ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ

ನಟ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರು ಟಾಲಿವುಡ್‌ನ ಕ್ಯೂಟ್‌ ಕಪಲ್‌. ನಮ್ರತಾ ಮತ್ತು ಮಹೇಶ್ ಅವರ ದಾಂಪತ್ಯಕ್ಕೆ 15 ವರ್ಷ.

Recommended Video

ದಾರವಾಹಿಯಿಂದ ಸಿನಿಮಾ ವರೆಗೆ ಶತಮರ್ಷನ್ ಅವಿನಾಶ್ ಪಯಣ ಹೇಗಿತ್ತು | Shatamarshan Avinash | Filmibeat Kannada

ನಮ್ರತಾ ಶಿರೋಡ್ಕರ್ ಹಾಗೂ ಮಹೇಶ್ ಬಾಬು ಮಧ್ಯೆ ಪ್ರೀತಿ ಅರಳಿದ್ದು ಹೇಗೆ? ಎಲ್ಲಿ ಎಂಬ ಬಗ್ಗೆ ನಮ್ರತಾ ಹೇಳಿದ್ದಾರೆ.

ನಮ್ರತಾ ಶಿರೋಡ್ಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬ ಮಹೇಶ್ ಬಾಬು ಹಾಗೂ ನಿಮ್ಮ ನಡುವೆ ಪ್ರೇಮ ಹೇಗೆ ಹುಟ್ಟಿತು, ನೀವು ಮಹೇಶ್ ಅವರನ್ನು ಪ್ರೀತಿಸುತ್ತೀದ್ದೀರೆಂಬ ವಿಷಯ ನಿಮಗೆ ಮನದಟ್ಟಾಗಿದ್ದು ಯಾವಾಗ ಎಂಬ ಪ್ರಶ್ನೆ ಕೇಳಿದ್ದಾರೆ.

ನ್ಯೂಜಿಲೆಂಡ್‌ ಕತೆ ಹೇಳಿದ ನಮ್ರತಾ

ನ್ಯೂಜಿಲೆಂಡ್‌ ಕತೆ ಹೇಳಿದ ನಮ್ರತಾ

ಇದಕ್ಕೆ ಉತ್ತರ ನೀಡಿದ ನಮ್ರತಾ, ನ್ಯೂಜಿಲೆಂಡ್‌ನಲ್ಲಿ 52 ದಿನಗಳ ಸತತ ಶೂಟಿಂಗ್ ಮುಗಿಸಿ ಕೊನೆಯ ದಿನದ ಶೂಟಿಂಗ್ ಮುಗಿಸಿ ಹೊರಡುವ ವೇಳೆ ನಾನು ಮಹೇಶ್ ಬಾಬು ಅವರನ್ನು ಪ್ರೀತಿಸುತ್ತಿದ್ದೇನೆಂದು ನನಗೆ ಅರಿವಾಯಿತು ಎಂದಿದ್ದಾರೆ ನಮ್ರತಾ.

ನನ್ನ ಪೋಷಕರಿಗೆ ಮಹೇಶ್ ಬಹಳ ಇಷ್ಟ

ನನ್ನ ಪೋಷಕರಿಗೆ ಮಹೇಶ್ ಬಹಳ ಇಷ್ಟ

ನಮ್ಮ ಮನೆಯಲ್ಲಿ ನನ್ನ ಪ್ರೀತಿಯ ವಿಷಯ ಹೇಳಿದಾಗ ಅವರು ಸುಲಭವಾಗಿ ಒಪ್ಪಿಕೊಂಡರು. ನನ್ನ ಪೋಷಕರು ಮೊದಲ ಬಾರಿ ಮಹೇಶ್ ಅನ್ನು ನೋಡಿದಾಗಲೇ ಅವರಿಗೆ ಮಹೇಶ್ ಇಷ್ಟವಾಗಿಬಿಟ್ಟಿದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ ನಮ್ರತಾ.

ಮಹೇಶ್ ಬಾಬು ನಟನೆಯ ಯಾವ ಸಿನಿಮಾ ಇಷ್ಟ?

ಮಹೇಶ್ ಬಾಬು ನಟನೆಯ ಯಾವ ಸಿನಿಮಾ ಇಷ್ಟ?

ಮಹೇಶ್ ಬಾಬು ನಟನೆಯ ಯಾವ ಸಿನಿಮಾ ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿರುವ ನಮ್ರತಾ, 'ನನಗೆ ವಂಶಿ ಸಿನಿಮಾ ಸಾಕಷ್ಟು ಇಷ್ಟ. ಆದರೆ ನನ್ನ ಆಲ್‌ಟೈಮ್ ಫೇವರೇಟ್ ಮಹೇಶ್ ಬಾಬು ನಟನೆಯ 'ಒಕ್ಕಡು' ಆ ಸಿನಿಮಾವನ್ನು ಎಷ್ಟು ಬಾರಿ ಬೇಕಾದರೂ ನೋಡಬಲ್ಲೆ, ಅದೊಂದು ಕ್ಲಾಸಿಕ್' ಎಂದಿದ್ದಾರೆ.

ಮಾವ ಕೃಷ್ಣ ಬಗ್ಗೆಯೂ ಮಾತನಾಡಿದ್ದಾರೆ

ಮಾವ ಕೃಷ್ಣ ಬಗ್ಗೆಯೂ ಮಾತನಾಡಿದ್ದಾರೆ

ಮಾವ ಕೃಷ್ಣ ಅವರ ಬಗ್ಗೆಯೂ ಮಾತನಾಡಿರುವ ನಮ್ರತಾ, ಅವರೊಬ್ಬ ಅದ್ಭುತ ಮನುಷ್ಯ, ನಾನು ಅವರಲ್ಲಿ ನನ್ನ ತಂದೆಯವರನ್ನು ಕಾಣುತ್ತೇನೆ ಎಂದಿದ್ದಾರೆ.

ಮಹೇಶ್ ಬಗ್ಗೆ ಅಪನಂಬಿಕೆ ಎನಿಸುತ್ತದೆಯೇ?

ಮಹೇಶ್ ಬಗ್ಗೆ ಅಪನಂಬಿಕೆ ಎನಿಸುತ್ತದೆಯೇ?

ನಿಮಗೆ ಮಹೇಶ್ ಬಗ್ಗೆ ಅಪನಂಬಿಕೆ ಏನಾದರೂ ಕಾಡುತ್ತದೆಯೇ? ಎಂಬ ಪ್ರಶ್ನೆಗೆ, ನಮ್ಮಿಬ್ಬರ ನಡುವೆ ಸಾಕಷ್ಟು ಪ್ರೀತಿ, ನಂಬಿಕೆ ಇದೆ ಹಾಗಾಗಿ ಅವರ ಮೇಲೆ ನನಗೆ ಅಪನಂಬಿಕೆ, ಇನ್‌ಸಸೆಕ್ಯುರ್ ಅನಿಸುವುದೇ ಇಲ್ಲ ಎಂದಿದ್ದಾರೆ ನಮ್ರತಾ.

More from Filmibeat

English summary
Mahesh Babu's wife Namratha Shirodkar talks about her love with Mahesh Babu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X