Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವೀರ ಸಿಂಹ ರೆಡ್ಡಿ' ಸಿನಿಮಾ ಮೂಲಕ ಸಿಎಂ ಜಗನ್‌ಗೆ ಎಚ್ಚರಿಕೆ ಕೊಟ್ಟ ಬಾಲಯ್ಯ!
ಆಂಧ್ರದಲ್ಲಿ ಸಿನಿಮಾ ರಾಜಕೀಯ, ರಾಜಕೀಯದಲ್ಲಿ ಸಿನಿಮಾ ಎಲ್ಲವೂ ಮಾಮೂಲೆ. ಸಿನಿಮಾ ಹಾಗೂ ರಾಜಕೀಯ ಎರಡರ ಮೇಲೂ ಕೆಲವು ಕುಟುಂಬಗಳು ಹಿಡಿತ ಸಾಧಿಸಿರುವುದರಿಂದ ರಾಜಕೀಯ ಮಾಡಲು ಸಿನಿಮಾವನ್ನು ಬಳಸಿಕೊಳ್ಳುವುದು, ಸಿನಿಮಾಕ್ಕಾಗಿ ರಾಜಕೀಯವನ್ನು ಬಳಸಿಕೊಳ್ಳುವುದು ಸಾಮಾನ್ಯ.
ಸ್ವತಃ ರಾಜಕಾರಣಿಯು, ಟಿಡಿಪಿ ಪಕ್ಷದ ಶಾಸಕರೂ ಆಗಿರುವ ನಂದಮೂರಿ ಬಾಲಕೃಷ್ಣ ನಟಿಸಿರುವ 'ವೀರ ಸಿಂಹ ರೆಡ್ಡಿ' ಸಿನಿಮಾ ನಿನ್ನೆಯಷ್ಟೆ ತೆರೆಗೆ ಬಂದಿದ್ದು, ಆಂಧ್ರ ಸರ್ಕಾರವನ್ನು, ಸಿಎಂ ಜಗನ್ ಅನ್ನು ಅವರ ನೀತಿಗಳನ್ನು ಸಿನಿಮಾ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ಜಗನ್‌ರ ಕೆಲವು ಕಾರ್ಯಗಳನ್ನು ಟೀಕಿಸಿರುವ ಜೊತೆಗೆ ಕೆಲವು ಎಚ್ಚರಿಕೆಗಳನ್ನು ಸಹ ಬಾಲಯ್ಯ ನೀಡಿದ್ದಾರೆ. ಈ ಸಂಭಾಷಣೆಗಳು ಅಭಿಮಾನಿಗಳಿಗೆ ಬಹಳ ಇಷ್ಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಬಾಲಯ್ಯನ ಸಿನಿಮಾದಲ್ಲಿ ರಾಜಕೀಯ ಡೈಲಾಗ್
ಆಂಧ್ರ ವಿಶ್ವವಿದ್ಯಾಲಯಕ್ಕೆ ಬಾಲಕೃಷ್ಣರ ತಂದೆ ಎನ್‌ಟಿಆರ್ ಅವರ ಹೆಸರನ್ನು ಬದಲಾಯಿಸಿ ಬೇರೆ ಹೆಸರು ಇಡಲಾಗಿತ್ತು. ಇದು ಮಾತ್ರವೇ ಅಲ್ಲದೆ ಹಲವು ಕಡೆಗಳಲ್ಲಿ ಇದ್ದ ಹೆಸರನ್ನು ಬದಲಾಯಿಸಿ ಜಗನ್‌ರ ತಂದೆಯ ಹೆಸರು ಇಡಲಾಯ್ತು. ಇದನ್ನು ಬಾಲಕೃಷ್ಣರ ಟಿಡಿಪಿ ಪಕ್ಷ ವಿರೋಧಿಸಿತ್ತು. ಈ ಕುರಿತಾಗಿ 'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ಸಂಭಾಷಣೆಯೊಂದಿದ್ದು, ''ನೀನು ಸಹಿ ಹಾಕಿದರೆ ತಾತ್ಕಾಲಿಕವಾಗಿ ಬೋರ್ಡ್ ಮೇಲಿನ ಹೆಸರು ಬದಲಾಗಬಹುದೇನೋ ಆದರೆ ಇತಿಹಾಸ ಸೃಷ್ಟಿಸಿದವರ ಹೆಸರು ಎಂದಿಗೂ ಹಾಗೆಯೇ ಇರುತ್ತದೆ. ಅದನ್ನು ಬದಲಾಯಿಸಲು ಯಾರಿಂದಲೂ ಆಗಲ್ಲ'' ಎಂಬ ಮಾಸ್ ಸಂಭಾಷಣೆ ಇದೆ.

ಸರ್ಕಾರದ ವಿರುದ್ಧ ಬಾಲಯ್ಯ ಸಂಭಾಷಣೆ
ಇದರ ಬಳಿಕ ಸೀನ್ ಒಂದರಲ್ಲಿ ಗೃಹ ಸಚಿವ ಬಾಲಕೃಷ್ಣರನ್ನು ಭೇಟಿಯಾಗಲು ಬರುತ್ತಾರೆ. ''ನಾವು ಅಧಿಕಾರದಲ್ಲಿದ್ದೀವಿ'' ಎನ್ನುತ್ತಾನೆ ಗೃಹ ಮಂತ್ರಿ, ಅದಕ್ಕೆ ಬಾಲಯ್ಯನ ಪಾತ್ರ 'ಕಂಗ್ರಾಜ್ಯುಲೇಷನ್' ಎನ್ನುತ್ತಾರೆ. 'ನಾನು ಹೋಮ್ ಮಿನಿಸ್ಟರ್' ಎಂದಾಗ 'ಗ್ಲಾಡ್ ಟು ಮೀಟ್ ಯೂ' ಎಂದು ಉಪೇಕ್ಷೆಯಿಂದ ಹೇಳುತ್ತಾರೆ ಬಾಲಯ್ಯ. ಬಳಿಕ ಇಲ್ಲಿ ಏನು ಮಾಡಬೇಕು ಹೇಗೆ ಮಾಡಬೇಕು ಎಂದು ನನಗೆ ಹೇಳಲು ನೀನ್ಯಾರು? ನೀನು ಪಾಸ್ ಮಾಡುವ ಜೀಓ ಗೌರ್ನಮೆಂಟ್ ಆರ್ಡರ್, ನಾನು ಪಾಸ್ ಮಾಡುವ ಜೀಒ ಗಾಡ್ಸ್ ಆರ್ಡರ್ ಎಂದು ಅಬ್ಬರದ ಮಾಸ್ ಡೈಲಾಗ್ ಹೊಡೆದು ಸರ್ಕಾರವನ್ನು ಅಣಕಿಸಿದ್ದಾರೆ ಬಾಲಯ್ಯ.

ಹೋಂ ಮಿನಿಸ್ಟರ್ v/s ಬಾಲಯ್ಯ
ಬಳಿಕ ಅದೇ ದೃಶ್ಯದಲ್ಲಿ ಹೋಮ್ ಮಿನಿಸ್ಟರ್ ಪಾತ್ರಧಾರಿ, ''ನೀವು ಹೀಗೆ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ತಪ್ಪು'' ಎಂದಾಗ, ಜೋರಾಗಿ ನಗುವ ಬಾಲಯ್ಯ, ಅಭಿವೃದ್ಧಿಯಾ? ಪ್ರಗತಿ ಸಾಧಿಸುವುದು ಅಭಿವೃದ್ಧಿ, ಪ್ರಜೆಗಳನ್ನು ಬಾಧಿಸುವುದು ಅಭಿವೃದ್ಧಿಯಲ್ಲ. ಸಂಬಳಗಳನ್ನು ನೀಡುವುದು ಅಭಿವೃದ್ಧಿ, ಭಿಕ್ಷೆ ಹಾಕುವುದು ಅಭಿವೃದ್ಧಿ ಅಲ್ಲ. ಕೆಲಸ ಮಾಡುವುದು ಅಭಿವೃದ್ಧಿ, ಆಗುತ್ತಿರುವ ಕೆಲಸವನ್ನು ನಿಲ್ಲಿಸುವುದು ಅಭಿವೃದ್ಧಿ ಅಲ್ಲ. ಕಟ್ಟಡಗಳನ್ನು ನಿರ್ಮಿಸುವುದು ಅಭಿವೃದ್ಧಿ, ಇದ್ದ ಮನೆಗಳನ್ನು ಬೀಳಿಸುವುದು ಅಭಿವೃದ್ಧಿ ಅಲ್ಲ'' ಎಂದು ಡೈಲಾಗ್ ಹೊಡೆಯುತ್ತಾರೆ ಬಾಲಯ್ಯ. ಈ ಇಡೀಯ ಡೈಲಾಗ್ ನೇರವಾಗಿ ಜಗನ್ ಸರ್ಕಾರವನ್ನು ಟೀಕಿಸುವ ಮಾದರಿಯಲ್ಲಿಯೇ ಇದೆ.

ಇಂಥಹಾ ಡೈಲಾಗ್‌ಗಳು ಹಲವು ಇವೆ
ಜಗನ್ ಸರ್ಕಾರವು, ಅಮರಾವತಿ ಕಾಮಗಾರಿಯನ್ನು ನಿಲ್ಲಿಸಿದ್ದರ ಬಗ್ಗೆ, ರಸ್ತೆ ನಿರ್ಮಾಣದ ಹೆಸರಿನಲ್ಲಿ ಇಡೀಯ ಗ್ರಾಮದ ಎಲ್ಲ ಮನೆಗಳನ್ನು ಬೀಳಿಸಿದ್ದರ ಬಗ್ಗೆ, ಎನ್‌ಟಿಆರ್ ಪ್ರತಿಮೆಗಳನ್ನು ಒಡೆದು ಅದರ ಬದಲು ರಾಜಶೇಖರ ರೆಡ್ಡಿ ಪ್ರತಿಮೆಗಳನ್ನು ನಿರ್ಮಿಸಿರುವ ಬಗ್ಗೆ, ಬಸ್ ಚಾಲಕರಿಗೆ ಸೂಕ್ತ ಸಂಬಳ ನೀಡದೇ ಇರುವ ಬಗ್ಗೆ ಬಾಲಯ್ಯರೂ ಶಾಸಕಾಗಿರುವ ಟಿಡಿಪಿ ಪಕ್ಷ ಪ್ರತಿಭಟನೆಗಳನ್ನು, ಟೀಕೆಗಳನ್ನು ಮಾಡಿದೆ. ಇದೀಗ ಬಾಲಯ್ಯ ಇದೇ ವಿಷಯಗಳನ್ನು ಸಿನಿಮಾ ಸಂಭಾಷಣೆ ಮೂಲಕ ಹೇಳಿ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. ಹೀಗೆ ಸಿನಿಮಾ ಮೂಲಕ ರಾಜಕೀಯ ಹೇಳಿಕೆಗಳನ್ನು ಪಾಸ್ ಮಾಡುತ್ತಿರುವುದು ಈ ಮೊದಲೂ ಸಹ ಹಲವು ಬಾರಿ ಸಿನಿಮಾ ಡೈಲಾಗ್‌ಗಳ ಮೂಲಕ ರಾಜಕೀಯ ಹೇಳಿಕೆಗಳನ್ನು ಬಾಲಯ್ಯ ಪಾಸ್ ಮಾಡಿದ್ದಾರೆ.