"ಸಮಂತಾಳ 'ಫ್ಯಾಮಿಲಿ ಮ್ಯಾನ್ - 2' ಸೀರಿಸ್ ಹಾಗೂ ಆಕೆಯ ಆ ಗುಣ ಅಂದ್ರೆ ನಂಗೆ ಬಹಳ ಇಷ್ಟ": ನಾಗಚೈತನ್ಯಾ

ಟಾಲಿವುಡ್ ಹಾಟ್ ಕಪಲ್ ನಾಗಚೈತನ್ಯಾ ಹಾಗೂ ಸಮಂತಾ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದು ಗೊತ್ತೇಯಿದೆ. 2 ವರ್ಷಗಳ ಹಿಂದೆ ಇಬ್ಬರು ಡಿವೋರ್ಸ್ ಪಡೆಯಲು ಮುಂದಾಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ವರ್ಷದ ಹಿಂದೆ ಕಾನೂನಾತ್ಮಕವಾಗಿಯೂ ಇಬ್ಬರಿಗೂ ಡಿವೋರ್ಸ್ ಸಿಕ್ಕಿದೆ. ಇಬ್ಬರು ದೂರಾಗಲು ಕಾರಣ ಏನು ಎನ್ನುವುದನ್ನು ಇತ್ತೀಚೆಗೆ ಚೈತು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು. ಸ್ಯಾಮ್ ಒಳ್ಳೆ ಹುಡುಗಿ ಎಂದಿದ್ದರು.

'ಯೇ ಮಾಯಾ ಚೇಸಾವೆ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಜೋಡಿ ಅದೇ ಸಮಯದಲ್ಲಿ ಪ್ರೀತಿಲಿ ಬಿದ್ದಿತ್ತು. ಕೆಲ ದಿನಗಳ ಕಾಲ ರಹಸ್ಯವಾಗಿ ಸುತ್ತಾಡಿದ ಚೈಸ್ಯಾಮ್ ನಂತರ ರೆಸ್ಟೋರೆಂಟ್, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೊನೆಗೆ ಪ್ರೇಕ್ಷಕರ ಒಪ್ಪಿಗೆ ಪಡೆದು ಬಹಳ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಈ ಕ್ಯೂಟ್ ಜೋಡಿಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಇವರ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಆದರೆ 2 ವರ್ಷಗಳ ಹಿಂದೆ ದಿಢೀರನೆ ದೂರಾಗುವ ವಿಚಾರ ಹೇಳಿ ಶಾಕ್ ಕೊಟ್ಟಿದ್ದರು.

Nagachaitanya relveals that he likes a lot Samantha Starrer The Family Man 2 series

ಡಿವೋರ್ಸ್ ನಂತರ ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಮ್ ಮಯೋಸೈಟಿಸ್ ಸಮಸ್ಯೆಯ ನಡುವೆಯೂ ಸಿನಿಮಾ ಶೂಟಿಂಗ್‌ ಹಾಗೂ ಪ್ರಮೋಷನ್‌ನಲ್ಲಿ ಭಾಗಿ ಆಗುತ್ತಿದ್ದಾರೆ. ನಾಗಚೈತನ್ಯಾ ನಟನೆಯ 'ಕಸ್ಟಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಚಾರದ ವೇಳೆಗೆ ಸಂದರ್ಶನಗಳಲ್ಲಿ ಮಾತನಾಡುತ್ತಿದ್ಧಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಸುಖಾ ಸುಮ್ಮನೆ ಏನೇನೋ ಸುದ್ದು ಹಬ್ಬಿಸಬೇಡಿ, ನಮ್ಮ ವೈಯಕ್ತಿಕ ಜೀವನದಲ್ಲಿ ನಡೆದಿದ್ದು ನಡೆದು ಹೋಯಿತು. ಅಲ್ಲಿಗೆ ಬಿಟ್ಟುಬಿಡಿ ಎಂದಿದ್ದಾರೆ.

ಇನ್ನು ಡಿವೋರ್ಸ್ ನಂತರ ಕೂಡ ನಾಗಚೈತನ್ಯಾ- ಸಮಂತಾ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಸಂದರ್ಶನದಲ್ಲಿ ನಿಮ್ಮ ಜೊತೆ ನಟಿಸಿದ ನಟಿಯರ ಯಾವ ವಿಚಾರ ನಿಮಗೆ ಇಷ್ಟ ಎನ್ನುವ ಪ್ರಶ್ನೆಗೆ ಉತ್ತರಿಸಿದ್ಧಾರೆ. ಪೂಜಾ ಹೆಗ್ಡೆ ಸ್ಟೈಲ್ ಇಷ್ಟ, ಕೃತಿ ಶೆಟ್ಟಿ ಮುಗ್ದತೆ ಇಷ್ಟ, ಶೃತಿ ಹಾಸನ್ ವಾಯ್ಸ್ ಬಹಳ ಇಷ್ಟ ಎಂದು ಹೇಳಿದ್ದಾರೆ. ಇನ್ನು ಸಾಯಿ ಪಲ್ಲವಿ ಡ್ಯಾನ್ಸ್ ಬಹಳ ಇಷ್ಟ. ಆಕೆ ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ ಅಂತ ನಾನು ಹೆಚ್ಚಿನ ಶ್ರಮ ಹಾಕಿ 'ಲವ್ ಸ್ಟೋರಿ' ಚಿತ್ರದಲ್ಲಿ ಹೆಜ್ಜೆ ಹಾಕಿದ್ಧಾಗಿ ಹೇಳಿದ್ದಾರೆ.

Nagachaitanya relveals that he likes a lot Samantha Starrer The Family Man 2 series

ಸಮಂತಾ ಕುರಿತು ಕೇಳಿದಾಗ "ಸಮಂತಾ ಬಹಳ ಹಾರ್ಡ್‌ ವರ್ಕರ್. ಆಕೆ ಏನಾದರೂ ನಿರ್ಣಯ ಕೈಗೊಂಡ್ರೆ ಅದು ಆಗಲೇಬೇಕು. ಅದನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಆ ಗುಣ ಬಹಳ ಇಷ್ಟ" ಎಂದು ನಾಗಚೈತನ್ಯಾ ಹೇಳಿದ್ದಾರೆ. ಇತ್ತೀಚೆಗೆ ಸಮಂತಾ ನಟಿಸಿದ ಯಾವ ಸಿನಿಮಾ ಇಷ್ಟ ಎನ್ನುವ ಪ್ರಶ್ನೆಗೆ 'ಫ್ಯಾಮಿಲಿ ಮ್ಯಾನ್‌- 2' ಸೀರಿಸ್ ಬಹಳ ಇಷ್ಟ. 'ಓ ಬೇಬಿ' ಕೂಡ ಇಷ್ಟ. ಇತ್ತೀಚೆಗೆ 'ಯಶೋದ' ಸಿನಿಮಾ ಕೂಡ ನೋಡ್ದೆ ಚೆನ್ನಾಗಿದೆ ಎಂದು ಚೈತು ವಿವರಿಸಿದ್ದಾರೆ.

ನಾಗಚೈತನ್ಯಾ- ಸಮಂತಾ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಬರ್ತಿದ್ದಂತೆ ಕೆಲವರು 'ಫ್ಯಾಮಿಲಿ ಮ್ಯಾನ್‌- 2' ಸೀರಿಸ್ ಕಡೆ ಬೊಟ್ಟು ಮಾಡಿದ್ದರು. ಆ ಸೀರಿಸ್‌ನಲ್ಲಿ ಸ್ಯಾಮ್ ಬಹಳ ಬೋಲ್ಡ್ ಆಗಿ ನಟಿಸಿದ್ದಾರೆ. ಇದು ಅಕ್ಕಿನೇನಿ ಫ್ಯಾಮಿಲಿಗೆ ಇಷ್ಟವಾಗಲಿಲ್ಲ. ಅದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿ ಈಗ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು.

Nagachaitanya relveals that he likes a lot Samantha Starrer The Family Man 2 series

ತಮ್ಮಿಬ್ಬರ ಡಿವೋರ್ಸ್‌ಗೆ ಕಾರಣ ಏನು ಎನ್ನುವ ಬಗ್ಗೆ ಇತ್ತೀಚೆಗೆ ಮತ್ತೊಂದು ಸಂದರ್ಶನದಲ್ಲಿ ನಾಗಚೈತನ್ಯಾ ಮಾತನಾಡಿದ್ದರು. "ನಾವಿಬ್ಬರು ದೂರಾಗಲು ನಿಜವಾದ ಕಾರಣ ವದಂತಿಗಳು. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಊಹಾಪೋಹ, ಮಾಧ್ಯಮಗಳಲ್ಲಿ ಬಂದ ಕೆಲ ಸುದ್ದಿಗಳೇ ನಮ್ಮ ನಡುವೆ ಜಗಳಕ್ಕೆ ಕಾರಣವಾಗಿತ್ತು. ಮೊದಲಿಗೆ ಆ ವದಂತಿಗಳ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ನಂತರ ಅವೇ ದೊಡ್ಡದಾಗುತ್ತಾ ಹೋದವು. ಅದು ಕೊನೆಗೆ ಡಿವೋರ್ಸ್‌ವರೆಗೆ ಕೊಂಡೊಯ್ಯಿತು" ಎಂದಿದ್ದರು.

More from Filmibeat

English summary
Nagachaitanya relveals that he likes a lot Samantha Starrer The Family Man 2 series. also Shares that he likes her hard work. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X