twitter
    For Quick Alerts
    ALLOW NOTIFICATIONS  
    For Daily Alerts

    ಆಂಧ್ರಪ್ರದೇಶ ದಿಕ್ಕೆಟ್ಟ ರಾಜ್ಯವಾಗಿದೆ: ನಟ ಬಾಲಕೃಷ್ಣ ಕಟು ವಾಗ್ದಾಳಿ

    |

    ನಟ ನಂದಮೂರಿ ಬಾಲಕೃಷ್ಣ ಸಿನಿಮಾಗಳಲ್ಲಿ ಅಬ್ಬರದ ಸಂಭಾಷಣೆಗಳನ್ನು ಹೇಳಲು ಖ್ಯಾತರು. ಸಿನಿಮಾಗಳಲ್ಲಿ ಅವರ ಡೈಲಾಗ್‌ಗಳಿಗೆ ಚಪ್ಪಾಳೆ, ಶಿಳ್ಳೆಗಳು ಖಾಯಂ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲ ಮೈಕ್ ಸಿಕ್ಕರೆ ಸಾಕು ಬಾಲಕೃಷ್ಣ ಬಾಯಿಂದ ಡೈಲಾಗ್‌ಗಳ ಸುರಿಮಳೆ ಆಗುತ್ತಲೇ ಇರುತ್ತದೆ.

    ಸಿನಿಮಾ ಆಗಲಿ ನಿಜ ಜೀವನವಾಗಲಿ ಬಾಲಕೃಷ್ಣ 'ಫಿಯರ್‌ಲೆಸ್'. ಈ ಹಿಂದೆ ಹಲವು ಬಾರಿ ಜೊತೆಗಾರ ನಟರ ವಿರುದ್ಧವೇ ಬಹಿರಂಗವಾಗಿ ಸವಾಲು ಹಾಕು ವೇದಿಕೆ ಮೇಲೆ ತೊಡೆ ತಟ್ಟಿದ್ದೂ ಇದೆ. ಒಮ್ಮೆಯಂತೂ ನಿರ್ದೇಶಕನ ಎದೆಗೆ ಗುಂಡು ಹೊಡೆದಿದ್ದರು ನಟ ಬಾಲಕೃಷ್ಣ.

    ಇದೀಗ ಆಂಧ್ರ ಪ್ರದೇಶದ ಜಗನ್ ಸರ್ಕಾರದ ವಿರುದ್ಧ ಇಡೀಯ ತೆಲುಗು ಚಿತ್ರರಂಗವೇ ಗರಂ ಆಗಿದೆ. ಪವನ್ ಕಲ್ಯಾಣ್ ಆದಿಯಾಗಿ ಹಲವರು ಜಗನ್ ಸರ್ಕಾರವನ್ನು ಟೀಕಿಸಿದ್ದಾರೆ, ನಿಂದಿಸಿದ್ದಾರೆ, ಶಪಿಸಿದ್ದಾರೆ ಸಹ. ಆದರೆ ಈ ವಿಷಯದಲ್ಲಿ ಬಾಲಕೃಷ್ಣ ಅಷ್ಟೇನೂ ಗುರುತರ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಒಮ್ಮೆಲೆ ಜಗನ್ ಸರ್ಕಾರದ ಮೇಲೆ ಮುಗಿದು ಬಿದ್ದಿದ್ದಾರೆ ಬಾಲಕೃಷ್ಣ. ಜಗನ್ ಸರ್ಕಾರವನ್ನು ಟೀಕಿಸುವ ಭರದಲ್ಲಿ ಆಂಧ್ರ ಪ್ರದೇಶ ರಾಜ್ಯವನ್ನೇ ಕಟು ಭಾಷೆಯಲ್ಲಿ ಟೀಕಿಸಿದ್ದಾರೆ.

    ಜಗನ್ ವಿರುದ್ಧ ಕೆಂಡ ಕಾರಿದ ಬಾಲಕೃಷ್ಣ

    ಜಗನ್ ವಿರುದ್ಧ ಕೆಂಡ ಕಾರಿದ ಬಾಲಕೃಷ್ಣ

    ಬಾಲಕೃಷ್ಣ ನಟಿಸಿರುವ ಹೊಸ ಸಿನಿಮಾ 'ಅಖಂಡ' ಬಿಡುಗಡೆ ಆಗಿ ಐವತ್ತು ದಿನ ಪೂರೈಸಿರುವ ಕಾರಣ ಚಿತ್ರತಂಡವು ಹೈದರಾಬಾದ್‌ನಲ್ಲಿ 'ಥ್ಯಾಂಕ್ಯೂ ಮೀಟ್' ಏರ್ಪಾಡು ಮಾಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನಟ ಬಾಲಕೃಷ್ಣ, ಆಂಧ್ರ ಪ್ರದೇಶ ಸರ್ಕಾರ ಹಾಗೂ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೆಂಡ ಕಾರಿದರು. ''ರಾಜಧಾನಿಯೇ ಇಲ್ಲದ ಆಂಧ್ರ ಪ್ರದೇಶ ದಿಕ್ಕೆಟ್ಟ ರಾಜ್ಯವಾಗಿಬಿಟ್ಟಿದೆ'' ಎಂದಿದ್ದಾರೆ.

    ಆಂಧ್ರದಲ್ಲಿ ದೇವಸ್ಥಾನಗಳ ಮೇಲೆ ದಾಳಿ: ಬಾಲಕೃಷ್ಣ

    ಆಂಧ್ರದಲ್ಲಿ ದೇವಸ್ಥಾನಗಳ ಮೇಲೆ ದಾಳಿ: ಬಾಲಕೃಷ್ಣ

    ಆಂಧ್ರ ಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ದಾಳಿ ಆಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಾಲಕೃಷ್ಣ, ''ಆಂಧ್ರದಲ್ಲಿ ದೇವಾಲಯಗಳ ಮೇಲೆ ದಾಳಿಗಳು ನಡೆಯುತ್ತಿರುವ ವಿಷಯದ ಬಗ್ಗೆ ಹಲವು ವೇದಿಕೆಗಳಲ್ಲಿ ಚರ್ಚೆ ನಡೆದಿದೆ. ಸಿನಿಮಾ ಸಹ ಮಾಧ್ಯಮವಾದ್ದರಿಂದ 'ಅಖಂಡ' ಸಿನಿಮಾ ಮೂಲಕ ಆ ವಿಷಯವನ್ನೂ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಹಿಂದುಪುರ ಶಾಸಕನಾಗಿ, ಪ್ರಜಾ ಪ್ರತಿನಿಧಿಯಾಗಿ ಸಿನಿಮಾ ಮೂಲಕ ನಾನು ನನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದೇನೆ'' ಎಂದಿದ್ದಾರೆ ಬಾಲಕೃಷ್ಣ.

    ರಾಜಧಾನಿ ಇಲ್ಲದೆ ದಿಕ್ಕೆಟ್ಟಿದೆ ಆಂಧ್ರ: ಬಾಲಕೃಷ್ಣ

    ರಾಜಧಾನಿ ಇಲ್ಲದೆ ದಿಕ್ಕೆಟ್ಟಿದೆ ಆಂಧ್ರ: ಬಾಲಕೃಷ್ಣ

    ''ಜಾತಿ ಮತ್ತು ಧರ್ಮ, ಪ್ರದೇಶಗಳ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿವೆ. ಇವುಗಳನ್ನೇ ಆಧಾರವಾಗಿಟ್ಟುಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಅದಕ್ಕಾಗಿಯೇ ''ಪ್ರದೇಶಗಳಾಗಿ ವಿಂಗಡಿಸುತ್ತೀರ'' ಎಂಬ ಡೈಲಾಗ್ ಅನ್ನು ಸಹ ಸಿನಿಮಾದಲ್ಲಿ ಇಟ್ಟಿದ್ದೀವಿ ಎಂಬ ಬಾಲಕೃಷ್ಣ, ಆಂಧ್ರಪ್ರದೇಶ ರಾಜಧಾನಿ ಇಲ್ಲದ ರಾಜ್ಯವಾಗಿಬಿಟ್ಟಿದೆ. ಮೂರು ರಾಜಧಾನಿ ಎಂದು ಸರ್ಕಾರ ಹೇಳುತ್ತಿದೆ. ಅಮರಾವತಿಯೇ ರಾಜ್ಯದ ರಾಜಧಾನಿ ಆಗಬೇಕು ಎಂದು ರೈತರು, ಪ್ರಜೆಗಳು ಹೋರಾಟ ಮಾಡುತ್ತಿದ್ದಾರೆ. ಆಂಧ್ರದ ಪ್ರಸ್ತುತ ಪರಿಸ್ಥಿತಿಯನ್ನು ಟೀಕಿಸುವ ಅನೇಕ ದೃಶ್ಯಗಳು 'ಅಖಂಡ' ಸಿನಿಮಾದಲ್ಲಿವೆ'' ಎಂದಿದ್ದಾರೆ ಬಾಲಕೃಷ್ಣ.

    ''ಎನ್‌ಟಿಆರ್ ಆಶಯಕ್ಕೆ ವಿರುದ್ಧವಾದ ಕಾರ್ಯ ನಡೆಯುತ್ತಿವೆ''

    ''ಎನ್‌ಟಿಆರ್ ಆಶಯಕ್ಕೆ ವಿರುದ್ಧವಾದ ಕಾರ್ಯ ನಡೆಯುತ್ತಿವೆ''

    ''ಜಾತಿ, ಧರ್ಮ, ಪ್ರಾಂತ್ಯಗಳ ಭೇದಗಳು ಇಲ್ಲದೆ ಇಡೀ ತೆಲುಗು ಜನರು ಒಗ್ಗಟ್ಟಾಗಿರಬೇಕು ಎಂಬುದು ಸ್ವರ್ಗೀಯ ಎನ್‌ಟಿಆರ್ ಆಸೆಯಾಗಿತ್ತು. ಹಾಗಾಗಿಯೇ ತೆಲುಗು ರಾಜ್ಯ ನನ್ನದು, ಆಂಧ್ರ ನನ್ನದು, ತೆಲಂಗಾಣ, ರಾಯಲಸೀಮ ನನ್ನದು ಎಂದು ಸಿನಿಮಾಗಳ ಮೂಲಕ ಸ್ಪೂರ್ತಿ ತುಂಬುವ ಯತ್ನವನ್ನು ಎನ್‌ಟಿಆರ್ ಮಾಡಿದ್ದರು. ಆದರೆ ಎನ್‌ಟಿಆರ್ ಅವರ ಆಶಯದ ವಿರುದ್ಧವಾಗಿ ಕೆಲವು ಘಟನೆಗಳು ಆಂಧ್ರದಲ್ಲಿ ನಡೆಯುತ್ತಿದೆ'' ಎಂದು ಬಾಲಕೃಷ್ಣ ಹೇಳಿದ್ದಾರೆ.

    English summary
    Actor, politician Nandamuri Balakrishna condemn Andhra Pradesh's government. He said There is attacks on going on Temples in Andhra Pradesh.
    Thursday, January 13, 2022, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X