ಮಹೇಶ್ ಬಾಬು ಮೀಸೆ ಲುಕ್ ಗೆ ಅಭಿಮಾನಿಗಳು ಫಿದಾ
ಟಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಮಹೇಶ್ ಬಾಬು ಇತ್ತೀಚಿಗೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮಹೇಶ್ ಗಡ್ಡ ಮತ್ತು ಮೀಸೆ ಬಿಟ್ಟಿರುವ ಲುಕ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮೊದಲ ಬಾರಿಗೆ ಉದ್ದ ಮೀಸೆ ಲುಕ್ ನಲ್ಲಿ ದರ್ಶನ ನೀಡಿದ್ದಾರೆ.
ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿ ಮೀಸೆ ಬಿಟ್ಟಿರುವ ಮಹೇಶ್ ಬಾಬು ಹೊಸ ಲುಕ್ ಅನ್ನು ಪತ್ನಿ ನಮ್ರತಾ ಶಿರೋಡ್ಕರ್ ಶೇರ್ ಮಾಡಿದ್ದಾರೆ. ನಮ್ರತಾ ಪತಿಯ ಹೊಸ ಗೆಟಪ್ ಅನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ.
ಅಂದ್ಹಾಗೆ ಮಹೇಶ್ ಬಾಬು ಈ ಲುಕ್ ಹೊಸ ಸಿನಿಮಾಗೆ ಅಂತ ಯೋಚಿಸಬೇಡಿ. ಟಾಲಿವುಡ್ ಪ್ರಿನ್ಸ್ ಹೀಗೆ ಕಾಣಿಸಿಕೊಂಡಿದ್ದು, ಜಾಹೀರಾತಿನ ಚಿತ್ರೀಕರಣದಲ್ಲಿ. ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡು ಕೃತಕ ಮೀಸೆ ಹಾಕಿದ್ದಾರೆ. ಈ ಜಾಹೀರಾತಿನಲ್ಲಿ ಮಹೇಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪ ಮತ್ತು ಮಗನ ಪಾತ್ರದಲ್ಲಿ ಮಿಂಚಿದ್ದಾರೆ. ಈ ಲುಕ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಲಾಕ್ ಡೌನ್ ಬಳಿಕ ಮಹೇಶ್ ಬಾಬು ಇನ್ನು ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಸದ್ಯದಲ್ಲೇ ಸರ್ಕಾರು ವಾರಿ ಪಾಟ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರದಲ್ಲಿ ಮಹೇಶ್ ಗೆ ಜೋಡಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











