ಡಿವೋರ್ಸ್ ಬಳಿಕ ಮಗನ ಖಾಸಗಿ ವಿಚಾರದ ಬಗ್ಗೆ ತುಟಿ ಬಿಚ್ಚಿದ ನಾಗಾರ್ಜುನ
ದಕ್ಷಿಣ ಭಾರತ ಚಿತ್ರರಂಗದ ಕ್ಯೂಟ್ ಜೋಡಿಯಾಗಿದ್ದ ಸಮಂತಾ ರುತ್ ಪ್ರಭು ಹಾಗೂ ನಾಗ ಚೈತನ್ಯ ಡಿವೋರ್ಸ್ ಪಡೆದಿರುವುದು ಅಭಿಮಾನಿಗಳಿಗೆ ತೀರ ಬೇಸರವುಂಟು ಮಾಡಿತ್ತು. ಇವರಿಬ್ಬರ ಡಿವೋರ್ಸ್ ಸುದ್ದಿ ಸುಳ್ಳಾಗಲಿ ಎಂದು ಅನೇಕ ಅಭಿಮಾನಿಗಳು ಪ್ರಾರ್ಥಿಸಿದ್ದರು. ಆದರೆ ಅದಾಗಲೇ ದೂರಾಗಲು ನಿರ್ಧರಿಸಿದ್ದ ಈ ಜೋಡಿ ಏಕಾಏಕಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಡೈವೋರ್ಸ್ ವಿಚಾರವನ್ನು ತಿಳಿಸಿದ್ದರು.
ಡೈವೋರ್ಸ್ ಬಳಿಕ ನಟಿ ಸಮಂತಾ ಹಾಗೂ ನಾಗಚೈತನ್ಯ ಅವರ ವೈಯಕ್ತಿ ಅನೇಕ ವಿಚಾರಗಳು ಹರಿದಾಡಿದ್ದು, ಈ ಬಗ್ಗೆ ಸ್ವತಃ ಸಮಂತಾ ಅನೇಕ ಬಾರಿ ಸ್ಪಷ್ಟನೆ ನೀಡಿದ್ದು, ನಾಗಚೈತನ್ಯ ಕೆಲವು ಸಂದರ್ಭಗಳಲ್ಲಷ್ಟೇ ಈ ಬಗ್ಗೆ ಮಾತನಾಡಿದ್ದರು. ಆದರೆ ಟಾಲಿವುಡ್ ಕಿಂಗ್ ನಾಗಾರ್ಜುನ್ ಆಗಲಿ ಅಕ್ಕಿನೇನಿ ಕುಟುಂಬಸ್ಥರಾಗಲಿ ಈ ಬಗ್ಗೆ ಮಾತನಾಡಿರಲಿಲ್ಲ. ಇದೀಗ ನಾಗ ಚೈತನ್ಯ ತಂದೆ ನಟ ನಾಗಾರ್ಜುನ ಅಕ್ಕಿನೇನಿ ಮಗನ ಖಾಸಗಿ ಬದುಕಿನ ವಿಚಾರವಾಗಿ ಮಾತನಾಡಿದ್ದಾರೆ.

ಮಗನ ಸಂತೋಷವಷ್ಟೇ ಮುಖ್ಯ ಎಂದ ಟಾಲಿವುಡ್ ಕಿಂಗ್
ಟಾಲಿವುಡ್ ಕಿಂಗ್ ನಾಗಾರ್ಜುನ್ ಈವರೆಗೂ ಮಗನ ಖಾಸಗಿ ಬದುಕಿನ ವಿಚಾರವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಇದೀಗ ಮಗನ ಡಿವೋರ್ಸ್ ಬಗ್ಗೆ ಮಾತನಾಡಿದ್ದು, ನನಗೆ ಮಗನ ಸಂತೋಷವಷ್ಟೇ ಮುಖ್ಯ ಎಂದಿದ್ದಾರೆ. ಸದ್ಯ ಆತ ಖುಷಿಯಾಗಿದ್ದಾನೆ. ನಾಗ ಚೈತನ್ಯ ಜೀವನದಲ್ಲಿ ಈ ಘಟನೆ ನಡೆದಿರುವುದು ದುರಾದೃಷ್ಟಕರ. ಬೇರೆ ವಿಷಯದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ನಮ್ಮ ಜೀವನದ ಹೊರಗಿನ ವಿಚಾರ. ಪ್ರತಿಯೊಬ್ಬರು ಅವರವರ ಜೀವನವನ್ನು ಅವರು ನಿಭಾಯಿಸುತ್ತಾರೆ ಎಂದಿದ್ದಾರೆ.

ಮಗಿದು ಹೋದ ಕಥೆ ಎಂದು ಬೇಸರಪಟ್ಟ ಜೋಸೆಫ್ ಪ್ರಭು
ಕಳೆದ ಕೆಲ ದಿನಗಳ ಹಿಂದೆ ಸಮಂತಾ ತಂದೆ ಜೋಸೆಫ್ ಅವರು ನಾಗ ಚೈತನ್ಯ ಹಾಗೂ ಸಮಂತ ಮದುವೆಯ ಸಂತಸದ ಕ್ಷಣದ ಫೋಟೋಗಳನ್ನು ಶೇರ್ ಮಾಡಿದ್ದರು. ಈ ಮೂಲಕ ಮಗಳ ಜೀವನದ ಅತಿಮುಖ್ಯ ಘಟಕದ ಕ್ಷಣಗಳನ್ನು ಮೆಲುಕು ಹಾಕಿದ್ದರು. ಫೋಟೋಗಳ ಜೊತೆಗೆ ಅಡಿ ಬರಹ ಕೂಡ ಬರೆದಿದ್ದ ಸಮಂತಾ ತಂದೆ ಜೋಸೆಫ್ ತುಂಬಾ ಅಂದ್ರೆ ತುಂಬಾ ಹಿಂದಿನ ಕಥೆ ಇದು. ಆದರೆ ಸದ್ಯ ಈ ವಿಚಾರ ಜೀವಂತವಾಗಿಲ್ಲ. ಆದ್ದರಿಂದ ಹೊಸ ಕಥೆ ಆರಂಭಿಸೋಣ ಎಂದು ಬರೆದುಕೊಂಡಿದ್ದರು. ಈ ಫೋಸ್ಟ್ ನೋಡಿದ ಸಮಂತಾ-ನಾಗಚೈತನ್ಯ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದರು.

ಸಮಂತಾ ನಟನೆಯ ಮುಂದಿನ ಚಿತ್ರ ಯಾವುದು..?
ಸಮಂತಾ ಹಾಗೂ ನಾಗಚೈತನ್ಯ ನಡುವಿನ ಸಂಬಂಧದ ಬಿರುಕಿಗೆ ಸಂಮಂತಾ ಆಯ್ಕೆ ಮಾಡುತ್ತಿದ್ದ ಬೋಲ್ಡ್ ಪಾತ್ರಗಳೂ ಕಾರಣ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಈ ವಿಚಾರಕ್ಕೆ ಪುಷ್ಟಿ ಕೊಡುವಂತೆ ಸಮಂತಾ ಹಾಟ್ ಆ್ಯಂಡ್ ಬೋಲ್ಡ್ ಫೋಟೋಗಳು ಕೂಡ ಇತ್ತೀಚಿಗೆ ಹೆಚ್ಚಾಗಿ ವೈರಲ್ ಆಗುತ್ತಿದೆ. ಸಮಂತಾ ಕೂಡ ನೆಗೆಟಿವ್ ಕಮೆಂಟ್ಗಳಿಗೆ ಡೋಂಟ್ ಕೇರ್ ಎನ್ನುತ್ತಿದ್ದು, ತಮಗಿಷ್ಟ ಬಂದಂತೆ ಫ್ಯಾನ್ಸ್ಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವೃತ್ತಿ ಜೀವನದಲ್ಲೂ ಸಮಂತ ಬ್ಯುಸಿಯಾಗಿದ್ದು, ಯಶೋಧ ಹಾಗೂ ಶಕುಂತಲಂ ಚಿತ್ರಗಳ ಕೆಲಸಲ್ಲಿ ತೊಡಗಿಸಿಕೊಂಡಿದ್ದಾರೆ.

ನಟಿ ಶೋಭಿತಾ ಜೊತೆ ಸ್ಯಾಮ್ ಮಾಜಿ ಪತಿ ಲವ್ವಿ-ಡವ್ವಿ
ಇನ್ನು ಡಿವೋರ್ಸ್ ಬಳಿಕ ಸೈಲೆಂಟ್ ಆಗಿದ್ದ ನಾಗಾಚೈತನ್ಯ ಇತ್ತೀಚಿಗೆ ಲಾಲ್ ಸಿಂಗ್ ಚೆಡ್ಡಾ ಸಿನಿಮಾ ಪ್ರಚಾರದ ವೇಳೆ ಮತ್ತೆ ಮುಖ್ಯ ಭೂಮಿಕೆಗೆ ಬಂದಿದ್ದರು. ಜೀವನದಲ್ಲಿ ಪ್ರೀತಿ ಎನ್ನುವ ಅಂಶ ಮುಖ್ಯವೆಂದಿದ್ದ ನಾಗಚೈತನ್ಯ ಮತ್ತೆ ಲವ್ನಲ್ಲಿ ಬಿದ್ದಿದ್ದಾರೆ ಎನ್ನುವ ಗಾಸಿಪ್ ಕೂಡ ಹರಿದಾಡುತ್ತಿದೆ. ಸದ್ಯ ನಟಿ ಶೋಭಿತಾ ಧುಲಿಪಲಾ ಹೆಸರಿನ ಜೊತೆ ನಾಗಚೈತನ್ಯ ಹೆಸರು ತಳುಕು ಹಾಕಿಕೊಂಡಿದ್ದು, ಇಬ್ಬರ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ.


Click it and Unblock the Notifications











