ಸಮಂತಾ-ನಾಗ ಚೈತನ್ಯ ವಿಚ್ಚೇಧನದ ಬಗ್ಗೆ ಅಪ್ಪ ನಾಗಾರ್ಜುನ ಮಾತು

ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನ ಪಡೆದುಕೊಂಡಿದ್ದು ಕಳೆದ ವರ್ಷದ ಬಹು ದೊಡ್ಡ ಸೆಲೆಬ್ರಿಟಿ ಸುದ್ದಿಗಳಲ್ಲಿ ಒಂದಾಗಿತ್ತು. ಈಗಲೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ.

ನಾಗ ಚೈತನ್ಯ ನಟಿಸಿರುವ 'ಬಂಗಾರ್ರಾಜು' ಸಿನಿಮಾ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ನಾಗ ಚೈತನ್ಯ ತಂದೆ ನಾಗಾರ್ಜುನ ಸಹ ನಟಿಸಿದ್ದಾರೆ. ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಹಲವು ಬಾರಿ ನಾಗ ಚೈತನ್ಯ ವಿಚ್ಛೇಧನ ಕುರಿತಾದ ಪ್ರಶ್ನೆಗಳನ್ನು ಎದುರಿಸಿದರು. ನಾಗ ಚೈತನ್ಯ ಮಾತ್ರವೇ ಅಲ್ಲ, ನಟ ನಾಗಾರ್ಜುನ ಸಹ ಈ ಕುರಿತ ಪ್ರಶ್ನೆಗಳನ್ನು ಎದುರಿಸಿದ್ದಾರೆ.

ತಮ್ಮ ಪುತ್ರನ ವಿಚ್ಛೇಧನದ ವಿಷಯವಾಗಿ ನಟ ನಾಗಾರ್ಜುನ ಮೊದಲ ಬಾರಿಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ''ನನಗೆ ಆತಂಕವಾಗಿತ್ತು, ಜೊತೆಗೆ ಮಗನ ಬಗ್ಗೆಯೂ ಹೆಮ್ಮೆಯೂ ಆಗಿದೆ'' ಎಂದಿದ್ದಾರೆ.

''ವಿಚ್ಛೇಧನ ಸಾಮಾನ್ಯ ವಿಷಯವಲ್ಲ. ಹಾಗಾಗಿ ಮಗನ ಬಗ್ಗೆ ನನಗೆ ಆತಂಕವಾಗಿತ್ತು. ಆದರೆ ನಾನು ಅವನ ಬಗ್ಗೆ ಆತಂಕ ಪಡುವುದಕ್ಕಿಂತಲೂ ಹೆಚ್ಚಾಗಿ ಅವನು ನನ್ನ ಬಗ್ಗೆ ಆತಂಕಿತನಾಗಿದ್ದ. ಆಗಾಗ್ಗೆ ಕೇಳುತ್ತಲೇ ಇದ್ದ 'ಅಪ್ಪ ನೀವು ಆರಾಮವಾಗಿದ್ದೀರಿ ತಾನೆ?'' ಎಂದು, ಆಗ ನಾನು ಹೇಳುತ್ತಿದ್ದೆ. ಈ ಮಾತನ್ನು ನಾನು ನಿನಗೆ ಕೇಳಬೇಕು ಎಂದು'' ಎಂದಿದ್ದಾರೆ ನಾಗಾರ್ಜುನ.

ಮಗನ ಬಗ್ಗೆ ಹೆಮ್ಮೆ ಇದೆ: ನಾಗಾರ್ಜುನ

ಮಗನ ಬಗ್ಗೆ ಹೆಮ್ಮೆ ಇದೆ: ನಾಗಾರ್ಜುನ

''ನನಗೆ ನನ್ನ ಮಗನ ಹೆಮ್ಮೆಯೂ ಇದೆ'' ಎಂದಿರುವ ನಾಗಾರ್ಜು, ''ವಿಚ್ಛೇಧನದ ಬಳಿಕ ನಾಗ ಚೈತನ್ಯ ವರ್ತನೆ ಕಂಡು ನನಗೆ ಹೆಮ್ಮೆ ಎನಿಸಿದೆ. ವಿಚ್ಛೇಧನ ಆದಾಗಿನಿಂದಲೂ ಆತ ಸಮಚಿತ್ತದಿಂದ ಇದ್ದಾನೆ. ವಿಚ್ಛೇಧನ ಬಹಳ ಕಠಿಣವಾದ ವಿಷಯ, ಹಲವರು ತಮ್ಮ ಸಂಯಮ ಕಳೆದುಕೊಂಡು ವರ್ತಿಸುತ್ತಾರೆ, ಆದರೆ ನಾಗ ಚೈತನ್ಯ ಹಾಗೆ ಮಾಡಿಲ್ಲ. ಮಾಮೂಲಿನಂತೆಯೇ ಇದ್ದಾನೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದಾನೆ'' ಎಂದಿದ್ದಾರೆ ನಟ ನಾಗಾರ್ಜುನ.

ನಾಗಾರ್ಜುನ್ ಸಹ ವಿಚ್ಛೇಧನ ಪಡೆದವರೇ?

ನಾಗಾರ್ಜುನ್ ಸಹ ವಿಚ್ಛೇಧನ ಪಡೆದವರೇ?

ನಾಗಾರ್ಜುನ ಸಹ ವಿಚ್ಛೇಧನ ಪಡೆದುಕೊಂಡವರೇ. 1984 ರಲ್ಲಿ ನಟ ನಾಗಾರ್ಜುನ, ತೆಲುಗು ನಟ ವೆಂಕಟೇಶ್ ಸಹೋದರಿ ಲಕ್ಷ್ಮಿ ದಗ್ಗುಬಾಟಿಯನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಜನಸಿದವರೇ ನಾಗ ಚೈತನ್ಯ. ಬಳಿಕ 1990 ರಲ್ಲಿ ಲಕ್ಷ್ಮಿ ದಗ್ಗುಬಾಟಿ ಅವರಿಂದ ವಿಚ್ಛೇಧನ ಪಡೆದು 1992 ರಲ್ಲಿ ನಟಿ ಅಮಲಾ ಅವರನ್ನು ವಿವಾಹವಾದರು. ಅಮಲಾ ಹಾಗೂ ನಾಗಾರ್ಜುನ್ ಅವರಿಗೆ ಅಖಿಲ್ ಹೆಸರಿನ ಪುತ್ರ ಇದ್ದು, ಇವರೂ ಸಹ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ ವಿಚ್ಛೇಧನ ಪಡೆದಾಗ ಸಾಮಾಜಿಕ ಜಾಲತಾಣದಲ್ಲಿ ''ಅಪ್ಪನಂತೆ ಮಗ' ಎಂಬ ಮಾತುಗಳು ಸಾಕಷ್ಟು ಹರಿದಾಡಿದ್ದವು.

ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

ನಾಗ ಚೈತನ್ಯ ಸಹ ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ತಮ್ಮ ವಿಚ್ಛೇಧನದ ವಿಷಯ ಮಾತನಾಡಿದ್ದು, ''ಇಬ್ಬರ ಒಳಿತಾಗಿ ತೆಗೆದುಕೊಂಡ ನಿರ್ಣಯವದು. ಆಕೆ ಸಂತೋಷವಾಗಿದ್ದರೆ, ನಾನೂ ಸಂತೋಷವಾಗಿರುತ್ತೇನೆ. ಆ ಸಂದರ್ಭದಲ್ಲಿ ಈ (ವಿಚ್ಛೇಧನ) ನಿರ್ಣಯ ಸೂಕ್ತ ಎನಿಸಿತು ಹಾಗಾಗಿ ನಿರ್ಣಯ ತೆಗೆದುಕೊಂಡೆವು'' ಎಂದಿದ್ದಾರೆ. ಇಬ್ಬರ ನಡುವೆ ಮನಸ್ಥಾಪ ಮೂಡಲು ಕಾರಣವಾದ ಅಂಶ ಯಾವುದೆಂದು ನಾಗ ಚೈತನ್ಯ ಹೇಳಲು ನಿರಾಕರಿಸಿದರು.

ವೃತ್ತಿ ಜೀವನದಲ್ಲಿ ಬ್ಯುಸಿ ಆದ ಸಮಂತಾ-ನಾಗ

ವೃತ್ತಿ ಜೀವನದಲ್ಲಿ ಬ್ಯುಸಿ ಆದ ಸಮಂತಾ-ನಾಗ

ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ತಮ್ಮ 11 ವರ್ಷಗಳ ಪ್ರೀತಿಯನ್ನು ಕಳೆದ ವರ್ಷ ವಿಚ್ಛೇಧನದ ಮೂಲಕ ಅಂತ್ಯಗೊಳಿಸಿದರು. 2010ರಿಂದಲೂ ಈ ಜೋಡಿ ಪ್ರೀತಿಸುತ್ತಿತ್ತು. 2017 ರಲ್ಲಿ ಮನೆಯರ ಒಪ್ಪಿಗೆ ಮೇರೆಗೆ ವಿವಾಹವಾದರು. ಬಳಿಕ ಕಳೆದ ವರ್ಷ ಅಕ್ಟೋಬರ್‌ ನಲ್ಲಿ ವಿಚ್ಛೇಧನವನ್ನು ಪ್ರಕಟಿಸಿದರು. ಪರಸ್ಪರ ಒಪ್ಪಿ ವಿಚ್ಛೇಧನ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಪೋಸ್ಟ್ ಹಾಕಿದ್ದರು ಈ ಜೋಡಿ. ಈಗ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ 'ಶಾಕುಂತಲಂ', ಇಂಗ್ಲೀಷ್ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್', ಹಿಂದಿಯ ಎರಡು ಸಿನಿಮಾ, ತಮಿಳಿನ 'ಕಾತುವಾಕ್ಕು ರೆಂಡು ಕಾದಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ ನಟನೆಯ 'ಬಂಗಾರ್ರಾಜು' ಇದೇ ಸಂಕ್ರಾಂತಿಗೆ ಬಿಡುಗಡೆ ಆಗಿದೆ. 'ಥ್ಯಾಂಕ್‌ ಯೂ' ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ. ನಾಗಚೈತನ್ಯ ನಟಿಸಿರುವ ಹಿಂದಿಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಸಹ ಏಪ್ರಿಲ್‌ ನಲ್ಲಿಯೇ ಬಿಡುಗಡೆ ಆಗಲಿದೆ.

More from Filmibeat

English summary
Actor Nagarjuna talks about Samantha and Naga Chaithanya divorce. He said I am proud of my son Naga Chaithanya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X