For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿಯನ್ನು ದೇವರಿಗೆ ಹೋಲಿಸಿದ ಸಹೋದರ

  |

  ಆಂಧ್ರ, ತೆಲಂಗಾಣದಲ್ಲಿ ಮೆಗಾಸ್ಟಾರ್ ಚಿರಂಜೀವಿಯನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಾರೆ. ಅವರ ಸಿನಿಮಾ ಬಿಡುಗಡೆ ಆದರೆ ಹಾಲಿನಭಿಷೇಕ, ರಕ್ತದಲ್ಲಿ ಬೊಟ್ಟು ಇಡುವುದು, ಅಭಿಮಾನಿಗಳಿಗೆ ಊಟ ಹಾಕಿಸುವುದು ಸಾಮಾನ್ಯ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಆಗಸ್ಟ್ 22 ರಂದು ಚಿರಂಜೀವಿ ಹುಟ್ಟುಹಬ್ಬ. ಈ ದಿನವಂತೂ ಅಭಿಮಾನಿಗಳು ರಕ್ತದಾನ ಶಿಬಿರಗಳು, ಅನ್ನದಾನ ಕಾರ್ಯಗಳು, ವಿಶೇಷ ಪೂಜೆಗಳನ್ನು ಮಾಡಿಸುವುದು ಸಹ ಸಾಮಾನ್ಯ. ಈ ಬಾರಿ ಕೊರೊನಾ ಕಾರಣದಿಂದಾಗಿ ಇದೆಲ್ಲಾ ತುಸು ಕಡಿಮೆಯಾಗಿದೆ.

  ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ಕನ್ನಡದ ಕಿಚ್ಚ-ಸುಮಲತಾ

  ಚಿರಂಜೀವಿ ಅವರನ್ನು ಅಭಿಮಾನಿಗಳು ಪ್ರೀತಿಸುವಂತೆಯೇ ಅವರ ಸಹೋದರರೂ ಸಹ ಪ್ರೀತಿಸುತ್ತಾರೆ. ಚಿರಂಜೀವಿ ಸಹೋದರರ ನಡುವೆ ಕೆಲವು ವರ್ಷಗಳ ಮುನ್ನಾ ತುಸು ಭಿನ್ನಾಭಿಪ್ರಾಯ ಬಂತಿದ್ದಾದರೂ ಈಗ ಎಲ್ಲವೂ ಸರಿಹೋಗಿದೆ.

  ಸಾಮಾಜಿಕ ಜಾಲತಾಣದಲ್ಲಿ ನಾಗಬಾಬು ವಿಶ್

  ಸಾಮಾಜಿಕ ಜಾಲತಾಣದಲ್ಲಿ ನಾಗಬಾಬು ವಿಶ್

  ಚಿರಂಜೀವಿ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ವಿಶ್ ಮಾಡಿರುವ ಸಹೋದರ ನಾಗಬಾಬು, ಚಿರಂಜೀವಿ ಅವರನ್ನು ನಡೆದಾಡುವ ದೇವರು ಎಂದಿದ್ದಾರೆ. ನಾಗಬಾಬು ಪೋಸ್ಟ್‌ ಬಗ್ಗೆ ಕೆಲವರು ಟ್ರೋಲ್ ಮಾಡಿದ್ದರೆ, ಕೆಲವರು ಒಪ್ಪಿಕೊಂಡಿದ್ದಾರೆ.

  ನಾನು ನಂಬುವ ಏಕೈಕ ದೇವರು ನೀವು: ನಾಗಬಾಬು

  ನಾನು ನಂಬುವ ಏಕೈಕ ದೇವರು ನೀವು: ನಾಗಬಾಬು

  'ಉತ್ಸವ ಪ್ರಾರಂಭವಾಗಿದೆ, ಕೋಟ್ಯಂತರ ಹೃದಯಗಳನ್ನು ಬೆಳಗಿಸುವ ನಕ್ಷತ್ರ, ನಾನು ನಂಬುವ ಏಕೈಕ ದೇವರು, ನಮ್ಮ ಹಿರಿಯ ಸಹೋದರನಿಗೆ ಜನ್ಮದಿನದ ಶುಭಾಶಯಗಳು. ನನ್ನ ಸಹೋದರ ದೇವರಂತೆ. ದೇವರು ನನ್ನ ಸಹೋದರನ ರೂಪದಲ್ಲಿ ಭೂಮಿಯ ಮೇಲೆ ನಡೆದಾಡಿದ್ದಾನೆ. ನೀವು (ಚಿರಂಜೀವಿ) ಇಲ್ಲದೇ ಇದ್ದಿದ್ದರೆ ನನ್ನ ಜೀವನ ಇಷ್ಟು ಚೆನ್ನಾಗಿ ಇರುತ್ತಿರಲಿಲ್ಲ' ಎಂದಿದ್ದಾರೆ ನಾಗಬಾಬು.

  ನಿಶ್ಚಿತಾರ್ಥ ಸಂಭ್ರಮದಲ್ಲಿ ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ

  'ನಿಮ್ಮಿಂದ ನನಗೆ ಇಂದು ಸಂಪತ್ತು ಎಂಬುದಿದೆ'

  'ನಿಮ್ಮಿಂದ ನನಗೆ ಇಂದು ಸಂಪತ್ತು ಎಂಬುದಿದೆ'

  'ನೀವು ತೋರಿಸುವ ಅನಂತ ಪ್ರೀತಿ ಮತ್ತು ನಿರಂತರ ಶ್ರಮದಿಂದಾಗಿ ನಾನು ಇಂದು ಸಂಪತ್‌ಭರಿತವಾಗಿದ್ದೇನೆ. ನೀವು ಇರುವ ಕಾರಣದಿಂದಲೇ ನನಗೆ ಕೆಳಗೆ ಬೀಳುವ ಭಯ ಇಲ್ಲ. ನನಗೆ ಗೊತ್ತು ನೀವು ನನ್ನನ್ನು ಮೇಲಕ್ಕೆ ಎತ್ತಿಯೇ ತೀರುತ್ತೀರೆಂದು. ನಿಮ್ಮ ಇರುವಿಕೆ ನನಗೆ ಶಕ್ತಿ ನೀಡಿತು, ನಾನು ಇಂದು ಈ ರೀತಿ ಇರಲು ಇದೇ ಕಾರಣ ಎಂದು ನಾಗಬಾಬು ಟ್ವೀಟ್ ಮಾಡಿದ್ದಾರೆ.

  ನಾನು ಪಡೆದ ದೊಡ್ಡ ಕೊಡುಗೆ ನೀವು: ನಾಗಬಾಬು

  ನಾನು ಪಡೆದ ದೊಡ್ಡ ಕೊಡುಗೆ ನೀವು: ನಾಗಬಾಬು

  ನನ್ನ ಜೀವನದ ಎಲ್ಲಾ ಏರಿಳಿತಗಳಲ್ಲಿ ಬೆನ್ನೆಲುಬಾಗಿ ಇದ್ದಿದ್ದಕ್ಕೆ ಧನ್ಯವಾದಗಳು. ಇದಕ್ಕಿಂತ ಹೆಚ್ಚಿನದನ್ನು ನಾನು ಕೇಳಲು ಸಾಧ್ಯವಿಲ್ಲ, ನಾನು ಪಡೆದ ದೊಡ್ಡ ಕೊಡುಗೆ ನೀನು. ಎಲ್ಲಾ ಬಂಧಗಳಿಗಿಂತಲೂ ಹೆಚ್ಚು ಪ್ರೀತಿ ಮತ್ತು ಕಾಳಜಿಯನ್ನು ನೀವು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ನಾಗಬಾಬು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

  'ಅಣ್ಣಯ್ಯ ಬೇಗ ಬನ್ನಿ...' ಎಸ್‌ಪಿಬಿ ಕುರಿತು ಚಿರಂಜೀವಿ ಭಾವುಕ

  English summary
  Nagababu compare megastar Chiranjeevi to god. On August 22 nd is Chiranjeevi's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X