For Quick Alerts
  ALLOW NOTIFICATIONS  
  For Daily Alerts

  ಮಗ-ಸೊಸೆಯನ್ನು ಒಂದು ಮಾಡಲು ಹರಸಾಹಸ ಪಡುತ್ತಿದ್ದಾರಂತೆ ನಾಗಾರ್ಜುನ

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ದಂಪತಿ ಸಮಂತಾ ಮತ್ತು ನಾಗ ಚೈತನ್ಯ ನಡುವಿನ ಬಿರುಕು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಸ್ಟಾರ್ ದಂಪತಿಯ ನಡುವೆ ಯಾವುದು ಸರಿಯಿಲ್ಲ, ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. ಸ್ಟಾರ್ ದಂಪತಿಯ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೂ ಈ ಬಗ್ಗೆ ಸಮಂತಾ ಕಡೆಯಿಂದ ಅಥವಾ ಅಕ್ಕಿನೇನಿ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಹಿರಂಗವಾಗಿಲ್ಲ.

  ಸಮಂತಾ ಮತ್ತು ನಾಗ್ ಚೈತನ್ಯ ಒಟ್ಟಿಗೆ ಕಾಣಿಸಿಕೊಳ್ಳದೆ ತಿಂಗಳುಗಳೇ ಆಗಿದೆ. ಸಾಮಾಜಿಕ ಜಾಲತಾಣದಲ್ಲೂ ಸಮಂತಾ ಪತಿಯ ಫೋಟೋ ಶೇರ್ ಮಾಡುತ್ತಿಲ್ಲ. ಸಮಂತಾ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಹಾಟ್ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಆದರೆ ಪತಿಯ ಜೊತೆ ಇರುವ ಯಾವುದೇ ಫೋಟೋವನ್ನು ಸಮಂತಾ ಶೇರ್ ಮಾಡುತ್ತಿಲ್ಲ.

  ಅಲ್ಲದೆ ಇತ್ತೀಚಿಗಷ್ಟೆ ಸಮಂತಾ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೆಸರಿನ ಜೊತೆಯಿದ್ದ ಅಕ್ಕಿನೇನಿ ಹೆಸರನ್ನು ತೆಗೆದುಹಾಕಿದ್ದಾರೆ. ಅಕ್ಕಿನೇನಿ ಹೆಸರು ತೆಗೆದು ಹಾಕುತ್ತಿದ್ದಂತೆ ಸಮಂತಾ ಮತ್ತು ನಾಗ್ ನಡುವಿನ ಬಿರುಕಿನ ಬಗ್ಗೆ ಬಹಿರಂಗ ವಾಗಿದೆ. ಬಳಿಕ ಇಬ್ಬರ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನುವ ಗುಸು ಗುಸು ಸಹ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಸಮಂತಾ ಈಗಾಗಲೇ ಅಕ್ಕಿನೇನಿ ಮನೆ ಬಿಟ್ಟು ತಾಯಿ ಮನೆ ಸೇರಿದ್ದಾರೆ ಎನ್ನಲಾಗುತ್ತಿದೆ.

  ಆದರೆ ಮಗ-ಸೊಸೆ ದೂರ ದೂರ ಆಗುವುದು ನಾಗಾರ್ಜುನ ಅವರಿಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ಮಗ ಮತ್ತು ಸೊಸೆಯ ಸಂಬಂಧ ಸರಿ ಮಾಡಲು ನಾಗಾರ್ಜುನ ತುಂಬ ಪ್ರಯತ್ನ ಪಡುತ್ತಿದ್ದಾರಂತೆ. ಇಬ್ಬರ ನಡುವೆ ನಾಗಾರ್ಜುನ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

  ಸಮಂತಾ ಮತ್ತು ನಾಗ ಚೈತನ್ಯ ಇಬ್ಬರು 2017ರಲ್ಲಿ ಹಸೆಮಣೆ ಏರಿದರು. ಇಬ್ಬರೂ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತನ್ನ ಕನಸಿನ ಹಾಗೆ ಸಮಂತಾ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೀಗ ಮದುವೆಯಾಗಿ 4 ವರ್ಷ ತುಂಬುವುದರೊಳಗೆ ಬೇರೆ ಬೇರೆ ಆಗುತ್ತಿರುವ ಸುದ್ದಿ ವೈರಲ್ ಆಗಿರುವುದು ಅಭಿಮಾನಿಗಳಿಗೂ ಶಾಕ್ ಆಗಿದೆ.

  ಅಂದಹಾಗೆ ಸಮಂತಾ ಮತ್ತು ನಾಗ ಚೈತನ್ಯ ಮುಂದಿನ ತಿಂಗಳು 4ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಇಬ್ಬರೂ ಒಟ್ಟಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಾರಾ ಅಥವಾ ಸೈಲೆಂಟ್ ಆಗಿರುತ್ತಾರಾ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ತಿಂಗಳು ಇಬ್ಬರ ವಿಚ್ಛೇದನ ವದಂತಿಗೆ ತೆರೆ ಬೀಳುತ್ತಾ ಎಂದು ಕಾದು ನೋಡಬೇಕು.

  ಇನ್ನು ನಟಿ ಸಮಂತಾ ಸದ್ಯ ದಿ ಫ್ಯಾಮಿಲಿ ಮ್ಯಾನ್-2 ಸಕ್ಸಸ್ ಸಂತಸದಲ್ಲಿದ್ದಾರೆ. ಈ ವೆಬ್ ಸರಣಿ ಸಮಂತಾ ಅವರನ್ನು ನ್ಯಾಷನಲ್ ಸ್ಟಾರ್ ಆಗಿ ಮಾಡಿದೆ. ಈ ಸರಣಿ ಸೂಪರ್ ಸಕ್ಸಸ್ ಆದ ಬಳಿಕ ಸಮಂತಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈ ಸಿನಿಮಾ ಬಳಿಕ ಬಾಲಿವುಡ್ ಕಡೆಯಿಂದೂ ಸಮಂತಾಗೆ ಸಿಕ್ಕಾಪಟ್ಟೆ ಆಫರ್ ಬರುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

  ಸಮಂತಾ ಸದ್ಯ ತಮಿಳು ಮತ್ತು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಮಂತಾ ತೆಲುಗಿನ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ಸಂದರ್ಶನವೊಂದರಲ್ಲಿ ಮಾತನಾಡಿ ನಟನೆಯಿಂದ ಕೊಂಚ ಬ್ರೇಕ್ ಪಡೆಯುವುದಾಗಿ ಹೇಳಿದ್ದರು. 11 ವರ್ಷಗಳ ದೀರ್ಘ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಕಾರಣ ಕೊಂಚ ಬ್ರೇಕ್ ಬೇಕಾಗಿದೆ ಎಂದು ಸಮಂತಾ ಹೇಳಿದ್ದರು. ಹಾಗಾಗಿ ಸಮಂತಾ ಮುಂದಿನ ನಡೆ ಕುತೂಹಲ ಮೂಡಿಸಿದೆ.

  ಇತ್ತ ನಟ ನಾಗ ಚೈತನ್ಯ ಸದ್ಯ ಲವ್ ಸ್ಟೋರಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಇತ್ತೀಚಿಗಷ್ಟೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಗ್ ಚೈತನ್ಯಗೆ ಜೋಡಿಯಾಗಿ ಉಪ್ಪೆನಾ ಸುಂದರಿ ಕೃತಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಸಿನಿಮಾಗಳ ಜೊತೆಗೆ ನಾಗ್ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Actor Nagarjuna helps to Samantha and Naga Chaitanya's fix their marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X