ಸಮಂತಾ ಎದುರು ಸಿಕ್ಕರೆ ಏನು ಮಾಡುತ್ತೀರಿ? ಆಸಕ್ತಿಕರ ಉತ್ತರ ನೀಡಿದ ನಾಗ ಚೈತನ್ಯ

ನಟಿ ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ವಿಚ್ಛೇದನ ಪಡೆದು ವರ್ಷವಾಗುತ್ತಾ ಬಂತು. ಆದರೆ ವಿಚ್ಛೇದನದ ಕುರಿತ ಸುದ್ದಿಗಳು ಮಾತ್ರ ಈಗಲೂ 'ತಾಜಾ'.

ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಕ್ಯೂಟ್ ಜೋಡಿ ಎಂದು ಈ ಜೋಡಿಯನ್ನು ಕರೆಯಲಾಗುತ್ತಿತ್ತು. 2010 ರಿಂದಲೂ ಪ್ರೀತಿಯಲ್ಲಿದ್ದ ಈ ಜೋಡಿ ಏಳು ವರ್ಷಗಳ ಬಳಿಕ 2017 ರಲ್ಲಿ ವಿವಾಹವಾದರು. ಬಳಿಕ ನಾಲ್ಕೇ ವರ್ಷಕ್ಕೆ ಅಂದರೆ 2021 ರಲ್ಲಿ ಪರಸ್ಪರ ದೂರಾದರು. ಇವರಿಬ್ಬರ ವಿಚ್ಛೇದನ ಅಭಿಮಾನಿಗಳ ಪಾಲಿಗೆ ಶಾಕಿಂಗ್ ಆಗಿತ್ತು.

ಈಗ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಸಹ ತಮ್ಮ ತಮ್ಮ ವೃತ್ತಿ ಜೀವನದ ಬಗ್ಗೆ ಗಮನ ವಹಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಪತ್ರಕರ್ತರು ಇವರು ಸಿಕ್ಕಾಗೆಲ್ಲ ನಾಗ್ ಬಗ್ಗೆ ಸಮಂತಾಗೆ, ಸಮಂತಾ ಬಗ್ಗೆ ನಾಗ್‌ಗೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಇಂಥಹುದೇ ಒಂದು ಸಂದರ್ಶನದಲ್ಲಿ ಸಮಂತಾ ಬಗ್ಗೆ ಆಸಕ್ತಿಕರ ಉತ್ತರ ನೀಡಿದ್ದಾರೆ ನಾಗ ಚೈತನ್ಯ.

ಸಮಂತಾ ಎದುರಿಗೆ ಸಿಕ್ಕರೆ ಏನು ಮಾಡುತ್ತೀರಿ?

ಸಮಂತಾ ಎದುರಿಗೆ ಸಿಕ್ಕರೆ ಏನು ಮಾಡುತ್ತೀರಿ?

'ಲಾಲ್ ಸಿಂಗ್ ಚಡ್ಡ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ನಾಗ ಚೈತನ್ಯ, 'ಬಾಲಿವುಡ್ ಬಬಲ್'ಗೆ ಸಂದರ್ಶನ ನೀಡಿದ್ದಾರೆ. 'ನಿಮಗೆ ಅಚಾನಕ್ಕಾಗಿ ಸಮಂತಾ ಎದುರಿಗೆ ಸಿಕ್ಕರೆ ಏನು ಮಾಡುತ್ತೀರಿ'' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಾಗ ಚೈತನ್ಯ, ''ಏನು ಮಾಡಲು ಸಾಧ್ಯ, ಹಾಯ್ ಹೇಳುತ್ತೇನೆ. ಅಪ್ಪಿಕೊಳ್ಳುತ್ತೇನೆ ಸಹ'' ಎಂದಿದ್ದಾರೆ. ಆ ಮೂಲಕ ತಮಗೆ ಸಮಂತಾ ಬಗ್ಗೆ ಯಾವುದೇ ದ್ವೇಷ ಇಲ್ಲ ಎಂದಿದ್ದಾರೆ.

ಪರಸ್ಪರರ ಮಧ್ಯೆ ಕೋಪ-ದ್ವೇಷ ಇದೆ ಎಂದಿದ್ದ ಸಮಂತಾ

ಪರಸ್ಪರರ ಮಧ್ಯೆ ಕೋಪ-ದ್ವೇಷ ಇದೆ ಎಂದಿದ್ದ ಸಮಂತಾ

ಇದೇ ಮಾದರಿಯ ಪ್ರಶ್ನೆ ಕೆಲವು ದಿನಗಳ ಹಿಂದೆ ಸಮಂತಾಗೆ ಎದುರಾಗಿತ್ತು. ಕಾಫಿ ವಿತ್ ಕರಣ್ ಶೋನಲ್ಲಿ ನಾಗ ಚೈತನ್ಯ ಬಗ್ಗೆ ಮಾತನಾಡಿದ್ದ ಸಮಂತಾ, ''ನಾವಿಬ್ಬರೂ ಒಂದು ಕೋಣೆಯಲ್ಲಿದ್ದರೆ ಆ ಕೋಣೆಯಲ್ಲಿರುವ ಚೂಪಾದ ವಸ್ತುಗಳನ್ನೆಲ್ಲ ಮುಚ್ಚಿಡಬೇಕಾಗುತ್ತದೆ'' ಎಂದಿದ್ದರು. ಆ ಮೂಲಕ ಇಬ್ಬರ ನಡುವೆ ವೈರತ್ವ ಇದೆ ಎಂದಿದ್ದರು. ಸಮಂತಾ ಅಂತೂ ಪ್ರಸ್ತುತ ನಾಗ ಚೈತನ್ಯ ಮೇಲೆ ಅತೀವ ಕೋಪದಲ್ಲಿ, ದ್ವೇಷದಲ್ಲಿ ಇರುವುದು ಆ ಉತ್ತರದಿಂದ ಅರ್ಥವಾಗಿತ್ತು. ಆದರೆ ನಾಗ ಚೈತನ್ಯ ಮಾತ್ರ ಇದಕ್ಕೆ ವಿರುದ್ಧವಾದ ಉತ್ತರ ನೀಡಿದ್ದಾರೆ.

ಈಗಿನ ಸ್ಟೇಟಸ್ ಏನು?

ಈಗಿನ ಸ್ಟೇಟಸ್ ಏನು?

ಅದೇ ಸಂದರ್ಶನದಲ್ಲಿ, ಸಂದರ್ಶಕ ನಿಮ್ಮ ಈಗಿನ ರಿಲೇಷನ್‌ಶಿಪ್ ಸ್ಟೇಟಸ್ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ನಾಗ ಚೈತನ್ಯ ಆ ಪ್ರಶ್ನೆಗೆ ನಕ್ಕು ಸುಮ್ಮನಾಗಿದ್ದಾರೆ. ಆಗ ಸಂದರ್ಶಕನೇ 'ಹ್ಯಾಪಿ' ಎಂದು ಹೇಳಬಹುದೇ ಎಂದು ಕೇಳಿದಾಗ ಹೌದು ಹ್ಯಾಪಿ ಆಗಿದ್ದೇನೆ ಎಂದಿದ್ದಾರೆ. ಆದರೆ ನಾಗ ಚೈತನ್ಯ ತಾವು ಈಗ ಸಿಂಗಲ್ ಆಗಿರುವುದಾಗಿ ಹೇಳಿಲ್ಲ ಎಂಬುದು ಗಮನಿಸಬೇಕಾದ ವಿಷಯ. ನಾಗ ಚೈತನ್ಯ, ನಟಿ ಶೋಭಿತಾ ಧುಲಿಪಾಡ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.

ಟ್ಯಾಟೂ ಅಳಿಸುವುದಿಲ್ಲ ಎಂದ ನಾಗ ಚೈತನ್ಯ

ಟ್ಯಾಟೂ ಅಳಿಸುವುದಿಲ್ಲ ಎಂದ ನಾಗ ಚೈತನ್ಯ

ಸಂದರ್ಶನದಲ್ಲಿ ಇನ್ನೊಂದು ವಿಷಯ ಬಹಿರಂಗಪಡಿಸಿದ ನಾಗ ಚೈತನ್ಯ, ತಮ್ಮ ಕೈಮೇಲೆ ತಮ್ಮ ಮದುವೆ ದಿನಾಂಕವನ್ನು ಹಚ್ಚೆ ಹಾಕಿಸಿಕೊಂಡಿರುವುದಾಗಿ ಹೇಳಿದ್ದಾರೆ. ಕೆಲವು ಅಭಿಮಾನಿಗಳು ನನ್ನ ರೀತಿಯೇ ಹಚ್ಚೆ ಹಾಕಿಸಿಕೊಂಡಿದ್ದಾರೆ ಎಂದು ನಕ್ಕಿದ್ದಾರೆ. ಅಂಥಹವರಿಗೆ ಸಲಹೆ ಸಹ ನೀಡಿರುವ ನಾಗ ಚೈತನ್ಯ, ಈ ರೀತಿಯ ಟ್ಯಾಟೂಗಳು ಹಾಕಿಸಿಕೊಳ್ಳುವಾಗ ಹುಷಾರು ಜೀವನದಲ್ಲಿ ಯಾವಾಗ ಏನಾಗುತ್ತದೆಯೋ ಗೊತ್ತಿರುವುದಿಲ್ಲ ಎಂದು ಹೇಳಿ ನಕ್ಕಿದ್ದಾರೆ. ಅದರ ಜೊತೆಗೆ ಆ ಟ್ಯಾಟೂ ಅನ್ನು ಅಳಿಸುವುದು ತಮಗೆ ಇಷ್ಟವಿಲ್ಲ. ಇದ್ದರೆ ನಡೆಯುತ್ತದೆ ಎಂದಿದ್ದಾರೆ.

More from Filmibeat

English summary
Naga Chaitanya talks about Samantha. He said if he met her he will say hi to her and hug her also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X