ಹಿಮಾಲಯದಲ್ಲಿ 'ವೈಲ್ಡ್ ಡಾಗ್' ಚಿತ್ರೀಕರಣ ಮುಗಿಸಿದ ನಾಗಾರ್ಜುನ
ತೆಲುಗು ನಟ ನಾಗಾರ್ಜುನ ನಟಿಸುತ್ತಿರುವ 'ವೈಲ್ಡ್ ಡಾಗ್' ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ ಎರಡು ವಾರದಿಂದ ಹಿಮಾಲಯದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಿತ್ರತಂಡ ಇಂದು ಯಶಸ್ವಿಯಾಗಿ ಕೆಲಸ ಮುಗಿಸಿದೆ.
ಈ ಸುದ್ದಿಯನ್ನು ಸ್ವತಃ ನಾಗಾರ್ಜುನ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ''ವೈಲ್ಡ್ ಡಾಗ್ ಸಿನಿಮಾ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದೇನೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿಭಾನ್ವಿತ ತಂಡ ಮತ್ತು ಹಿಮಾಲಯವನ್ನು ಬಿಟ್ಟು ಹೋಗುವುದು ಮಿಸ್ ಮಾಡಿಕೊಳ್ಳುತ್ತಿರುವುದು ಬೇಸರ'' ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

ನೈಜ ಘಟನೆಯ ಸಿನಿಮಾ
ಇದು ನೈಜ ಘಟನೆಯನ್ನು ಆಧರಿಸಿ ಮಾಡಲಾಗುತ್ತಿರುವ ಸಿನಿಮಾ ಆಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency ) ಅಧಿಕಾರಿಯಾಗಿ ನಾಗಾರ್ಜುನ ಕಾಣಿಸಿಕೊಳ್ಳಲಿದ್ದಾರೆ.

ಆಶಿಶೋರ್ ಸೊಲೊಮನ್ ನಿರ್ದೇಶನದ ಚಿತ್ರ
ಆಶಿಶೋರ್ ಸೊಲೊಮನ್ ನಿರ್ದೇಶನದ ಈ ಚಿತ್ರದಲ್ಲಿ ನಾಗಾರ್ಜುನ್, ಡಿಯಾ ಮಿರ್ಜಾ, ಅತುಲ್ ಕುಲಕರ್ಣಿ, ಸೈಯಾಮಿ ಖೇರ್, ಅಲಿ ರೆಜಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಬಿಗ್‌ಬಾಸ್‌ಗೆ ನಾಗಾರ್ಜುನ ಬ್ರೇಕ್
ಮತ್ತೊಂದೆಡೆ ವೈಲ್ಡ್ ಡಾಗ್ ಚಿತ್ರಕ್ಕಾಗಿ ನಾಗಾರ್ಜುನ ಒಂದು ವಾರ ಬಿಗ್‌ಬಾಸ್ ನಿರೂಪಣೆಯಿಂದ ತಪ್ಪಿಸಿಕೊಂಡಿದ್ದರು. ನಾಗಾರ್ಜುನ ಬದಲಿಗೆ ಅಕ್ಕಿನೇನಿ ಸೊಸೆ ಸಮಂತಾ ಚೈತನ್ಯ ಬಿಗ್ ಬಾಸ್ ನಡೆಸಿಕೊಟ್ಟಿದ್ದರು.

ಜೆಟ್‌ನಲ್ಲಿ ಬಂದಿದ್ದ ನಾಗಾರ್ಜುನ
ಎರಡನೇ ವಾರವೂ ಸಮಂತಾ ಬಿಗ್ ಬಾಸ್ ಶೋ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಸರ್ಪ್ರೈಸ್ ಎನ್ನುವಂತೆ ಹಿಮಾಲಯದಿಂದ ವಿಶೇಷ ಜೆಟ್ ಮೂಲಕ ಹೈದರಾಬಾದ್‌ಗೆ ಬಂದಿಳಿದ ನಾಗಾರ್ಜುನ ಬಿಗ್ ಬಾಸ್ ನಿರೂಪಣೆ ಮಾಡಿಕೊಟ್ಟು ಮತ್ತೆ ವಾಪಸ್ ಹೋಗಿದ್ದರು.


Click it and Unblock the Notifications











