For Quick Alerts
  ALLOW NOTIFICATIONS  
  For Daily Alerts

  ಶೋಭಿತಾ ಧುಲಿಪಾಲ ಜೊತೆಗಿನ ಗಾಸಿಪ್ ಬಗ್ಗೆ ನಾಗಚೈತನ್ಯ ಪ್ರತಿಕ್ರಿಯೆ!

  |

  ನಾಗಚೈತನ್ಯ ಮತ್ತು ಸಮಂತಾ ಸೌತ್ ಸಿನಿಮಾರಂಗದಲ್ಲಿ ಸೂಪರ್ ಜೋಡಿಗಳ ಸಾಲಿಗೆ ಸೇರಿದ್ದರು. ಆದರೆ ಅಷ್ಟೇ ಬೇಗ ಆ ಪಟ್ಟದಿಂದ ಕೆಳಗೆ ಇಳಿದಿದ್ದಾರೆ. ನಾಗಚೈತನ್ಯ, ಸಮಂತಾ ಅತ್ಯುತ್ತಮ ದಂಪತಿಗಳು ಎನ್ನುವ ನಂಬಿಕೆಯನ್ನು ಸುಳ್ಳು ಮಾಡಿ ವಿಚ್ಛೇದನ ಪಡೆದು ದೂರಾಗಿದ್ದಾರೆ.

  ಈ ಜೋಡಿಯ ವಿಚ್ಛೇದನವನ್ನು ಅಷ್ಟು ಸುಲಭಕ್ಕೆ ಯಾರು ಒಪ್ಪಿರಲಿಲ್ಲ. ಇವರ ವಿಚ್ಛೇದನದ ವಿಚಾರವೇ ಒಂದು ರೀತಿ ಶಾಕಿಂಗ್ ಆಗಿತ್ತು. ವಿಚ್ಛೇದನದ ಬಳಿಕೆ ಈ ಜೋಡಿಯ ಬಗ್ಗೆ ಹಲವು ಗಾಸಿಪ್‌ಗಳು ಹಬ್ಬಿವೆ. ಈ ಜೋಡಿಯ ಎರಡನೇ ಮದುವೆ ಬಗ್ಗೆಯೂ ಹತ್ತಾರು ಗಾಪಿಸ್‌ಗಳು ಬಂದು ಹೋಗಿವೆ. ಅದರಲ್ಲಿ ನಟ ನಾಗಚೈತನ್ಯ 2ನೇ ಮದುವೆ ಬಗ್ಗೆಯೇ ಹೆಚ್ಚು ಚರ್ಚೆ ಆಗಿದೆ.

  ಸಲ್ಮಾನ್ ಖಾನ್‌ ಚಿತ್ರಕ್ಕಾಗಿ ಸಮಂತಾ, ರಶ್ಮಿಕಾ ಪೈಪೋಟಿ!ಸಲ್ಮಾನ್ ಖಾನ್‌ ಚಿತ್ರಕ್ಕಾಗಿ ಸಮಂತಾ, ರಶ್ಮಿಕಾ ಪೈಪೋಟಿ!

  ಸಮಂತಾ ನಾಗಚೈತನ್ಯ ದೂರಾದ ಬಳಿಕ, ಮತ್ತೊಬ್ಬ ನಟಿಯ ಜೊತೆಗೆ ನಾಗಚೈತನ್ಯ ಹೆಸರು ಕೇಳಿ ಬರುತ್ತಿದೆ. ಇಷ್ಟು ದಿನ ಡೇಟಿಂಗ್‌ನಲ್ಲಿ ಇದ್ದ ಈ ಗುಸು, ಗುಸು ಈಗ ಮದುವೆ ತನಕ ಹೋಗಿದೆ ಎನ್ನುವ ಬಗ್ಗೆಯೂ ಸುದ್ದಿ ಹರಿದಾಡಿತ್ತು. ಈ ಬಗ್ಗೆ ನಾಗಚೈತನ್ಯ ಈಗ ಪ್ರತಿಕ್ರಿಯೆ ನೀಡಿದ್ದಾರೆ.

  ಶೋಭಿತಾ, ನಾಗಚೈತನ್ಯ ಡೇಟಿಂಗ್ ಸುದ್ದಿ!

  ಶೋಭಿತಾ, ನಾಗಚೈತನ್ಯ ಡೇಟಿಂಗ್ ಸುದ್ದಿ!

  ತೆಲುಗು ನಟಿ ಶೋಭಿತಾ ಧುಲಿಪಾಲ ಜೊತೆಗೆ ನಟ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಕದ್ದು ಮುಚ್ಚಿ ಡೇಟಿಂಗ್‌ನಲ್ಲಿ ಬ್ಯುಸಿ ಇದೆ ಎನ್ನಲಾಗಿತ್ತು. ಅಲ್ಲದೇ ಇವರು ಐಷರಾಮಿ ಹೋಟೆಲ್‌ಗಳಲ್ಲೇ ಡೇಟಿಂಗ್ ಮಾಡುತ್ತಿದ್ದರು. ಶೋಭಿತಾ ನಾಗಚೈತನ್ಯರ ಹೊಸ ಪ್ರೇಮಿ ಎನ್ನುವ ಸುದ್ದಿ ತೆಲುಗು ಚಿತ್ರರಂಗದಲ್ಲಿ ಜೋರಾಗಿತ್ತು. ಆದರೆ ಇದೆಲ್ಲವು ಗಾಸಿಪ್ ರೂಪದಲ್ಲಿ ಹರಿದಾಡುತ್ತಿದೆ.

  ನಾಗಚೈತನ್ಯ ಎರಡನೇ ಮದುವೆ?

  ನಾಗಚೈತನ್ಯ ಎರಡನೇ ಮದುವೆ?

  ನಾಗಚೈತನ್ಯ ಮತ್ತು ಶೋಭಿತಾ ಧುಲಿಪಾಲ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ಬಳಿಕ, ಈ ಜೋಡಿ ಹಲವು ಬಾರಿ ಡೇಟಿಂಗ್ ಹೋಗಿದ್ದು, ಹೋಟೆಲ್‌ನಲ್ಲಿ ಮೀಟ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ ಇದೆಲ್ಲವೂ ಗಾಸಿಪ್ ರೂಪದಲ್ಲೇ ಇದೆ. ಈಗ ಇದಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ. ಶೋಭಿತಾಳನ್ನು ನಾಗಚೈತನ್ಯ ಮದುವೆ ಆಗುತ್ತಾರೆ ಎನ್ನಲಾಗುತ್ತಿದೆ. ಇದಕ್ಕೆ ನಾಗಚೈತನ್ಯ ಕುಟುಂಬದ ಒಪ್ಪಿಗೆಯೂ ಇದೆ ಎನ್ನಲಾಗಿತ್ತು.

  ಶೋಭಿತಾ ಬಗ್ಗೆ ನಾಗಚೈತನ್ಯ ಮಾತು!

  ಶೋಭಿತಾ ಬಗ್ಗೆ ನಾಗಚೈತನ್ಯ ಮಾತು!

  ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ನಟ ನಾಗಚೈತನ್ಯಗೆ ಹಲವರ ಬಗ್ಗೆ ಪ್ರಶ್ನೆ ಕೇಳಲಾಯ್ತು. ವಿಜಯ್ ದೇವರಕೊಂಡ, ರಾಶಿ ಖಾನ್ನಾ, ಕೃತಿ ಶೆಟ್ಟಿ ಮತ್ತು ಶೋಭಿತಾ ಧುಲಿಪಾಲ ಬಗ್ಗೆ ಪ್ರಶ್ನೆ ಕೇಳಲಾಯಿತು. ಎಲ್ಲರ ಬಗ್ಗೆ ಸರಿಯಾಗಿ ಉತ್ತರ ಕೊಟ್ಟ ನಾಗಚೈತನ್ಯ, ಶೋಭಿತಾ ಬಗ್ಗೆ ವಿಭಿನ್ನ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಶೋಭಿತಾ ಧುಲಿಪಾಲ ಹೆಸರು ಕೇಳಿದಾಕ್ಷಣ ಜೋರಾಗಿ ನಕ್ಕ ನಾಗಚೈತನ್ಯ. "ಈ ಪ್ರಶ್ನೆಗೆ ನಾಗು ನಕ್ಕು ಸ್ಮೈಲ್ ಮಾಡುತ್ತೇನೆ ಅಷ್ಟೆ" ಎಂದಿದ್ದಾರೆ.

  ಸಮಂತಾ ಪ್ರತಿಕ್ರಿಯೆ!

  ಸಮಂತಾ ಪ್ರತಿಕ್ರಿಯೆ!

  ಹೀಗೆ ನಾಗಚೈತ್ಯ ಡೇಟಿಂಗ್ ವಿಚಾರದಲ್ಲಿ ಸಮಂತಾ ಹೆಸರು ಕೇಳಿ ಬಂದಿದ್ದಕ್ಕೆ, ನಟಿ ಸಮಂತಾ ಉತ್ತರ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸಮಂತಾ, "ಹುಡುಗಿಯರ ಬಗ್ಗೆ ಗಾಸಿಪ್ ಬಂದರೆ, ಅದು ನಿಜವೆಂದು ನಂಬಲಾಗುತ್ತದೆ. ಹುಡುಗರ ಬಗ್ಗೆ ಗಾಸಿಪ್ ಬಂದರೆ ಇದಕ್ಕೆ ಹುಡುಗಿಯೇ ಕಾರಣ, ಎನ್ನುತ್ತೀರಾ. ಬುದ್ಧಿವಂತರಾಗಿ. ಜಗತ್ತು ಮುಂದುವರೆಯುತ್ತಿದೆ. ನೀವೂ ಕೂಡ ಮುಂದುವರೆಯಿರಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆಗೆ ಹೆಚ್ಚಿನ ಗಮನ ಕೊಡಿ. ಮುಂದೆ ಸಾಗಿ." ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

  Recommended Video

  ಅತಿ ಹೆಚ್ಚು ಲಾಭ ಮಾಡಿದ ಸಿನಿಮಾ ಯಾವುದು? | KGF2 | RRR | 777 Charlie | Filmibeat Kannada
  English summary
  Naga Chaitanya React to Gossips With Sobhita Dhulipala, Know More,
  Wednesday, August 3, 2022, 16:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X