ನಾಗಾರ್ಜುನ - ಮಹೇಶ್ ಬಾಬು ಮಲ್ಟಿಸ್ಟಾರರ್ ಸಿನಿಮಾ: ಟ್ವೀಟ್ ಸಂಭಾಷಣೆ ವೈರಲ್!

ಟಾಲಿವುಡ್ ಕಿಂಗ್ ನಾಗಾರ್ಜುನ ಹಾಗೂ ಸೂಪರ್ ಸ್ಟಾರ್ ಮಹೇಶ್ ಬಾಬು ಒಂದೇ ಸಿನಿಮಾ ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ನಾಗಾರ್ಜುನ ಮಲ್ಟಿಸ್ಟಾರರ್‌ ಚಿತ್ರಕ್ಕೆ ಸದಾ ಮುಂದಿರ್ತಾರೆ. ಇನ್ನು 'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು' ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಜೊತೆ ಮಹೇಶ್ ಬಾಬು ನಟಿಸಿದ್ದರು. ಇದೀಗ ಪ್ರಿನ್ಸ್ ಹಾಗೂ ಟಾಲಿವುಡ್ ಮನ್ಮಥ ಒಂದೇ ಚಿತ್ರದಲ್ಲಿ ನಟಿಸೋಣ ಎಂದು ಟ್ವಿಟ್ಟರ್‌ನಲ್ಲಿ ಸಂಭಾಷಣೆ ನಡೆಸಿದ್ದಾರೆ. ಆ ಟ್ವೀಟ್ ಸಂಭಾಷಣೆ ಈಗ ವೈರಲ್ ಆಗಿದೆ. ಹಲವು ವರ್ಷಗಳಿಂದ ಇಂತಾದೊಂದು ಕ್ರೇಜಿ ಪ್ರಾಜೆಕ್ಟ್‌ಗೆ ತೆರೆ ಮರೆಯಲ್ಲಿ ಪ್ರಯತ್ನ ನಡೀತಿದೆ.

ನಾಗಾರ್ಜುನ ನಟನೆಯ 'ದಿ ಘೋಷ್ಟ್' ಚಿತ್ರದ ಟ್ರೈಲರ್‌ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಮಹೇಶ್ ಬಾಬು ರಿಲೀಸ್ ಮಾಡಿದ್ದಾರೆ. ಇದಕ್ಕೆ ಧನ್ಯವಾದ ತಿಳಿಸಿರುವ ನಾಗ್, ನಾವಿಬ್ಬರು ಯಾಕೆ ಒಂದು ಮಲ್ಟಿಸ್ಟಾರರ್ ಸಿನಿಮಾದಲ್ಲಿ ನಟಿಸಬಾರದು ಎಂದು ಕೇಳಿದ್ದಾರೆ. ಇದಕ್ಕೆ ರಿಪ್ಲೆ ಮಾಡಿರುವ ಟಾಲಿವುಡ್ ಪ್ರಿನ್ಸ್ ಖಂಡಿತ ಮಾಡೋಣ, ನಾನು ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಈ ಟ್ವೀಟ್ ಸಂಭಾಷಣೆ ಇಬ್ಬರ ಅಭಿಮಾನಿಗಳಿಗೂ ಖುಷಿ ತಂದಿದೆ. ಅದಷ್ಟು ಬೇಗ ಇಂತಾದೊಂದು ಮಲ್ಟಿಸ್ಟಾರರ್ ಸಿನಿಮಾ ಬರಲಿ ಎನ್ನುತ್ತಿದ್ದಾರೆ.

ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಮಲ್ಟಿಸ್ಟಾರರ್ ಸಿನಿಮಾಗಳು ಬರ್ತಿರ್ತಾವೆ. ಇಬ್ಬರು ಸ್ಟಾರ್ ನಟರನ್ನು ಸೇರಿಸಿ ಒಟ್ಟಿಗೆ ಸಿನಿಮಾ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮೊದಲಿಗೆ ಇಬ್ಬರು ಜೊತೆಯಾಗಿ ಒಟ್ಟಿಸೋಕೆ ಒಪ್ಪಬೇಕು. ನಂತರ ಇಬ್ಬರ ಪಾತ್ರಗಳಿಗೂ ಕಥೆಯಲ್ಲಿ ಪ್ರಾಮುಖ್ಯತೆ ಇರಬೇಕು. ಅಂತಹ ಕಥೆಗಳನ್ನು ಸಿದ್ಧಪಡಿಸುವುದು ಕಷ್ಟ. ಸಿನಿಮಾ ರಿಲೀಸ್ ಆಗುವವರೆಗೂ ಚಿತ್ರದ ಭವಿಷ್ಯ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಪ್ರೇಕ್ಷಕರು ಚಿತ್ರವನ್ನು ಹೇಗೆ ಆಧರಿಸುತ್ತಾರೆ ಎನ್ನುವುದು ಗೊತ್ತಾಗಲ್ಲ. 'RRR' ಚಿತ್ರದಲ್ಲಿ ರಾಮ್‌ಚರಣ್ ತೇಜಾ ಹಾಗೂ ಜ್ಯೂ. ಎನ್‌ಟಿಆರ್‌ ಇಬ್ಬರನ್ನು ಸೇರಿಸಿ ರಾಜಮೌಳಿ ಸಿನಿಮಾ ಮಾಡುವ ಸಾಹಸ ಮಾಡಿದ್ದರು. ಆದರೆ ಸಿನಿಮಾ ರಿಲೀಸ್ ನಂತರ ತಾರಕ್ ಫ್ಯಾನ್ಸ್ ಮೌಳಿ ವಿರುದ್ಧ ಗರಂ ಆಗಿದ್ದರು.

Nagarjuna asks Mahesh Babu to Do Multi Starrer Movie Together

'RRR' ಚಿತ್ರದಲ್ಲಿ ರಾಜಮೌಳಿ ರಾಮ್ - ಭೀಮ್ ಇಬ್ಬರ ಪಾತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದರು. ಆದರೆ ಎನ್‌ಟಿಆರ್ ಫ್ಯಾನ್ಸ್ ಮಾತ್ರ ರಾಮ್‌ಚರಣ್‌ನ ಚಿತ್ರದಲ್ಲಿ ಹೀರೊ ತರ ಬಿಂಬಿಸಲಾಗಿದೆ. ತಾರಕ್‌ನ ಪೋಷಕ ಪಾತ್ರದಂತೆ ತೋರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ರಾಜಮೌಳಿನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಹಾಗಾಗಿ ಮಲ್ಟಿಸ್ಟಾರರ್ ಸಿನಿಮಾ ಮಾಡುವುದಕ್ಕೆ ನಿರ್ದೇಶಕರು ಸದಾ ಹಿಂಜರಿಯುತ್ತಾರೆ. ಇದೀಗ ನಾಗಾರ್ಜುನ ಹಾಗೂ ಮಹೇಶ್ ಬಾಬು ಇಬ್ಬರು ಸೇರಿ ಒಟ್ಟಿಗೆ ಸಿನಿಮಾ ಮಾಡೋಣ ಎಂದು ಹೇಳಿರುವುದು ಕುತೂಹಲ ಕೆರಳಿಸಿದೆ.

ಟಾಲಿವುಡ್‌ನಲ್ಲಿ ನಾಗಾರ್ಜುನಗೆ ಎಲ್ಲಾ ನಟರ ಜೊತೆಗೂ ಆತ್ಮೀಯ ಒಡನಾಟ ಇದೆ. 29 ವರ್ಷಗಳ ಹಿಂದೆ ನಾಗಾರ್ಜುನ ಮತ್ತು ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ 'ವಾರಸುಡು' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿ ನಾಗ್ ಟ್ವೀಟ್ ಮಾಡಿದ್ದಾರೆ. ಪ್ರವೀಣ್ ಸತ್ತೂರು ನಿರ್ದೇಶನದ 'ದಿ ಘೋಷ್ಟ್' ಸಿನಿಮಾ ಟ್ರೈಲರ್ ಸಖತ್ ಸೌಂಡ್ ಮಾಡ್ತಿದೆ. ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಾಗ್ ಸ್ಟೈಲ್, ಆಕ್ಷನ್ ಧಮಾಕ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಸೋನಾಲ್ ಚೌಹಾಣ್, ಶ್ರೀಕಾಂತ್ ಅಯ್ಯಂಗಾರ್, ಅನಿಕಾ ಸುರೇಂದ್ರನ್ ಚಿತ್ರದ ತಾರಾಗಣದಲ್ಲಿದ್ದಾರೆ.

Nagarjuna asks Mahesh Babu to Do Multi Starrer Movie Together

'ದಿ ಘೋಷ್ಟ್' ಸಿನಿಮಾ ಟ್ರೈಲರ್ ನೋಡುತ್ತಿದ್ದರೆ ನಾಗಾರ್ಜುನ ಇಂಟರ್‌ಪೋಲ್ ಆಫೀಸರ್ ವಿಕ್ರಮ್ ಪಾತ್ರದಲ್ಲಿ ನಟಿಸಿರುವುದು ಗೊತ್ತಾಗುತ್ತಿದೆ. ಆತನ ಸಹೋದರಿ ಹಾಗೂ ಆಕೆಯ ಮಗಳನ್ನು ಕೊಲ್ಲಲು ಮಾಫಿಯಾ ಗ್ಯಾಂಗ್ ಮುಂದಾಗುತ್ತದೆ. ಅವರಿಬ್ಬರನ್ನು ರಕ್ಷಿಸಿಕೊಳ್ಳಲು ವಿಕ್ರಮ್ ತನ್ನ ಪ್ರೇಯಸಿ ಜೊತೆ ಸೇರಿ ಅಖಾಡಕ್ಕೆ ಇಳಿಯುವ ಕಥೆ ಸಿನಿಮಾದಲ್ಲಿದೆ. ಅಕ್ಟೋಬರ್ 5ಕ್ಕೆ 'ದಿ ಘೋಷ್ಟ್' ತೆರೆಗೆ ಬರಲಿದೆ. ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಮಹೇಶ್‌ ಬಾಬು ನಟಿಸಬೇಕಿದೆ. ನಂತರ ರಾಜಮೌಳಿ ನಿರ್ದೇಶನದ ಚಿತ್ರಕ್ಕೆ ಕೈ ಜೋಡಿಸಲಿದ್ದಾರೆ. ಇವರಿಬ್ಬರ ಮಲ್ಟಿಸ್ಟಾರರ್ ಸಿನಿಮಾ ಯಾವಾಗ ಶುರುವಾಗುತ್ತೋ ಕಾದು ನೋಡಬೇಕು.

More from Filmibeat

English summary
Nagarjuna asks Mahesh Babu to Do Multi Starrer Movie Together. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X