For Quick Alerts
  ALLOW NOTIFICATIONS  
  For Daily Alerts

  ನಾಲಿಗೆ ಹಿಡಿತದಲ್ಲಿಟ್ಟಿಕೊ, ಕ್ಷಮೆ ಕೇಳು: ಬಾಲಕೃಷ್ಣಗೆ ಚಿರಂಜೀವಿ ಸಹೋದರ ಎಚ್ಚರಿಕೆ

  |

  ಕೊರೊನಾ ಪರಿಣಾಮದಿಂದ ಈಗಾಗಲೇ ಕಂಗೆಟ್ಟಿರುವ ತೆಲುಗು ಚಿತ್ರರಂಗ, ಚಿತ್ರೋದ್ಯಮ ಪುನರ್‌ಸ್ಥಾಪಿಸುವತ್ತ ಗಮನ ಹರಿಸುವ ಬದಲಿಗೆ ಕ್ಷುಲ್ಲಕ ಜಗಳಲ್ಲಿ ತೊಡಗಿದೆ ಎಂದೆನಿಸುತ್ತಿದೆ.

  ದರ್ಶನ್ ಋಣ ತೀರಿಸಬೇಕು ಅಂತಾ ರಚಿತಾ ರಾಮ್ ಹೇಳ್ತಿರೋದ್ಯಾಕೆ? | FILMIBEAT KANNADA

  ಬಾಲಕೃಷ್ಣ ಹೇಳಿಕೆಯಿಂದ ಎದ್ದ ವಿವಾದ ಈಗ ಚಿರಂಜೀವಿ ಕುಟುಂಬ ವರ್ಸಸ್ ಎನ್‌ಟಿಆರ್ ಕುಟುಂಬ ಎಂಬಂತಾಗುವತ್ತ ಸಾಗುತ್ತಿದೆ.

  ಕಾಂಡೋಮ್‌ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆಕಾಂಡೋಮ್‌ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆ

  ಕೊರೊನಾ ಪರಿಣಾಮದಿಂದಾಗಿ ತತ್ತರಿಸಿರುವ ತೆಲುಗು ಚಿತ್ರೋದ್ಯಮದ ಬಗ್ಗೆ ಚರ್ಚಿಸಲೆಂದು ಚಿರಂಜೀವಿ ಮನೆಯಲ್ಲಿ ತೆಲುಗು ಸಿನಿ ಗಣ್ಯರು ಸಭೆ ಸೇರಿದ್ದರು. ಈ ಸಭೆಗೆ ನನ್ನನ್ನು ಕರೆದಿರಲಿಲ್ಲ, ನನಗೆ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಬಾಲಕೃಷ್ಣ ಹೇಳಿದ್ದರು. ಅಷ್ಟೆ ಅಲ್ಲದೆ, ಭೂಮಿ ಹಂಚಿಕೆ ಮಾಡಿಕೊಳ್ಳಲು ಅವರು ಸಿಎಂ ಭೇಟಿ ಮಾಡಿದ್ದರು ಎಂದಿದ್ದರು ಇದು ವಿವಾದಕ್ಕೆ ಕಾರಣವಾಗಿತ್ತು.

  ಎಚ್ಚರಿಕೆ ನೀಡಿದ ಚಿರಂಜೀವಿ ಸಹೋದರ

  ಎಚ್ಚರಿಕೆ ನೀಡಿದ ಚಿರಂಜೀವಿ ಸಹೋದರ

  ಆದರೆ ಇದೀಗ ನಟ ಬಾಲಕೃಷ್ಣಗೆ ಚಿರಂಜೀವಿ ಸಹೋದರ ನಾಗಬಾಬು ಎದುರುತ್ತರ ನೀಡಿದ್ದು, ಬಾಲಕೃಷ್ಣ ನಾಲಿಗೆ ಬಿಗಿಹಿಡಿದು ಮಾತನಾಡಬೇಕು, ಕೂಡಲೇ ಬಾಲಕೃಷ್ಣ ಕ್ಷಮೆ ಕೋರಲಿ, ಇಲ್ಲವಾದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ' ಎಂದು ರೌಡಿ ಭಾಷೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

  'ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ'

  'ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ'

  'ಸಿಎಂ ಜೊತೆ ಸಭೆಗೆ ಬಾಲಕೃಷ್ಣ ಅವರನ್ನು ಕರೆಯದಿರುವುದನ್ನು ನಾನು ಸಮರ್ಥಿಸುವುದಿಲ್ಲ, ಆದರೆ ಭೂಮಿ ಹಂಚಿಕೊಳ್ಳಲು ಸಭೆ ನಡೆಸಿದ್ದಾರೆ ಎಂಬ ಬಾಲಕೃಷ್ಣ ಮಾತು ಸರಿಯಲ್ಲ. ಬಾಲಕೃಷ್ಣ ಬಾಯಿಗೆ ಬಂದಹಾಗೆ ಮಾತನಾಡಬಾರದು' ಎಂದಿದ್ದಾರೆ ನಾಗಬಾಬು.

  ತೆಲುಗು ಚಿತ್ರರಂಗದ ನಾಯಕ ಪಟ್ಟ ಚಿರಂಜೀವಿಗೆ: ಬಾಲಕೃಷ್ಣ ಗರಂತೆಲುಗು ಚಿತ್ರರಂಗದ ನಾಯಕ ಪಟ್ಟ ಚಿರಂಜೀವಿಗೆ: ಬಾಲಕೃಷ್ಣ ಗರಂ

  'ಸಿನಿಮಾ ರಂಗವನ್ನು ಅವಮಾನಿಸಿದ್ದಾರೆ ಬಾಲಕೃಷ್ಣ'

  'ಸಿನಿಮಾ ರಂಗವನ್ನು ಅವಮಾನಿಸಿದ್ದಾರೆ ಬಾಲಕೃಷ್ಣ'

  ಈ ಕೂಡಲೇ ಬಾಲಕೃಷ್ಣ ತಮ್ಮ ಮಾತನ್ನು ಹಿಂದೆ ಪಡೆಯಬೇಕು. ಭೂಮಿ ಹಂಚಿಕೊಳ್ಳಲು ಸಭೆ ನಡೆಸಿದ್ದಾರೆ ಎನ್ನುವ ಮೂಲಕ ಅವರು ಇಡೀಯ ಸಿನಿಮಾ ರಂಗವನ್ನು ಅವಮಾನಿಸಿದ್ದಾರೆ. ಹೀಗೆ ಸುಖಾ ಸುಮ್ಮನೆ ನಾಲಗೆ ಹರಿಬಿಡುವುದು ಸರಿಯಲ್ಲ ಎಂದು ನಾಗಬಾಬು ಎಚ್ಚರಿಕೆ ನೀಡಿದ್ದಾರೆ.

  ಚಿರಂಜೀವಿ ಮನೆಯಲ್ಲಿ ಸಭೆ ವಿವಾದದ ಮೂಲ

  ಚಿರಂಜೀವಿ ಮನೆಯಲ್ಲಿ ಸಭೆ ವಿವಾದದ ಮೂಲ

  ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ಭವಿಷ್ಯದ ಬಗ್ಗೆ ಚಿರಂಜೀವಿ ಅವರ ಮನೆಯಲ್ಲಿ ಚಿತ್ರರಂಗದ ಗಣ್ಯರು ಮತ್ತು ಸಚಿವರುಗಳು ಸಭೆ ನಡೆಸಿದರು. ನಂತರ ಇದೇ ನಿಯೋಗವು ತೆಲಂಗಾಣ ಸಿಎಂ ಮತ್ತು ಆಂಧ್ರಪ್ರದೇಶ ಸಿಎಂ ಅವರುಗಳನ್ನು ಭೇಟಿ ಮಾಡಿದರು. ಇದಕ್ಕೆ ಬಾಲಕೃಷ್ಣಗೆ ಆಹ್ವಾನ ನೀಡಿರಲಿಲ್ಲ ಎಂದು ಬಾಲಕೃಷ್ಣ ಸಿಟ್ಟಾಗಿದ್ದಾರೆ.

  English summary
  : Chiranjeevi's brother Nagababu warns actor Balakrishna for talking loosely. He asks him to say sorry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X