಾಜಿ ಪತ್ನಿ ಸಮಂತಾ ಬಗ್ಗೆ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.

ನಾಗಚೈತನ್ಯಾ ನಟನೆಯ 'ಲಾಲ್‌ ಸಿಂಗ್ ಚಡ್ಡಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಡಿವೋರ್ಸ್ ನಂತರ ಚೈತು ಆ ಬಗ್ಗೆ ಎಲ್ಲೂ ಅಷ್ಟಾಗಿ ಮಾತನಾಡಲಿಲ್ಲ. ಆದರೆ ಸ್ಯಾಮ್ ಮಾತ್ರ ಚೈತು ಕುರಿತು ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಅದಕ್ಕೆ ತಕ್ಕಂತೆ ಅಕ್ಕಿನೇನಿ ಫ್ಯಾಮಿಲಿ ಅಭಿಮಾನಿಗಳು ಸೃಷ್ಟಿಸಿದ ಗಾಸಿಪ್‌ಗಳು, ನೆಗೆಟಿವ್ ಕಾಮೆಂಟ್‌ಗಳು ಸಮಂತಾ ಅಸಮಾಧಾನಕ್ಕೆ ಕಾರಣವಾಗಿತ್ತು. ಅದೇ ಕಾರಣಕ್ಕೆ ಆಕೆ ಮಾಜಿ ಪತಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಂತೆ ಕಾಣುತ್ತಿತ್ತು. ಇತ್ತೀಚೆಗೆ 'ಕಾಫಿ ವಿತ್ ಕರಣ್' ಶೋನಲ್ಲೂ ಟಾಲಿವುಡ್ ಬೇಬಿಯ ವರ್ತನೆ ಅದೇ ರೀತಿ ಇತ್ತು. ಆದರೆ ಚೈತು ಮಾತ್ರ ಇದಕ್ಕೆ ವಿರುದ್ಧವಾಗಿ ಸಮಂತಾ ಬಗ್ಗೆ ಮಾತನಾಡುತ್ತಿದ್ದಾರೆ.

'ಲಾಲ್‌ ಸಿಂಗ್ ಚಡ್ಡಾ' ಸಿನಿಮಾ ಪ್ರಚಾರ ಭಾಗವಾಗಿ ನಾಗಚೈತನ್ಯಾ ಯೂಟ್ಯೂಬ್‌ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಖಾಸಗಿ ಜೀವನದ ಕುರಿತು ಮೌನ ಮುರಿದಿದ್ದಾರೆ. "ಗಾಸಿಪ್‌ಗಳ ಬಗ್ಗೆ ಆರಂಭದಲ್ಲಿ ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದೆ. ಆದರೆ ಈಗ ಅದರ ಬಗ್ಗೆ ನಾನು ಯೋಚಿಸಲ್ಲ. ನನ್ನ ಆಲೋಚನೆ ಏನಿದ್ದರೂ ಸಿನಿಮಾ ಕೆಲಸಗಳ ಕಡೆ ಅಷ್ಟೇ" ಎಂದು ಚೈತನ್ಯ ಹೇಳಿದ್ದಾರೆ.

 ಡಿವೋರ್ಸ್ ಬಗ್ಗೆ ಎಲ್ಲಾ ಹೇಳಿದ್ದೇವೆ- ಚೈತನ್ಯಾ

ಡಿವೋರ್ಸ್ ಬಗ್ಗೆ ಎಲ್ಲಾ ಹೇಳಿದ್ದೇವೆ- ಚೈತನ್ಯಾ

"ನನ್ನ ವೃತ್ತಿ ಜೀವನದಲ್ಲಿ ನನ್ನ ಸಿನಿಮಾ ಸಾಧನೆಗಿಂತ ನನ್ನ ವೈಯಕ್ತಿಕ ಜೀವನದ ಸಂಗತಿಗಳು ಸುದ್ದಿಯಾಗುತ್ತಿರುವುದು ತುಂಬಾ ಬೇಸರ ತಂದಿದೆ. ನನ್ನ ವೈಯಕ್ತಿಕ ಜೀವನದ ಪ್ರಮುಖ ವಿಷಯಗಳನ್ನು ನಾನು ಹೇಳಿಕೆಯ ರೂಪದಲ್ಲಿ ಹೇಳುತ್ತೇನೆ. ಒಳ್ಳೆಯದು ಅಥವಾ ಕೆಟ್ಟದು, ನಾನು ಎಲ್ಲರೊಂದಿಗೆ ಹಂಚಿಕೊಳ್ಳಬೇಕಾದ ನನ್ನ ಜೀವನದ ಎಲ್ಲಾ ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. ಡಿವೋರ್ಸ್ ವಿಚಾರದಲ್ಲೂ ನಾನು ಹಾಗೂ ಸಮಂತಾ ಅದೇ ಕೆಲಸ ಮಾಡಿದ್ದೇವೆ. ನಾವಿಬ್ಬರೂ ಹೇಳಬೇಕೆಂದಿದ್ದನ್ನು ಹೇಳಿದ್ದೇವೆ" ಎಂದು ನಾಗಚೈತನ್ಯಾ ತಿಳಸಿದ್ದಾರೆ.

 ಸಮಂತಾ ಜೊತೆ ಮತ್ತೆ ಸಿನಿಮಾ?

ಸಮಂತಾ ಜೊತೆ ಮತ್ತೆ ಸಿನಿಮಾ?

"ಈ ಹಿಂದೆ ನನ್ನ ಮತ್ತು ಸಮಂತಾ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ಬಹಳ ಚೆನ್ನಾಗಿತ್ತು" ಅಂತ ಚೈತು ಹೇಳಿದ್ದರು. ಹಾಗಾಗಿ ಮತ್ತೆ ಸಮಂತಾ ಜೊತೆ ನಟಿಸುತ್ತೀರಾ? ಅನ್ನುವ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ ಚೈತು "ನಾನೇನು ಹೇಳಲಾರೆ. ನಾವಿಬ್ಬರು ಜೊತೆಯಾಗಿ ನಟಿಸಿದರೆ ಸಖತ್ ಕ್ರೇಜಿಯಾಗಿ ಇರುತ್ತದೆ. ಆದರೆ ಅದು ಆಗುತ್ತಾ ? ಇಲ್ವಾ ? ಅನ್ನುವುದು ನನಗೆ ಗೊತ್ತಿಲ್ಲ. ಮುಂದೆ ಏನಾಗುತ್ತೋ ನೋಡೋಣ" ಎಂದು ಚೈತು ಹೇಳಿದ್ದಾರೆ.

 ಸೋಶಿಯಲ್ ಮೀಡಿಯಾ ಬಗ್ಗೆ ಚೈತು ಮಾತು

ಸೋಶಿಯಲ್ ಮೀಡಿಯಾ ಬಗ್ಗೆ ಚೈತು ಮಾತು

"ಒಂದು ಸುದ್ದಿ ಮತ್ತೊಂದು ಸುದ್ದಿಯನ್ನು ಬದಲಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ನಡೆಯುತ್ತಿರುವ ಎಲ್ಲಾ ಪ್ರಚಾರಗಳು ಬರೀ ತಾತ್ಕಾಲಿಕ. ಈ ಸುದ್ದಿಗೆ ನಾನು ಪ್ರತಿಕ್ರಿಯಿಸಿದರೆ, ಇನ್ನಷ್ಟು ಸುದ್ದಿಗಳು ಹೊರಬರುತ್ತವೆ. ನನಗೆ ಅದು ಇಷ್ಟವಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದ ಸುದ್ದಿಗಳತ್ತ ಗಮನ ಹರಿಸುವುದಿಲ್ಲ" ಎಂದು ನಾಗಚೈತನ್ಯಾ ವಿವರಿಸಿದ್ದಾರೆ.

 ಬಾಲಿವುಡ್‌ಗೆ ನಾಗಚೈತನ್ಯಾ

ಬಾಲಿವುಡ್‌ಗೆ ನಾಗಚೈತನ್ಯಾ

ಇತ್ತೀಚೆಗೆ ನಾಗಚೈತ್ಯ ನಟನೆಯ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಎರಡು ವಾರದ ಹಿಂದೆಯಷ್ಟೆ ರಿಲೀಸ್ ಆದ 'ಥ್ಯಾಂಕ್ ಯೂ' ಚಿತ್ರ ಕೂಡ ಮುಗ್ಗರಿಸಿದೆ. ಸದ್ಯ ಆಮಿರ್ ಖಾನ್‌ ನಟನೆ 'ಲಾಲ್‌ ಸಿಂಗ್ ಚಡ್ಡಾ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಚೈತು ಬಣ್ಣ ಹಚ್ಚಿದ್ದು, ಆಗಸ್ಟ್ 11ಕ್ಕೆ ಸಿನಿಮಾ ತೆರೆಗೆ ಬರಲಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ನಾಗಚೈತನ್ಯಾ ಬ್ಯುಸಿಯಾಗಿದ್ದಾರೆ.

More from Filmibeat

English summary
Naga Chaitanya Open to Act With Ex Wife Samantha,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X