ಸಾಯಿ ಪಲ್ಲವಿ ಜೊತೆ ಹೆಜ್ಜೆ ಹಾಕಲು 20ಕ್ಕೂ ಹೆಚ್ಚು ರೀ-ಟೇಕ್ ತೆಗೆದುಕೊಂಡ ನಾಗ್ ಚೈತನ್ಯ
ದಕ್ಷಿಣ ಭಾರತೀಯ ಸಿನಿ ಪ್ರಿಯರ ನೆಚ್ಚಿನ ನಟಿ ಸಾಯಿ ಪಲ್ಲವಿ ಸದ್ಯ 'ಲವ್ ಸ್ಟೋರಿ' ಹೇಳುವಲ್ಲಿ ಬ್ಯುಸಿಯಾಗಿದ್ದಾರೆ. ಅಂದರೆ ಸಾಯಿ ಪಲ್ಲವಿ ಸದ್ಯ ತೆಲುಗಿನ 'ಲವ್ ಸ್ಟೋರಿ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಸ್ಟಾರ್ ನಟ ನಾಗ್ ಚೈತನ್ಯಗೆ ನಾಯಕಿಯಾಗಿ ಸಾಯಿ ಪಲ್ಲವಿ ಮಿಂಚಿದ್ದಾರೆ.
Recommended Video
ಅಂದ್ಹಾಗೆ ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರತಿ ಸಿನಿಮಾದಲ್ಲೂ ಸಾಯಿ ಪಲ್ಲವಿ ಅಭಿನಯದ ಜೊತೆಗೆ ನೃತ್ಯದ ಮೂಲಕವೂ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಲವ್ ಸ್ಟೋರಿ ಚಿತ್ರದಲ್ಲಿಯೂ ಸಾಯಿ ಪಲ್ಲವಿ ಅದ್ಭುತವಾಗಿ ನೃತ್ಯ ಮಾಡಿದ್ದಾರಂತೆ. ಆದರೆ ಸಾಯಿ ಪಲ್ಲವಿ ಜೊತೆ ಹೆಜ್ಜೆ ಹಾಕಲು ನಾಗ್ ಸಾಕಷ್ಟು ರೀ ಟೇಕ್ ತೆಗೆದು ಕೊಂಡಿದ್ದಾರಂತೆ. ಮುಂದೆ ಓದಿ..

ಮೊದಲ ಬಾರಿಗೆ ನಾಗ್ ಚೈತನ್ಯ ಜೊತೆ ಸಾಯಿ ಅಭಿನಯ
ನಟಿ ಸಾಯಿ ಪಲ್ಲವಿ ಈಗಾಗಲೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಸಾಯಿ ಮೊದಲ ಬಾರಿಗೆ ನಾಗ್ ಚೈತನ್ಯಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಲವ್ ಸ್ಟೋರಿ ಹೆಸರೇ ಹೇಳುವ ಹಾಗೆ ರೋಮ್ಯಾಂಟಿಂಕ್ ಸಿನಿಮಾವಾಗಿದ್ದು, ಇಬ್ಬರ ಕಾಂಬಿನೇಶನ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಸಾಯಿ ಜೊತೆ ಹೆಜ್ಜೆ ಹಾಕಲು 20ಕ್ಕು ಹೆಚ್ಚು ರೀ-ಟೇಕ್
ಲವ್ ಸ್ಟೋರಿ ಸಿನಿಮಾದಲ್ಲಿ ನಟ ನಾಗ್ ಚೈತನ್ಯ, ಸಾಯಿ ಪಲ್ಲವಿ ಜೊತೆ ಹೆಜ್ಜೆ ಹಾಕಲು ಸುಮಾರು 20ಕ್ಕೂ ಹೆಚ್ಚು ರೀ-ಟೇಕ್ ತೆಗೆದುಕೊಂಡಿದ್ದರಂತೆ. ಈ ಸಿನಿಮಾದಲ್ಲೂ ಸಾಯಿ ಪಲ್ಲವಿ ಅದ್ಭುತವಾಗಿ ನೃತ್ಯ ಮಾಡಿದ್ದಾರಂತೆ. ಸಾಯಿ ಜೊತೆ ಸ್ಟೆಪ್ ಮ್ಯಾಚ್ ಮಾಡಲು ನಾಗ್ ಚೈತನ್ಯ ಕಷ್ಟಪಡಬೇಕಾಗಿತ್ತಂತೆ. ಚಿತ್ರದಲ್ಲಿ ಕೆಲವು ಕಷ್ಟಕರವಾದ ಡ್ಯಾನ್ಸ್ ಸ್ಟೆಪ್ ಗಳಿವೆಯಂತೆ. ಹಾಗಾಗಿ ನಾಗ್ ಚೈತನ್ಯ ಪರದಾಡುವಂತೆ ಆಗಿತ್ತು ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

ನಿರೀಕ್ಷೆ ಹೆಚ್ಚಿಸಿದ ಟೀಸರ್
ಈಗಾಗಲೆ ಲವ್ ಸ್ಟೋರಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಪುಟ್ಟ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಾಗಿದೆ. ನಾಗ್ ಚೈತನ್ಯ ಮತ್ತು ಸಾಯಿ ಪಲ್ಲವಿ ರೋಮ್ಯಾಂಟಿಕ್ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಪುಟ್ಟ ಟೀಸರ್ ಜೊತೆಗೆ ಚಿತ್ರದಿಂದ ಒಂದು ಹಾಡು ಕೂಡ ಬಿಡುಗಡೆಯಾಗಿದೆ.

ಸಕ್ಸಸ್ ನಿರೀಕ್ಷೆಯಲ್ಲಿ ಸಾಯಿ ಪಲ್ಲವಿ
ಸಾಯಿ ಪಲ್ಲವಿ ಅಭಿನಯದ ಸಿನಿಮಾಗಳು ಸೂಪರ್ ಅಹಿಟ್ ಆಗುತ್ತೆ ಎನ್ನುವ ಮಾತಿತ್ತು. ಆದರೆ ಇತ್ತೀಚಿಗೆ ರಿಲೀಸ್ ಆದ ಯಾವ ಸಿನಿಮಾಗಳು ಸಕ್ಸಸ್ ತಂದುಕೊಟ್ಟಿಲ್ಲ. ಪ್ರೇಮಂ ಸುಂದರಿ ಅಭಿನಯಿಸಿದ್ದೆ ಕಡಿಮೆ ಸಿನಿಮಾಗಳು. ಇತ್ತೀಚಿಗೆ ಸಾಯಿ ಅಭಿನಯದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿವೆ. ಹಾಗಾಗಿ ಲವ್ ಸ್ಟೋರಿ ಮೂಲಕ ಮತ್ತೆ ಬ್ಯಾಕ್ ಆಗುತ್ತಾರಾ ಎನ್ನುವುದು ಕಾದುನೋಡಬೇಕು.


Click it and Unblock the Notifications











