For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನದ ಬಳಿಕ ನಾಗಚೈತನ್ಯ ಪ್ರೀತಿ ಮಾತು: ಹೊಸ ಲವ್ ಸ್ಟೋರಿ ನೆನೆದು ಮುಗುಳು ನಗೆ ಬೀರಿದ್ದೇಕೆ?

  |

  ಬಾಲಿವುಡ್‌ನಲ್ಲಿ ನಾಗ ಚೈತನ್ಯ ಚುರುಕಿನಿಂದ ಓಡಾಡುತ್ತಿದ್ದಾರೆ. ಒಮ್ಮೆ ಸಂಜಯ್ ಲೀಲಾ ಬನ್ಸಾಲಿ ಆಫೀಸ್‌ನಲ್ಲಿ ಕಂಡರೆ, ಇನ್ನೊಮ್ಮೆ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ನಾಗಚೈತನ್ಯ ಮುಂಬೈನಲ್ಲಿ ಬೀಡು ಬಿಟ್ಟಿರೋದಂತೂ ಸತ್ಯ.

  ಇಷ್ಟು ದಿನ ಸಮಂತಾಗೆ ವಿಚ್ಛೇದನ ನೀಡಿರೋ ಬಗ್ಗೆ ಎಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಜಂಟಿಯಾಗಿ ಡಿವೋರ್ಸ್ ಅನೌನ್ಸ್ ಮಾಡಿದ್ದು ಬಿಟ್ಟರೆ, ನಾಗ ಚೈತನ್ಯ ಪ್ರತಿಕ್ರಿಯಿಸುವ ಗೋಜಿಗೆ ಹೋಗಿರಲಿಲ್ಲ. ಅದರಲ್ಲೂ ಹೊಸ ಲವ್‌ಸ್ಟೋರಿ ಬಗ್ಗೆ ಸುದ್ದಿ ಹಬ್ಬಿದಾಗಲೂ ನಾಗ ಚೈತನ್ಯ ಸೈಲೆಂಟ್ ಆಗಿಯೇ ಇದ್ದರು. ಆದರೆ, ಮುಂಬೈನಲ್ಲಿ ಮಾಧ್ಯಮಗಳು ನಾಗ ಚೈತನ್ಯ ಈ ಎಲ್ಲಾ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಮಾಡಿಬಿಟ್ಟಿವೆ.

  ನಾಗಚೈತನ್ಯ ಮುಂಬೈಗೆ ಕಾಲಿಟ್ಟಿದ್ದೇ ಇಟ್ಟಿದ್ದು, ಕಳೆದೊಂದು ವಾರದಿಂದ ಅವರದ್ದೇ ಸುದ್ದಿಯಾಗಿಬಿಟ್ಟಿದೆ. ಸದ್ಯ 'ಲಾಲ್ ಸಿಂಗ್ ಚಡ್ಡಾ' ಪ್ರಚಾರದ ವೇಳೆ ಕೇಳಿದ ಪ್ರಶ್ನೆಗಳಿಗೆ ನಾಗ ಚೈತನ್ಯ ಕೊಟ್ಟ ಉತ್ತರ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ವಿಚ್ಛೇದನ, ಸಮಂತಾ, ಹೊಸ ಲವ್‌ ಸ್ಟೋರಿ, ಹೊಸ ಗರ್ಲ್‌ಫ್ರೆಂಡ್ ಹೀಗೆ ಪ್ರಶ್ನೆಗಳ ಸುರಿಮಳೆಗೆ ನಾಗ ಚೈತನ್ಯ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

  ನಾಗಚೈತನ್ಯ ಪರ್ಸನಲ್ ಲೈಫ್ ಬಗ್ಗೆ ಚರ್ಚೆ

  ನಾಗಚೈತನ್ಯ ಪರ್ಸನಲ್ ಲೈಫ್ ಬಗ್ಗೆ ಚರ್ಚೆ

  ಸಮಂತಾಗೆ ಡಿವೋರ್ಸ್ ನೀಡಿದ ದಿನದಿಂದ ನಾಗ ಚೈತನ್ಯ ವೈಯಕ್ತಿಕ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಅವರ ಸಿನಿಮಾಗಳಿಗಿಂತ ವಿಚ್ಛೇದನ, ಹೊಸ ಲವ್‌ಸ್ಟೋರಿನೇ ಹೈಲೈಟ್ ಆಗುತ್ತಿದೆ. ಇತ್ತೀಚೆಗಂತೂ ನಾಗಚೈತನ್ಯ ಟಾಲಿವುಡ್ ನಟಿಯೊಂದಿಗೆ ಲವ್‌ನಲ್ಲಿ ಬಿದ್ದಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. 'ಮೇಜರ್','ಗೂಢಾಚಾರಿ' ಹೀರೊಯಿನ್ ಶೋಭಿತಾ ಧುಲಿಪಲಾ ಜೊತೆ ಲವ್ವಿ-ಡವ್ವಿ ಶುರುವಾಗಿದೆ ಅನ್ನೋ ಮಾತು ಕೇಳಿಬಂದಿತ್ತು. ಈ ಎಲ್ಲಾ ಸುದ್ದಿಗಳಿಗೂ ನಾಗಚೈತನ್ಯ ಸೈಲೆಂಟ್ ಆಗಿಯೇ ಇದ್ದರು. ಆದ್ರೀಗ ಬಾಲಿವುಡ್ ಮೀಡಿಯಾ ಮುಂದೆ ಈ ಎಲ್ಲಾ ವಿಚಾರದ ಬಗ್ಗೆ ನಾಗ ಚೈತನ್ಯ ಬಾಯಿಬಿಟ್ಟಿದ್ದಾರೆ.

  ಪ್ರೀತಿ ನೆನೆದು ಮುಗುಳು ನಗೆ ಬೀರಿದ ನಾಗಚೈತನ್ಯ

  ಪ್ರೀತಿ ನೆನೆದು ಮುಗುಳು ನಗೆ ಬೀರಿದ ನಾಗಚೈತನ್ಯ

  ಆಗಸ್ಟ್ 11ಕ್ಕೆ ನಾಗಚೈತನ್ಯ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ರಿಲೀಸ್ ಆಗುತ್ತಿದೆ. ಹೀಗಾಗಿ ನಾಗಚೈತನ್ಯ ಸಂದರ್ಶನಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಾಗಚೈತನ್ಯಗೆ ತಮ್ಮ ಡೇಟಿಂಗ್ ವಿಚಾರವಾಗಿ ಪ್ರಶ್ನೆ ಮಾಡಿದ್ದರು. ಈ ವೇಳೆ ನಾಗಚೈತನ್ಯ ಇಲ್ಲಾ ಎಂದು ಹೇಳಲಿಲ್ಲ. ಬದಲಾಗಿದೆ ಮುಗುಳು ನಕ್ಕು ಸುಮ್ಮನಾಗಿದ್ದಾರೆ. ಇದು ಈಗಾಗಲೇ ಹಬ್ಬಿರುವ ಗಾಳಿ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡದಂತೆ ಆಗಿದೆ.

  ಮತ್ತೆ ಪ್ರೀತಿ ಹುಡುಕಾಟದಲ್ಲಿ ನಾಗ ಚೈತನ್ಯ!

  ಮತ್ತೆ ಪ್ರೀತಿ ಹುಡುಕಾಟದಲ್ಲಿ ನಾಗ ಚೈತನ್ಯ!

  'ಲಾಲ್ ಸಿಂಗ್ ಚಡ್ಡಾ' ಸಂದರ್ಶನದ ವೇಳೆನೇ ಮತ್ತೆ ಪ್ರೀತಿ ಹುಡುಕಾಡಲು ಸಿದ್ಧರಿದ್ದಾರಾ ಎಂದು ಪ್ರಶ್ನೆ ಮಾಡಲಾಗಿತ್ತು. " ಯಾರಿಗೆ ಗೊತ್ತು. ಪ್ರೀತಿ ನಿಮ್ಮನ್ನು ಮುಂದೆ ಸಾಗುವಂತೆ ಮಾಡುತ್ತೆ. ಉಸಿರು ತೆಗೆದುಕೊಳ್ಳುವಂತೆ ಪ್ರೀತಿ ಕೂಡ ಜೀವನದಲ್ಲಿ ಬಹುಮುಖ್ಯ. ನಾವು ಪ್ರೀತಿ ಮಾಡಬೇಕು. ಪ್ರೀತಿಯನ್ನು ಪಡೆಯಬೇಕು. ಆಗಲೇ ನಾವು ಪಾಸಿಟಿವ್ ಹಾಗೂ ಆರೋಗ್ಯವಾಗಿ ಇರಬಹುದು." ಎಂದು ನಾಗ ಚೈತನ್ಯ ಹೇಳಿದ್ದಾರೆ. ಈ ಮಾತುಗಳು ಚಿತ್ರರಂಗದಲ್ಲಿ ಹಲವರ ಕುತೂಹಲಕ್ಕೆ ಕಾರಣವಾಗಿದೆ.

  ನಾಗ ಚೈತನ್ಯ ಬಗ್ಗೆ ಹೇಳಿದ್ದೇನು?

  ನಾಗ ಚೈತನ್ಯ ಬಗ್ಗೆ ಹೇಳಿದ್ದೇನು?

  "ನಾವಿಬ್ಬರೂ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ನಾವಿಬ್ಬರೂ ಈಗಾಗ್ಲೇ ಹೇಳಿಕೆಗಳನ್ನು ಕೊಟ್ಟಿದ್ದೇವೆ. ನಾನು ಯಾವಾಗಲೂ ನನ್ನ ವೈಯಕ್ತಿಕ ಜೀವನದ ವಿಚಾರದಲ್ಲಿ ಇದನ್ನೇ ಮಾಡುತ್ತೇನೆ. ಕೆಲವು ಸಂಗತಿಗಳನ್ನು ಹಂಚಿಕೊಳ್ಳುವುದು ತುಂಬಾನೇ ಮುಖ್ಯ ಆಗಿರುತ್ತೆ. ಕೆಟ್ಟದ್ದೋ ಒಳ್ಳೆಯದ್ದೋ ನಾನು ಮಾಧ್ಯಮಗಳಿಗೆ ಈ ವಿಚಾರವನ್ನು ತಿಳಿಸುತ್ತೇನೆ. ನಮ್ಮ ಕೇಸ್‌ನಲ್ಲಿ ಸಮಂತಾ ಹಾಗೂ ನಾನು ಇಬ್ಬರೂ ಎಲ್ಲಾ ಬಿಟ್ಟು ಮುಂದೆ ಸಾಗಿದ್ದೇವೆ. ಇದಕ್ಕಿಂತ ಹೆಚ್ಚಿದನ್ನು ಈ ಪ್ರಪಂಚಕ್ಕೆ ಹೇಳುವುದು ಏನೂ ಉಳಿದಿಲ್ಲ." ಎಂದು ನಾಗಚೈತನ್ಯ ಹೇಳಿದ್ದಾರೆ.

  English summary
  Naga chaitanya talks about Love After Divorce With Samantha, Know More.
  Friday, August 5, 2022, 23:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X