ವಿಚ್ಛೇಧನದ ಬಳಿಕ ಮೊದಲ ಬಾರಿಗೆ ಸಮಂತಾ ಬಗ್ಗೆ ಮಾತನಾಡಿದ ನಾಗ ಚೈತನ್ಯ

ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನ ಕಳೆದ ವರ್ಷದ ಮುಖ್ಯ ಸೆಲೆಬ್ರಿಟಿ ವಿಚ್ಛೇಧನವಾಗಿ ಸುದ್ದಿಯಲ್ಲಿತ್ತು. ಇವರಿಬ್ಬರ ವಿಚ್ಛೇಧನದ ಸುದ್ದಿ ಈ ವರ್ಷವೂ ಮುಂದುವರೆದಿದೆ.

ವಿಚ್ಛೇಧನದ ಬಳಿಕ ನಟಿ ಸಮಂತಾ ವಿರುದ್ಧ ಹಲವು ಕೀಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಯಿತು. ಸಮಂತಾಗೆ ಅನೈತಿಕ ಸಂಬಂಧ ಇದೆಯೆಂದು, ಸಮಂತಾಗೆ ಮಗು ಪಡೆಯಲು ಇಷ್ಟವಿರಲಿಲ್ಲವೆಂದು ಹೀಗೆ ನಾನಾ ವಿಧದ ಆರೋಪಗಳನ್ನು ಹಲವರು ಮಾಡಿದರು. ಇದರಿಂದ ಮನನೊಂದ ಸಮಂತಾ ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ದಾವೆ ಸಹ ಹೂಡಿದರು.

ಸಮಂತಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಸುದ್ದಿಗಳು ಪ್ರಸಾರವಾದಾಗ ಮಾಜಿ ಪತಿ ನಾಗ ಚೈತನ್ಯ ಮೌನವಾಗಿದ್ದರು. ಸಮಂತಾರ ಬಗ್ಗೆ ಪ್ರಕಟವಾದ ಯಾವ ಸುದ್ದಿಯನ್ನೂ ನಾಗ ಚೈತನ್ಯ ವಿರೋಧಿಸಲಿಲ್ಲ, ಸ್ಪಷ್ಟನೆ ನೀಡಲಿಲ್ಲ. ನಾಗ್‌ ಅವರ ಈ ಮೌನ ಟೀಕೆಗೆ ಒಳಗಾಯಿತು. ಇದೀಗ ಮೊದಲ ಬಾರಿಗೆ ನಾಗ ಚೈತನ್ಯ ತಮ್ಮ ವಿಚ್ಛೇಧನದ ಕುರಿತು ಮಾತನಾಡಿದ್ದಾರೆ.

ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

ಇದೀಗ ತಮ್ಮ ಹೊಸ ಸಿನಿಮಾ 'ಬಂಗಾರ್ರಾಜು' ಬಿಡುಗಡೆ ಹೊಸ್ತಿಲಲ್ಲಿರುವಾಗ ಸಿನಿಮಾದ ಪ್ರಚಾರಕ್ಕಾಗಿ ಹಲವು ಸಂದರ್ಶನಗಳನ್ನು ನಾಗ ಚೈತನ್ಯ ನೀಡುತ್ತಿದ್ದಾರೆ. ಸಂದರ್ಶನವೊಂದರಲ್ಲಿ ವಿಚ್ಛೇಧನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರುವ ನಾಗ ಚೈತನ್ಯ, ''ಇಬ್ಬರ ಒಳಿತಾಗಿ ತೆಗೆದುಕೊಂಡ ನಿರ್ಣಯವದು. ಆಕೆ ಸಂತೋಶವಾಗಿದ್ದರೆ, ನಾನೂ ಸಂತೋಶವಾಗಿರುತ್ತೇನೆ. ಆ ಸಂದರ್ಭದಲ್ಲಿ ಈ (ವಿಚ್ಛೇಧನ) ನಿರ್ಣಯ ಸೂಕ್ತ ಎನಿಸಿತು ಹಾಗಾಗಿ ನಿರ್ಣಯ ತೆಗೆದುಕೊಂಡೆವು'' ಎಂದಿದ್ದಾರೆ ನಾಗ ಚೈತನ್ಯ.

ಸಮಂತಾರ ಬೋಲ್ಡ್ ಪಾತ್ರಗಳಿಗೆ ನಾಗ ಚೈತನ್ಯ ವಿರೋಧ?

ಸಮಂತಾರ ಬೋಲ್ಡ್ ಪಾತ್ರಗಳಿಗೆ ನಾಗ ಚೈತನ್ಯ ವಿರೋಧ?

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಗ ಚೈತನ್ಯ, ''ನನ್ನ ಕುಟುಂಬದ ಗೌರವಕ್ಕೆ ಹಾನಿಯಾಗುವ ಯಾವುದೇ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ನಾನು ನಟಿಸುವುದಿಲ್ಲ'' ಎಂದಿದ್ದರು. ನಾಗ್ ಅವರು ಈ ಮಾತನ್ನು ಸಮಂತಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂದೇ ಹೇಳಲಾಯಿತು. ಮದುವೆ ಬಳಿಕವೂ ಸಮಂತಾ ಕೆಲವು ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಂಡಿದ್ದರು. ಅದರಲ್ಲಿಯೂ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಕೆಲವು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದು ನಾಗ ಚೈತನ್ಯ ಮತ್ತು ಅಕ್ಕಿನೇನಿ ಕುಟುಂಬಕ್ಕೆ ಹಿಡಿಸಿರಲಿಲ್ಲ ಎನ್ನಲಾಗಿತ್ತು.

ವಿಚ್ಛೇಧನದ ಬಳಿಕ ನಟನೆಯಲ್ಲಿ ಬ್ಯುಸಿ ಸಮಂತಾ

ವಿಚ್ಛೇಧನದ ಬಳಿಕ ನಟನೆಯಲ್ಲಿ ಬ್ಯುಸಿ ಸಮಂತಾ

ವಿಚ್ಛೇಧನದ ಬಳಿಕ ಕೆಲ ತಿಂಗಳು ತೀವ್ರ ಮಾನಸಿಕ ನೋವನ್ನು ಅನುಭವಿಸಿದ್ದಾಗಿ ಸಮಂತಾ ಹೇಳಿಕೊಂಡಿದ್ದರು. ಸಮಂತಾ ವಿರುದ್ಧ ಹರಿದಾಡಿದ ಕೆಟ್ಟ ಸುದ್ದಿಗಳು, ವಿಚ್ಛೇದನದ ನೋವು ಇನ್ನೂ ಹಲವು ವಿಷಯಗಳು ಸಮಂತಾರನ್ನು ಬಾಧಿಸಿದ್ದವು. ಬಳಿಕ ಸ್ನೇಹಿತರು, ಹಿತೈಷಿಗಳ ನೆರವಿನಿಂದ ವೃತ್ತಿ ಜೀವನಕ್ಕೆ ಮರಳಿದರು ಸಮಂತಾ. ವಿಚ್ಛೇಧನದ ಬಳಿಕ ಹಲವು ಪ್ರವಾಸಗಳನ್ನು ಸಮಂತಾ ಮಾಡಿದರು. ಹಲವು ಸಿನಿಮಾಗಳನ್ನು ಒಪ್ಪಿಕೊಂಡರು. ಮೊತ್ತ ಮೊದಲ ಬಾರಿಗೆ 'ಪುಷ್ಪ' ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದರು.

11 ವರ್ಷಗಳ ಪ್ರೀತಿ ಪೂರ್ಣವಿರಾಮ

11 ವರ್ಷಗಳ ಪ್ರೀತಿ ಪೂರ್ಣವಿರಾಮ

ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ತಮ್ಮ 11 ವರ್ಷಗಳ ಪ್ರೀತಿಯನ್ನು ಕಳೆದ ವರ್ಷ ವಿಚ್ಛೇಧನದ ಮೂಲಕ ಅಂತ್ಯಗೊಳಿಸಿದರು. 2010ರಿಂದಲೂ ಈ ಜೋಡಿ ಪ್ರೀತಿಸುತ್ತಿತ್ತು. 2017 ರಲ್ಲಿ ಮನೆಯರ ಒಪ್ಪಿಗೆ ಮೇರೆಗೆ ವಿವಾಹವಾದರು. ಬಳಿಕ ಕಳೆದ ವರ್ಷ ಅಕ್ಟೋಬರ್‌ ನಲ್ಲಿ ವಿಚ್ಛೇಧನವನ್ನು ಪ್ರಕಟಿಸಿದರು. ಪರಸ್ಪರ ಒಪ್ಪಿ ವಿಚ್ಛೇಧನ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಪೋಸ್ಟ್ ಹಾಕಿದ್ದರು ಈ ಜೋಡಿ. ಈಗ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ 'ಶಾಕುಂತಲಂ', ಇಂಗ್ಲೀಷ್ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್', ಹಿಂದಿಯ ಎರಡು ಸಿನಿಮಾ, ತಮಿಳಿನ 'ಕಾತುವಾಕ್ಕು ರೆಂಡು ಕಾದಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ ನಟನೆಯ 'ಬಂಗಾರ್ರಾಜು' ಇದೇ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. 'ಥ್ಯಾಂಕ್‌ ಯೂ' ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ. ನಾಗಚೈತನ್ಯ ನಟಿಸಿರುವ ಹಿಂದಿಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಸಹ ಏಪ್ರಿಲ್‌ ನಲ್ಲಿಯೇ ಬಿಡುಗಡೆ ಆಗಲಿದೆ.

More from Filmibeat

English summary
Actor Naga Chaitanya talked about Samantha for the first time after the divorce. He said If she is happy then I will be happy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X