Veera Simha Reddy Twitter Review : ಬಾಲಯ್ಯನ 'ವೀರ ಸಿಂಹ ರೆಡ್ಡಿ' ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದೇನು?

ನಟಸಿಂಹ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಂದಮೂರಿ ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾ ಇಂದು ತೆರೆಗೆ ಬಂದಿದೆ. ಆಂಧ್ರ-ತೆಲಂಗಾಣ ಮಾತ್ರವೇ ಅಲ್ಲದೆ ಕರ್ನಾಟಕ, ತಮಿಳುನಾಡುಗಳಲ್ಲಿಯೂ ಬೆಳ್ಳಂಬೆಳಗ್ಗೆಯೇ ಸಿನಿಮಾ ಪ್ರದರ್ಶನಗೊಂಡಿದೆ.

ಈಗಾಗಲೇ ಸಾವಿರಾರು ಮಂದಿ 'ವೀರ ಸಿಂಹ ರೆಡ್ಡಿ' ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ಅನ್ನು ಹಲವು ರಾಜ್ಯಗಳಲ್ಲಿ ನೋಡಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದಾಖಲಿಸಿದ್ದಾರೆ.

ಬಾಲಕೃಷ್ಣ, ಶ್ರುತಿ ಹಾಸನ್ ಹಾಗೂ ಕನ್ನಡದ ನಟ ದುನಿಯಾ ವಿಜಯ್ ನಟಿಸಿರುವ 'ವೀರ ಸಿಂಹ ರೆಡ್ಡಿ' ಸಿನಿಮಾ ಹೇಗಿದೆ? ಸಿನಿಮಾದ ಪ್ಲಸ್ ಏನು ಮೈನಸ್ ಏನು? ಸಿನಿಮಾದ ಯಾವ ಭಾಗ ಜನರಿಗೆ ಇಷ್ಟವಾಗಿದೆ. ದುನಿಯಾ ವಿಜಯ್ ಬಗ್ಗೆ ತೆಲುಗು ಜನ ಏನೆಂದಿದ್ದಾರೆ? ಇನ್ನೂ ಇತ್ಯಾದಿಗಳು ಇಲ್ಲಿವೆ.

ಮಾಸ್‌ಗೆ ದೇವರು 'ವೀರ ಸಿಂಹ ರೆಡ್ಡಿ'

ಮಾಸ್‌ಗೆ ದೇವರು 'ವೀರ ಸಿಂಹ ರೆಡ್ಡಿ'

'ಮಾಸ್‌ಗೆ ದೇವರು 'ವೀರ ಸಿಂಹ ರೆಡ್ಡಿ'. ಡೈಲಾಗ್‌ಗಳು, ಆಕ್ಷನ್ ದೃಶ್ಯಗಳು, ತಮನ್ನ ಕೊಟ್ಟಿರುವ ಹಿನ್ನೆಲೆ ಸಂಗೀತ. ಸಿನಿಮಾದ ಕತೆಯನ್ನು ನಿರ್ದೇಶಕ ಗೋಪಿಚಂದ್ ತೆರೆಗೆ ಅಳವಡಿಸಿರುವ ರೀತಿ. ಬಾಲಕೃಷ್ಣ ಹಾಗೂ ಶ್ರುತಿ ಹಾಸನ್ ಹಾಡುಗಳು ಹಾಗೂ ಡ್ಯಾನ್ಸ್, ಫ್ಯಾಮಿಲಿ ಡ್ರಾಮಾ ಹಾಗೂ ಎಮೋಷನ್‌ಗಳು ಎಲ್ಲವೂ ಸೂಪರ್ ಹಿಟ್. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವುದು ಖಾಯಂ ಎಂದಿದ್ದಾರೆ ತೆಲುಗು ಚಿತ್ರರಂಗದ ವಿಶ್ಲೇಷಕ ವಂಶಿ ಕಾಕ.

ಅತ್ಯಂತ ಕೆಟ್ಟ ಸಿನಿಮಾ

ಅತ್ಯಂತ ಕೆಟ್ಟ ಸಿನಿಮಾ

ಟಾಲಿವುಡ್ ಬಾಕ್ಸ್ ಆಫೀಸ್ ಎಂಬ ಟ್ವಿಟ್ಟರ್ ಖಾತೆ, 'ವೀರ ಸಿಂಹ ರೆಡ್ಡಿ' ಸಿನಿಮಾ ಬಹಳ ಕೆಟ್ಟದಾಗಿದೆ ಎಂದು ಟ್ವಿಟ್ಟರ್‌ ರಿವ್ಯೂ ನೀಡಿದ್ದಾರೆ. ತೀರಾ ಸಾಮಾನ್ಯ ಕತೆ. ಬಾಲಕೃಷ್ಣರ ಈ ಹಿಂದಿನ ಸಿನಿಮಾಗಳಾದ 'ಲೆಜೆಂಡ್' ಹಾಗೂ 'ಸಿಂಹ' ಸಿನಿಮಾವನ್ನು ಸೇರಿಸಿ ಈ ಸಿನಿಮಾ ಮಾಡಿದ್ದಾರೆ. ಸಿನಿಮಾದ ಮೊದಲಾರ್ಧ ಪರವಾಗಿಲ್ಲ ಆದರೆ ಎರಡನೇ ಅರ್ಧ ಮಹಾ ಬೋರಿಂಗ್. ಹಾಡುಗಳು ಅಷ್ಟೇನೂ ಚೆನ್ನಾಗಿಲ್ಲ ಆದರೆ ತಮನ್‌ ಹಿನ್ನೆಲೆ ಸಂಗೀತ ಚೆನ್ನಾಗಿದೆ'' ಎಂದಿದೆ.

ಬಾಲಯ್ಯ ಮ್ಯಾಜಿಕ್ ಮುಂದುವರೆದಿದೆ

ಬಾಲಯ್ಯ ಮ್ಯಾಜಿಕ್ ಮುಂದುವರೆದಿದೆ

ಬಾಲಯ್ಯ ಮ್ಯಾಜಿಕ್ ಮುಂದುವರೆದಿದೆ. ಸಿನಿಮಾದಲ್ಲಿ ಅದ್ಭುತವಾದ ಮಾಸ್‌ ದೃಶ್ಯಗಳನ್ನು ಇರಿಸಲಾಗಿದೆ ಅವು ಚೆನ್ನಾಗಿ ವರ್ಕೌಟ್ ಆಗಿವೆ. ಪಂಚೆಯಲ್ಲಿ ಬಾಲಯ್ಯನನ್ನು ನೋಡುವುದು ಅಭಿಮಾನಿಗಳಿಗೆ ಖುಷಿ. ಡೈಲಾಗ್‌ಗಳು ಅದ್ಭುತವಾಗಿದೆ. ಮೊದಲಾರ್ಧ ಹೈ ಮಾಸ್‌ ದೃಶ್ಯಗಳಿದ್ದರೆ, ಸಿನಿಮಾದ ದ್ವಿತೀಯಾರ್ಧ ಸೆಂಟಿಮೆಂಟ್ ಹೆಚ್ಚಿಗಿದೆ. ತಮನ್ ಹಿನ್ನೆಲೆ ಸಂಗೀತ ಸೂಪರ್. ಸಂಕ್ರಾಂತಿಗೆ ಪಕ್ಕಾ ಮಾಸ್ ಮತ್ತು ಕೌಟುಂಬಿಕ ಸಿನಿಮಾ. ಆದರೆ ಅದೇ ಮಾಮೂಲಿ ಫ್ಯಾಕ್ಷನ್ ಸ್ಟೋರಿ ಎಂಬ ಭಾವನೆಯೂ ಮೂಡುತ್ತದೆ'' ಎಂದಿರುವುದು ಭೀಷ್ಮಾ ಟಾಕ್ಸ್ ಹೆಸರಿನ ಟ್ವಿಟ್ಟರ್ ಖಾತೆ.

ಸಿನಿಮಾ ಪಕ್ಕಾ ಹಿಟ್

ಸಿನಿಮಾ ಪಕ್ಕಾ ಹಿಟ್

'ವೀರ ಸಿಂಹ ರೆಡ್ಡಿ' ಸಿನಿಮಾದ ಮೊದಲಾರ್ಧ ಮಾಸ್ ಸೀನ್‌ಗಳಿಂದ ಅಭಿಮಾನಿಗಳಿಗೆ ಹುಚ್ಚೆಬ್ಬಿಸುವಂತಿದೆ. ಬಾಲಕೃಷ್ಣ ಮೇಕ್‌ಓವರ್, ಅವರ ಸ್ಟೈಲ್‌ಗಳೆಲ್ಲವೂ ಸೂಪರ್. ಆಕ್ಷನ್ ದೃಶ್ಯಗಳು ಸೂಪರ್. ಬಾಲಕೃಷ್ಣ ಪರ್ಫಾರ್ಮೆನ್ಸು ಸಹ ಅದ್ಭುತ. ಮೊದಲಾರ್ಧ ಅದ್ಭುತ ಎಮೋಷನಲ್ ಬ್ಲಾಕ್ ಜೊತೆ ಮುಗಿಯುತ್ತದೆ. ಮೊದಲಾರ್ಧ ಮುಗಿಯುವುದರೊಳಗೆ ಸಿನಿಮಾ ಪಕ್ಕಾ ಹಿಟ್ ಎಂಬುದು ಅರಿವಾಗಿ ಹೋಗುತ್ತದೆ'' ಎಂದು ವಂಶಿ ಶೇಖರ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಶ್ರುತಿ ಹಾಸನ್‌ಗೆ ಅವಕಾಶ ಕಡಿಮೆ

ಶ್ರುತಿ ಹಾಸನ್‌ಗೆ ಅವಕಾಶ ಕಡಿಮೆ

ಮೊದಲಾರ್ಧ ಅದ್ಭುತವಾಗಿದೆ. ಸಖತ್ ಮಾಸ್ ಎಲಿಮೆಂಟ್‌ಗಳು ಸಿನಿಮಾದ ಮೊದಲಾರ್ಧದಲ್ಲಿವೆ. ಸೆಕೆಂಡ್ ಹಾಫ್ ಚೆನ್ನಾಗಿದೆ. ತುಸು ಭಾವುಕವಾಗಿದೆ. ಸಿನಿಮಾದ ನೆಗೆಟಿವ್‌ಗಳೆಂದರೆ ಸಿನಿಮಾದಲ್ಲಿ ಕೊನೆಯ ಹಾಡು ಬೇಕಾಗಿರಲಿಲ್ಲ. ನಾಯಕಿ ಶ್ರುತಿ ಹಾಸನ್‌ಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ದೊರೆತಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಬಾಲಯ್ಯ ಅಭಿಮಾನಿಗಳಿಗೆ ಹಬ್ಬ. ಸಿನಿಮಾಕ್ಕೆ 5 ರಲ್ಲಿ 3.5 ಸ್ಟಾರ್ಸ್ ಕೊಡಬಹುದು ಎಂದು ಟ್ವೀಟ್ ಮಾಡಿದ್ದಾರೆ ತರುಣ್ ಪ್ರಭಾಸ್.

More from Filmibeat

English summary
Nandamuri Balakrishna starrer Veera Simha Reddy Telugu movie twitter review in Kannada. Mixed opinion about the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X