ಕುಟುಂಬದ ಜೊತೆ ನಾಗಾರ್ಜುನ ಹುಟ್ಟುಹಬ್ಬದ ಸಂಭ್ರಮ: ಸಮಂತಾ ಎಲ್ಲಿ ಎನ್ನುತ್ತಿರುವ ಫ್ಯಾನ್ಸ್

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್ ಖ್ಯಾತ ನಟ ನಾಗಾರ್ಜುನ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 62ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಾಗಾರ್ಜುನ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕೊರೊನಾ ಕಾರಣದಿಂದ ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಾಗಾರ್ಜುನ, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಕೆಲ ಸದಸ್ಯರ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ.

ನಾಗಾರ್ಜುನ ಪತ್ನಿ ಅಮಲಾ ಅಕ್ಕಿನೇನಿ, ಮಕ್ಕಳಾದ ನಾಗ ಚೈತನ್ಯ ಮತ್ತು ಅಕಿಲ್ ಅಕ್ಕಿನೇನಿ ಇಬ್ಬರು ತಂದೆಯ ಜೊತೆಯೇ ಇಡಿ ದಿನ ಕಳೆದಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಸಮಂತಾ ಮಿಸ್ಸಿಂಗ್ ಆಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸದ್ಯ ವೈರಲ್ ಆಗಿರುವ ಹುಟ್ಟುಹಬ್ಬ ಆಚರಣೆ ಫೋಟೋಗೆ ನೆಟ್ಟಿಗರು ಸಮಂತಾ ಎಲ್ಲಿ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನಾಗಾರ್ಜುನ ಹುಟ್ಟುಹಬ್ಬದ ಫೋಟೋವನ್ನು ಶೇರ್ ಮಾಡಿ ಅಮಲಾ ಅಕ್ಕಿನೇನಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. "ಈ ವಿಶೇಷ ದಿನ ಉತ್ತಮ ಆರೋಗ್ಯ, ಸಂತೋಷ, ನೆಮ್ಮದಿ ಸಿಗಲಿ ಎಂದು ವಿಶ್ ಮಾಡುತ್ತೇನೆ. ನಿಮ್ಮೊಂದಿಗೆ ಇರಲು ಪುಣ್ಯ ಮಾಡಿದ್ದೆ ಪ್ರೀತಿಯ ನಾಗ್. ಶುಭಾಶಯ ಕಳುಹಿಸುವ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಶಿಗಲಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

Nagarjuna has birthday feast to his wife Amala and Naga Chaitanya and Akkil but Samantha is missing

ಹುಟ್ಟುಹಬ್ಬದ ಸಂಭ್ರಮಾಚರಣೆ ಫೋಟೋದಲ್ಲಿ ಸಮಂತಾ ಎಲ್ಲಿಯೂ ಕಾಣಿಸಿಕೊಳ್ಳದೆ ಇರುವುದು ಸದ್ಯ ಎದ್ದಿರುವ ಅನುಮಾನಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ. ಸದ್ಯ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚಿಗಷ್ಟೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಅಕ್ಕಿನೇನಿ ಹೆಸರನ್ನು ತೆಗೆದುಹಾಕಿ ಕೇವಲ ಎಸ್ ಮಾತ್ರ ಇಟ್ಟುಕೊಂಡಿದ್ದಾರೆ. ಹೆಸರು ಅಕ್ಕಿನೇನಿ ಸರ್ ನೇಮ್ ತೆಗೆದುಹಾಕುತ್ತಿದ್ದಂತೆ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಬಗ್ಗೆ ಅನುಮಾನ ಹುಟ್ಟುಹಾಕಿದೆ. ಇಬ್ಬರ ನಡುವೆ ಯಾವುದು ಸರಿಯಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಮಂತಾ ಆಗಲಿ ಅಥವಾ ನಾಗ್ ಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Nagarjuna has birthday feast to his wife Amala and Naga Chaitanya and Akkil but Samantha is missing

ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿಯೂ ಸಮಂತಾ ಭಾಗಿಯಾಗದೇ ಇರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ನೆಟ್ಟಿಗರು ಸಮಂತಾ ಎಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೆ ಸಮಂತಾ ಸಾಮಾಜಿಕ ಜಾಲತಾಣದ ಮೂಲಕ ಮಾವ ನಾಗಾರ್ಜುನ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. "ನಿಮ್ಮ ಮೇಲಿನ ಗೌರವವನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಇಂದು ಮತ್ತು ಯಾವಾಗಲೂ ನಿಮಗೆ ಆರೋಗ್ಯ ಮತ್ತು ಸಂತೋಷ ಸಿಗಲಿ ಎಂದು ಬಯಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಮಾಮಾ" ಎಂದು ಹೇಳಿದ್ದರು.

Nagarjuna has birthday feast to his wife Amala and Naga Chaitanya and Akkil but Samantha is missing

ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸಮಂತಾ ಸಂಭ್ರಮಾಚರಣೆಯಲ್ಲಿ ಭಾಗಿಯಾದಗದೆ ಇರುವುದು ನಾಗ ಚೈತನ್ಯ ಜೊತೆಗಿನ ಬಿರುಕು ಕಾರಣನಾ ಎನ್ನಲಾಗುತ್ತಿದೆ. ಸದ್ಯಕ್ಕೇ ಈ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇತ್ತೀಚಿಗಷ್ಟೆ ಹಿಂದಿಯ ಖ್ಯಾತ ಪತ್ರಕರ್ತೆ ಅನುಪಮಾ ಚೋಪ್ರಾ ಜೊತೆ ಮಾತನಾಡುವಾಗ ಸಮಂತಾ, "ನಾನು ಯಾವುದೇ ವಿವಾದಗಳು ಅಥವಾ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಲು ಬಯಸಿದಾಗ ಮಾತ್ರ ಮಾತನಾಡುತ್ತೇನೆ. ಆದರೆ ಜನರು ನನ್ನನ್ನು ಕೇಳಿದಾಗ ಅಲ್ಲ" ಎಂದಿದ್ದರು. "ನಾನು ಯಾವುದೇ ವಿಷಯಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನನಗೆ ಚರ್ಚೆ ಮಾಡಲು ಇಷ್ಟವಿಲ್ಲ. ಹೇಗೆ ಎಲ್ಲರಿಗೂ ತಮ್ಮದೆ ಆದ ಅಭಿಪ್ರಾಯ ಹೇಳಲು ಹಕ್ಕಿದೆಯೊ ಹಾಗೆ ನನಗೂ ಹಕ್ಕಿದೆ" ಎಂದು ಹೇಳಿದರು.

ಇದೇ ಸಮಯದಲ್ಲಿ ಅಕ್ಕಿನೇನಿ ಕುಟುಂಬದ ಭಾಗವಾಗಿರುವುದು ನಟನಾ ಆಯ್ಕೆಗೆ ಹೊರೆಯಲ್ಲ ಎಂದು ಹೇಳಿದ್ದರು. "ನನಗೆ ದೊಡ್ಡ ಅಭಿಮಾನಿ ಬಳಗ ಮತ್ತು ಅವರ ಪ್ರೀತಿ ಇದೆ. ಆದರೆ ನಾನು ಮತ್ತು ನನ್ನ ವೃತ್ತಿ ಆಯ್ಕೆಗಳ ನಡುವೆ ಯಾವತ್ತು ಅಭಿಮಾನಿಗಳನ್ನಾಗಲಿ ಅಥವಾ ಯಾರನ್ನೂ ಸೇರಿಸುವುದಿಲ್ಲ" ಎಂದು ಸಮಂತಾ ಹೇಳಿದರು.

More from Filmibeat

English summary
Telugu Actor Nagarjuna has birthday feast to his wife Amala and Naga Chaitanya and Akkil but Samantha is missing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X