ತೆಲುಗು ಬಿಗ್‌ಬಾಸ್ ನಲ್ಲಿ ನಿರೂಪಕರೇ ಎಲಿಮಿನೇಟ್! ನಾಗಾರ್ಜುನ ಸ್ಥಾನಕ್ಕೆ ಯಾರು?

ಪ್ರಸ್ತುತ ಪ್ರಸಾರವಾಗುತ್ತಿರುವ ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ಚೆನ್ನಾಗಿಯೇ ಟಿಆರ್‌ಪಿ ಗಳಿಸುತ್ತಿದೆ. ನಾಗಾರ್ಜುನ ಅವರ ನಿರೂಪಣೆಗೂ ಸಾಕಷ್ಟು ಮೆಚ್ಚುಗೆ ಕೇಳಿ ಬರುತ್ತಿದೆ.

ಆದರೆ ಹೊಸ ಸುದ್ದಿಯೆಂದರೆ ಬಿಗ್‌ಬಾಸ್ ನಿರೂಪಕ ನಾಗಾರ್ಜುನ ಅವರೇ ಬಿಗ್‌ಬಾಸ್ ನಿಂದ ಎಲಿಮಿನೇಟ್ ಆಗಲಿದ್ದಾರಂತೆ.

ಹೌದು, ನಾಗಾರ್ಜುನ ಅವರು ಇನ್ನು ಮುಂದಿನ ಎಪಿಸೋಡ್‌ಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲೇಬೇಕಾದ ಒತ್ತಡ ಇರುವ ಕಾರಣ ಬಿಗ್‌ಬಾಸ್ ನಿರೂಪಣೆ ಕೈಬಿಡುತ್ತಿದ್ದಾರೆ ನಾಗಾರ್ಜುನ.

Nagarjuna May Not Host Rest Of Bigg Boss Telugu Episodes

ನಟ ನಾಗಾರ್ಜುನ 'ವೈಲ್ಡ್ ಡಾಗ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣವನ್ನು ದೇಶದ ಕಾಡುಗಳಲ್ಲಿಯೇ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಮಲೇಷ್ಯಾದ ಕಾಡುಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ನಾಗಾರ್ಜುನ ಮಲೇಷ್ಯಾಕ್ಕೆ ಹೋಗುವುದು ಅನಿವಾರ್ಯವಾಗಿದೆ.

ಕಳೆದ ಬಾರಿಯೂ ಸಹ ಹೀಗೆಯೇ ಆಗಿತ್ತು, ನಾಗಾರ್ಜುನ ಅವರು ಬಿಗ್‌ಬಾಸ್ ಶೋ ಅನ್ನು ಅರ್ಧಕ್ಕೆ ಬಿಟ್ಟು ಕುಟುಂಬದೊಂದಿಗೆ ವಿದೇಶಕ್ಕೆ ಪ್ರವಾಸ ತೆರಳಿದ್ದರು. ಆಗ ನಟಿ ರಮ್ಯಾಕೃಷ್ಣ ಅವರು ಶೋ ನ ನಿರೂಪಣೆ ಮಾಡಿದ್ದರು.

ಆದರೆ ಈ ಬಾರಿ ನಾಗಾರ್ಜುನ ಅನುಪಸ್ಥಿತಿಯಲ್ಲಿ ಯಾರು ಬಿಗ್‌ಬಾಸ್ ನಿರೂಪಣೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ನಟ ನಾನಿ ಅಥವಾ ರಾಣಾ ದಗ್ಗುಬಾಟಿ ಶೋ ನ ನಿರೂಪಣೆ ಮಾಡಬಹುದು ಎನ್ನಲಾಗುತ್ತಿದೆ.

More from Filmibeat

English summary
Actor Nagarjuna may not host rest of Bigg Boss Telugu episodes. He is participating in a movie shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X