"ನನ್ ಮಗ ಬೇರೆ ಮನೆಯಲ್ಲಿ ಇದ್ದಾನೆ.. ಅವ್ನ ಮದುವೆ ಬಗ್ಗೆ ಅವ್ನೇ ಹೇಳ್ತಾನೆ": ನಾಗಬಾಬು

ಮೆಗಾ ಫ್ಯಾಮಿಲಿ ನಟ ವರುಣ್ ತೇಜ್ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋದು ಗೊತ್ತೇಯಿದೆ. ಈ ಆರಡಿ ಕಟೌಟ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ದೊಡ್ಡಮಟ್ಟದ ಸಕ್ಸಸ್ ಮಾತ್ರ ಸಿಕ್ಕಿಲ್ಲ. 'ಫಿದಾ' ಚಿತ್ರದಲ್ಲಿ ಒಂದು ರೇಂಜಿಗೆ ಬ್ರೇಕ್ ಸಿಕ್ಕಿತ್ತು. ಚಿರು ಸಹೋದರ ನಾಗಬಾಬು ಮಗ ವರುಣ್ ತೇಜ್. ಟಾಲಿವುಡ್‌ನಲ್ಲಿ ವರುಣ್ ಮದುವೆ ಬಗ್ಗೆ ಗುಸುಗುಸು ಶುರುವಾಗಿದೆ.

ನಟಿ ಲಾವಣ್ಯ ತ್ರಿಪಾಠಿ ಜೊತೆ ವರುಣ್ ಪ್ರೀತಿಲಿ ಬಿದ್ದಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಹಸೆಮಣೆ ಏರುತ್ತಾರೆ ಎನ್ನಲಾಗ್ತಿದೆ. 'ಮಿಸ್ಟರ್' ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಇದೇ ವೇಳೆ ಪರಿಚಯ ಶುರುವಾಗಿತ್ತು. ಇದೇ ಪರಿಚಯ ಸ್ನೇಹಕ್ಕೆ ತಿರುಗಿ ಈಗ ಮದುವೆ ಆಗಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಇಬ್ಬರು ಪ್ರತಿಕ್ರಿಯಿಸಿಲ್ಲ. ಇದೀಗ ಸ್ವತಃ ವರುಣ್ ತೇಜ್ ತಂದೆ ನಾಗಬಾಬು ಮಗನ ಮದುವೆ ಬಗ್ಗೆ ಮಾತನಾಡಿದ್ದಾರೆ.

Nagababu clarifies about his Son Varun Tej and Lavanya Tripathis marriage rumours

ನಾಗಬಾಬು ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರಾಗಿ ಕೆಲ ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. ಆದರೆ ರಾಮ್‌ಚರಣ್ ನಟನೆಯ 'ಆರೆಂಜ್' ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು. ನಂತರ ಸಿನಿಮಾ ನಿರ್ಮಾಣ ಕೈಬಿಟ್ಟರು. ಸಹೋದರರ ಸಹಾಯದಿಂದ ಆ ಸಂಕಷ್ಟದಿಂದ ಹೊರ ಬಂದಿತ್ತು. 2 ವರ್ಷದ ಹಿಂದೆ ಮಗಳು ನಿಹಾರಿಕಾ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದರು.

ಸಂದರ್ಶನವೊಂದರಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ನಾಗಬಾಬು ಮಾತನಾಡಿದ್ಧಾರೆ. ಮಗಳ ಮದುವೆ ಆಯಿತು, ಮಗನ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ "ಆದಷ್ಟು ಬೇಗ, ಅವನೇ ಈ ಬಗ್ಗೆ ಹೇಳ್ತಾನೆ. ಆದಷ್ಟು ಬೇಗ ಆ ಸುದ್ದಿ ಕೇಳ್ತೀರಾ" ಎಂದಿದ್ದಾರೆ. ಎಲ್ಲರೂ ಒಟ್ಟಿಗೆ ಇದ್ದೀರಾ ಅಂದ್ರೆ, "ಇಲ್ಲ ಎಲ್ಲಾ ಬೇರೆ ಬೇರೆ ಇದ್ದೀವಿ. ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದೇನೆ. ಮಗ ಬೇರೆ ಮನೆಯಲ್ಲಿ ಇದ್ದಾನೆ. ನಾವು ಯಾರಿಗೂ ಕಟ್ಟುಪಾಡು ಮಾಡಬಾರದು. ಅವರನ್ನು ಅವರಾಗಿ ಇರಲು ಬಿಟ್ಟುಬಿಡಬೇಕು" ಎಂದು ವಿವರಿಸಿದ್ದಾರೆ.

'ಮುಕುಂದ' ಆಗಿ ವರುಣ್ ತೇಜ್ ಎಂಟ್ರಿ

'ಹ್ಯಾಂಡ್ಸ್‌ಅಪ್‌' ಎನ್ನುವ ಚಿತ್ರದಲ್ಲಿ ಬಾಲನಟನಾಗಿ ನಟಿಸಿದ್ದ ವರುಣ್ ತೇಜ್ 'ಮುಕುಂದ' ಚಿತ್ರದ ಮೂಲಕ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಕಂಚೆ', 'ಲೋಫರ್', 'ಮಿಸ್ಟರ್', 'ತೊಲಿ ಪ್ರೇಮ', 'ಗದ್ದಲಕೊಂಡ ಗಣೇಶ್', 'F2' ಹಾಗೂ 'F3' ಸಿನಿಮಾಗಳಲ್ಲಿ ವರುಣ್ ಮುಂದೆ ನಟಿಸಿದರು. ಸದ್ಯ 'ಗಾಂಢೀವಧಾರಿ ಅರ್ಜುನ' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Nagababu clarifies about his Son Varun Tej and Lavanya Tripathis marriage rumours

ನಿಹಾರಿಕಾ ಡಿವೋರ್ಸ್ ಗಾಸಿಪ್

ಇನ್ನು ನಾಗಬಾಬು ಮುದ್ದಿನ ಮಗಳು ನಿಹಾರಿಕಾ ಹಾಗೂ ಚೈತನ್ಯಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಶುರುವಾಗಿದೆ. ಇಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಮದುವೆ ಫೋಟೊಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಇತ್ತೀಚಿಗೆ ಚೈತನ್ಯಾ ಮಕ್ಕಳಿಂದ ದೂರ ಇರುವುದನ್ನು ತೋರ್ಪಡಿಸುವಂತೆ ಮಾಡಿದ್ದ ಪೋಸ್ಟ್‌ವೊಂದು ಸಖತ್ ವೈರಲ್ ಆಗಿತ್ತು. ಇದನ್ನೆಲ್ಲಾ ನೋಡಿ ಇಬ್ಬರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಜನಸೇನಾ ಪಕ್ಷಕ್ಕೆ 'ಆರೆಂಜ್' ಕಲೆಕ್ಷನ್

ನಾಗಬಾಬುಗೆ ದೊಡ್ಡ ಪೆಟ್ಟು ಕೊಟ್ಟ 'ಆರೆಂಜ್' ಚಿತ್ರವನ್ನು ಇತ್ತೀಚೆಗೆ ರಾಮ್‌ಚರಣ್ ಹುಟ್ಟುಹಬ್ಬಕ್ಕೆ ರೀ ರಿಲೀಸ್ ಮಾಡಲಾಗಿತ್ತು. ಕೆಲ ವರ್ಷಗಳಿಂದ 'ಆರೆಂಜ್' ಒಳ್ಳೆಯ ಸಿನಿಮಾ. ಆದರೆ ಈ ಕಾಲದಲ್ಲಿ ಬರಬೇಕಿದ್ದ ಸಿನಿಮಾ ಬಹಳ ಬೇಗ ಬಂದಿತ್ತು. ಹಾಗಾಗಿ ಜನರಿಗೆ ರುಚಿಸಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಹೊಸ ರೂಪದಲ್ಲಿ ಬಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ಕಲೆಕ್ಷನ್ ಹಣವನ್ನು ನಾಗಬಾಬು ಸಹೋದರ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ ನೀಡಿದ್ದರು.

More from Filmibeat

English summary
Nagababu clarifies about his Son Varun Tej and Lavanya Tripathi's marriage rumours. he Said Varun Tej will annonce His marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X