ನನ್ನ- ಸಾಯಿಪಲ್ಲವಿ ಸಾಂಗ್ ನೋಡಿ ಶೋಭಿತಾ ಮಾತು ಬಿಟ್ಟಿದ್ಲು; ನಮ್ಮ ಲವ್ ಶುರುವಾಗಿದ್ದು ಹೇಗಂದ್ರೆ?- ನಾಗಚೈತನ್ಯಾ

ತೆಲುಗು ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ನಟಿ ಶೋಭಿತಾರನ್ನು ಚೈತು ಪ್ರೀತಿಸಿ 2ನೇ ಮದುವೆ ಆಗಿದ್ದಾರೆ. ತಮ್ಮಿಬ್ಬರ ಲವ್ ಸ್ಟೋರಿ ಬಗ್ಗೆ ಇದೇ ಮೊದಲ ಬಾರಿಗೆ ನಾಗಾರ್ಜುನ ಪುತ್ರ ಮಾತನಾಡಿದ್ದಾರೆ.

ತೆಲುಗಿನ 'ಜಯಮ್ಮು ನಿಶ್ಚಯಮ್ಮುರಾ' ಶೋನಲ್ಲಿ ನಾಗಚೈತನ್ಯಾ ಭಾಗಿ ಆಗಿದ್ದಾರೆ. ವೀಕೆಂಡ್ ವಿತ್ ರಮೇಶ್ ಶೈಲಿಯ ಟಾಕ್ ಶೋ ಇದು. ನಟ ಜಗಪತಿ ಬಾಬು ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅತಿಥಿಗಳಿಗೆ ಒಂದಷ್ಟು ಸರ್‌ಪ್ರೈಸ್‌ಗಳನ್ನು ಕೊಡುತ್ತಾ ಶೋ ನಡೆಸಲಾಗುತ್ತದೆ. ನಟ ನಾಗಚೈತನ್ಯ ಶೋನಲ್ಲಿ ಭಾಗಿ ಆಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೋಭಿತಾ ಒಮ್ಮೆ ಮುನಿಸಿಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

Naga Chaitanya Opens Up About Love Story with Shobhita and Reveals Why Bujjithalli Song Caused a Rift

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿದ್ದ 'ತಂಡೇಲ್' ಸಿನಿಮಾ ಸಕ್ಸಸ್ ಕಂಡಿತ್ತು. ಚಿತ್ರದ 'ಬುಜ್ಜಿತಲ್ಲಿ' ಸಾಂಗ್ ಹಿಟ್ ಆಗಿತ್ತು. ಚೈತು ಎಲ್ಲೇ ಹೋದರೂ ಬಂದರೂ ಈ ಸಾಂಗ್ ಸದ್ದು ಮಾಡುತ್ತಿತ್ತು. ಆದರೆ ಇದೇ ಸಾಂಗ್ ನನ್ನ ಹಾಗೂ ಶೋಭಿತಾ ನಡುವೆ ಅಂತರ ತಂದಿತ್ತು ಎಂದು ನಾಗಚೈತನ್ಯಾ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಚೈತು ವಿವರಿಸಿದ್ದಾರೆ.

"ಶೋಭಿತಾಳನ್ನು ನಾನು ಪ್ರೀತಿಯಿಂಧ ಬುಜ್ಜಿತಲ್ಲಿ ಎಂದು ಕರೆಯುತ್ತೇನೆ. ಆದರೆ ಇದೇ ಹೆಸರನಲ್ಲಿ 'ತಂಡೇಲ್' ಚಿತ್ರದ ನಾಯಕಿಗೆ ಇಡಲಾಗಿತ್ತು. ಒಂದು ಹಾಡು ಬಂದಿದ್ದಕ್ಕೆ ಶೋಭಿತಾ ಅಪ್‌ಸೆಟ್ ಆಗಿದ್ಲು. ಮುನಿಸಿಕೊಂಡು ನನ್ನ ಬಳಿ ಕೆಲ ದಿನಗಳ ಕಾಲ ಮಾತನಾಡಲಿಲ್ಲ. ನಾನೇ ನಾಯಕಿ ಪಾತ್ರಕ್ಕೆ ಆ ಹೆಸರು ಸೂಚಿಸಿದ್ದೆ ಎಂದುಕೊಂಡಿದ್ದಳು. ಆದರೆ ನಾನ್ಯಾಕೆ ಹಂಗೆ ಮಾಡ್ಲಿ? ಎಂದು ಚೈತು ನಕ್ಕಿದ್ದಾರೆ.

Naga Chaitanya Opens Up About Love Story with Shobhita and Reveals Why Bujjithalli Song Caused a Rift

ಗಂಡ ಹೆಂಡತಿ ಸಂಬಂಧದ ಬಗ್ಗೆ ಮಾತನಾಡಿ "ಗಂಡ- ಹೆಂಡತಿ ಅಂದಮೇಲೆ ಜಗಳ ಸರ್ವೇಸಾಮಾನ್ಯ. ಇಬ್ಬರ ನಡುವೆ ಜಗಳ ನಡೆಯದಿದ್ದರೆ ಅವರಿಬ್ಬರ ರಿಲೇಷನ್‌ಶಿಪ್ ನಿಜಾಲ್ಲ ಎಂದೇ ಅರ್ಥ" ಎಂದು ಹೇಳಿದ್ದಾರೆ. ಇನ್ನು ಇದೇ ಶೋನಲ್ಲಿ ತಮ್ಮ ಹಾಗೂ ಶೋಭಿತಾ ಲವ್ ಸ್ಟೋರಿ ಬಗ್ಗೆಯೂ ಮಾತನಾಡಿದ್ದಾರೆ.

"ನಾನು ಒಮ್ಮೆ ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ಕ್ಲೌಡ್ ಕಿಚನ್ ಬಗ್ಗೆ ಪೋಸ್ಟ್ ಮಾಡಿದ್ದೆ. ಅದಕ್ಕೆ ಶೋಭಿತಾ ಪ್ರತಿಕ್ರಿಯಿಸಿ ಎಮೋಜಿ ಕಾಮೆಂಟ್ ಮಾಡಿದ್ದಳು. ಕೂಡಲೇ ನಾನು ಕೂಡ ರಿಪ್ಲೇ ಮಾಡಿದ್ದೆ. ಬಳಿಕ ಚಾಟ್ ಮಾಡಲು ಆರಂಭಿಸಿದೆವು. ಬಳಿಕ ಆ ಪರಿಚಯ ಪ್ರೀತಿಯಾಗಿ ಬದಲಾಯಿತು. ನನ್ನ ಜೀವನ ಸಂಗಾತಿಯನ್ನು ಹೀಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಕಿಕೊಳ್ಳುತ್ತೇನೆ ಅಂತ ಅಂದುಕೊಂಡಿರಲಿಲ್ಲ" ಎಂದು ಚೈತು ಹೇಳಿದ್ದಾರೆ.

ಇದೇ ಶೋನಲ್ಲಿ "ನೀವು ಯಾವುದನ್ನು ಬಿಟ್ಟು ಬದುಕುವುದಿಲ್ಲ?" ಎನ್ನುವ ಪ್ರಶ್ನೆಗೆ "ನನ್ನ ಶೋಭಿತಾಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ" ಎಂದು ನಟ ನಾಗಚೈತನ್ಯಾ ಹೇಳಿದ್ದಾರೆ. ತಾತ ಅಕ್ಕಿನೇನಿ ನಾಗೇಶ್ವರ ರಾವ್, ತಂದೆ ನಾಗಾರ್ಜುನಾ ಹಾದಿಯಲ್ಲೇ ನಾಗಚೈತನ್ಯ ಚಿತ್ರರಂಗಕ್ಕೆ ಬಂದವರು. ಆದರೆ ದೊಡ್ಡ ಗೆಲುವು ಸಿಗಲಿಲ್ಲ.

ಸದ್ಯ ಕಾರ್ತಿಕ್ ದಂಡು ನಿರ್ದೇಶನದ ಚಿತ್ರದಲ್ಲಿ ನಾಗಚೈತನ್ಯ ನಟಿಸುತ್ತಿದ್ದಾರೆ. ಡಿವೋರ್ಸ್ ಬಳಿಕ ಸಮಂತಾ ಕೂಡ 2ನೇ ಮದುವೆ ಆಗುತ್ತಾರೆ ಎಂದು ಗುಲ್ಲಾಗಿತ್ತು. ನಿರ್ದೇಶಕ ರಾಜ್ ನಿಡಿಮುರಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಡಿವೋರ್ಸ್ ಬಳಿಕ ಸಮಂತಾ ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದರು. ಅದರ ವಿರುದ್ಧ ಹೋರಾಟ ಮಾಡಲು ಆರಂಭಿಸಿದ್ದರು. ಹಾಗಾಗಿ ಸಿನಿಮಾಗಳಿಂದ ಅಂತರ ಕಾಯ್ದುಕೊಳ್ಳುವಂತಾಗಿತ್ತು. ಇನ್ನು 'ಶುಭಂ' ಎಂ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಅದೃಷ್ಟ ಪರೀಕ್ಷಿಸಿಕೊಂಡಿದ್ದರು. ಚಿತ್ರದಲ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ತಕ್ಕ ಮಟ್ಟಿಗೆ ಸಿನಿಮಾ ಸದ್ದು ಮಾಡಿತ್ತು.

More from Filmibeat

English summary
‘Bujjithalli’ Song Created Distance Between Us, Says Naga Chaitanya About Shobhita
Read more about: naga chaitanya tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X