For Quick Alerts
  ALLOW NOTIFICATIONS  
  For Daily Alerts

  ಚಿಕ್ಕ ಪುಟ್ಟ ವಿಷಯಕ್ಕೂ ಮುಖ ಗಂಟಿಕ್ಕಿ ಕೂಗಾಡುವುದೇಕೆ ತೆಲುಗಿನ ಈ ನಟ.?

  |

  'ಚಂದಮಾಮ ಕಥಲು', 'ಚಲೋ', 'ದಿಯಾ' ಮುಂತಾದ ಚಿತ್ರಗಳಿಂದ ಟಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಟ ಮತ್ತು ನಿರ್ಮಾಪಕ ನಾಗ ಶೌರ್ಯ. ಸದ್ಯ 'ಅಶ್ವತ್ಥಾಮ' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಾಗ ಶೌರ್ಯ ಮೇಲೆ ಒಂದು ಕಂಪ್ಲೇಂಟ್ ಇದೆ.

  ಅದೇನಪ್ಪಾ ಅಂದ್ರೆ, ಚಿತ್ರೀಕರಣದ ಸಂದರ್ಭದಲ್ಲಿ ನಾಗ ಶೌರ್ಯ ಆಗಾಗ ಮುಖ ಗಂಟಿಕ್ಕಿಕೊಳ್ಳುತ್ತಾರಂತೆ. ಚಿಕ್ಕ ಪುಟ್ಟ ವಿಷಯಕ್ಕೂ ಸಿಟ್ಟು ಮಾಡಿಕೊಂಡು ಎಲ್ಲರ ಮೇಲೆ ನಾಗ ಶೌರ್ಯ ಕೂಗಾಡುತ್ತಾರಂತೆ. ಇದು ನಿಜವೇ.? ಹೀಗ್ಯಾಕೆ ಮಾಡ್ತೀರಾ ನಾಗ ಶೌರ್ಯ ಅಂತ 'ಅಶ್ವತ್ಥಾಮ' ಪ್ರಚಾರದ ವೇಳೆ ಪತ್ರಿಕಾ ಮಿತ್ರರು ಪ್ರಶ್ನೆ ಮುಂದಿಟ್ಟಾಗ, ಅವರು ಕೊಟ್ಟ ಉತ್ತರ ಹೀಗಿತ್ತು -

  ''ನನಗೆ ಕೋಪದ ಸಮಸ್ಯೆ ಇರುವುದು ನಿಜ. ನಾನು ತುಂಬಾ ಶಾರ್ಟ್ ಟೆಂಪರ್ಡ್. ನಾನು ಆಗಾಗ ಬರಹಗಾರರು, ನಿರ್ದೇಶಕರು, ಕ್ಯಾಮರಾಮ್ಯಾನ್ ಗಳ ಮೇಲೆ ಕೂಗಾಡುತ್ತಿರುತ್ತೇನೆ. ಕೆಲಸ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಕೂಗಾಡುವೆ ಅಷ್ಟೇ. ಔಟ್ ಪುಟ್ ಚೆನ್ನಾಗಿ ಬಂದರೆ ಎಲ್ಲರ ವೃತ್ತಿ ಬದುಕಿಗೂ ಒಳ್ಳೆಯದ್ದು ಅಲ್ಲವೇ.? ಕಾಳಜಿಗಾಗಿ ಸಿಟ್ಟು ಬರುತ್ತೆ ಹೊರತು ಬೇರೇನೂ ಇಲ್ಲ'' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ನಾಗ ಶೌರ್ಯ.

  'ಬಾಹುಬಲಿ' ಬಿಟ್ಟರೆ ಟಾಲಿವುಡ್ ಕಲೆಕ್ಷನ್ ನಲ್ಲಿ ಅಲ್ಲು ಅರ್ಜುನ್ 'ಕಿಂಗ್'.!'ಬಾಹುಬಲಿ' ಬಿಟ್ಟರೆ ಟಾಲಿವುಡ್ ಕಲೆಕ್ಷನ್ ನಲ್ಲಿ ಅಲ್ಲು ಅರ್ಜುನ್ 'ಕಿಂಗ್'.!

  ಅಂದ್ಹಾಗೆ, ನಾಗ ಶೌರ್ಯ ಅಭಿನಯದ 'ಅಶ್ವತ್ಥಾಮ' ಚಿತ್ರ ಜನವರಿ 31 ರಂದು ಬಿಡುಗಡೆ ಆಗಲಿದೆ. ಚಿತ್ರದಲ್ಲಿ ನಟನೆಯ ಜೊತೆಗೆ ನಿರ್ಮಾಣದ ಹೊಣೆಯನ್ನೂ ನಾಗ ಶೌರ್ಯ ಹೊತ್ತಿದ್ದಾರೆ. ಚಿತ್ರಕ್ಕೆ ರಮಣ ತೇಜಾ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Tollywood Actor Naga Shaurya says that he is short tempered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X