For Quick Alerts
  ALLOW NOTIFICATIONS  
  For Daily Alerts

  ತೆಲುಗು ಸ್ಟಾರ್ ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

  |

  ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಕೇರ್ ಹೆಸರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಬಾಲಕೃಷ್ಣ ಭುಜದ ಸಮಸ್ಯೆಯಿಂದ ಬಳಲುತ್ತಿದ್ದು ಅದರ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ವಿನಃ ಬೇರೇನು ಸಮಸ್ಯೆ ಇಲ್ಲವೆಂದು ಆಸ್ಪತ್ರೆ ಹೇಳಿದೆ.

  ಬಾಲಕೃಷ್ಣ ಅವರಿಗೆ ಬಲ ಭುಜದಲ್ಲಿ ವಿಪರೀತ ನೋವು ಕಾಣಿಸಿಕೊಂಡ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಭುಜದ ಮಾಂಸಖಂಡಗಳಲ್ಲಿ ಸಮಸ್ಯೆ ಇದ್ದುದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಬಾಲಕೃಷ್ಣ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

  ಬಹಳ ಹಿಂದೊಮ್ಮೆ ನಟ ಬಾಲಕೃಷ್ಣಗೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ಪೆಟ್ಟಾಗಿತ್ತು, ಅದು ಕಳೆದ ಆರು ತಿಂಗಳಿಂದ ನೋವು ಕೊಡುತ್ತಿತ್ತು, ಇದೀಗ ಭುಜದ ನೋವು ತೀವ್ರವಾದ ಹಿನ್ನೆಲೆಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಅವರು ನಾಳೆ ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ.

  ನಟ ಬಾಲಕೃಷ್ಣ ಅಕ್ಟೋಬರ್ 30 ರಂದು ಬೆಂಗಳೂರಿಗೆ ಬಂದಿದ್ದರು. ರಾಜ್‌ಕುಮಾರ್ ಕುಟುಂಬದೊಂದಿಗೆ ಅತ್ಯಾಪ್ತ ಬಂಧವನ್ನು ಬಾಲಕೃಷ್ಣ ಹೊಂದಿದ್ದು, ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು. ಪುನೀತ್ ಪಾರ್ಥಿವ ಶರೀರ ನೋಡಿ ಭಾವುಕರಾದ ಬಾಲಕೃಷ್ಣ ಕಣ್ಣೀರು ಸುರಿಸಿದ್ದರು. ಶಿವರಾಜ್ ಕುಮಾರ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದರು.

  ''ನನ್ನ ಸಹೋದರ, ಸ್ನೇಹಿತ ಇಲ್ಲವೆಂದು ನೋವಾಗುತ್ತಿದೆ. ನಾವು ಒಂದೇ ತಾಯಿ ಮಕ್ಕಳಲ್ಲದಿದ್ದರೂ ಸೋದರರಂತಿದ್ದೆವು. ದೇವರು ಏಕೆ ಇಂತಹ ಅನ್ಯಾಯ ಮಾಡಿದ ಎಂದು ಬೇಸರವಾಗುತ್ತದೆ. ಪುನೀತ್ ಕಲಾವಿದನಾಗಿ ಅಭಿಮಾನಿಗಳನ್ನು ರಂಜಿಸಿದ್ದರು. ನಟನೆ ಜತೆಗೆ ಸಮಾಜ ಸೇವೆಯನ್ನೂ ಮಾಡಿದ್ದಾರೆ. ಅವರು ನೇತ್ರ ದಾನ ಸಹ ಮಾಡಿದ್ದಾರೆ. ನಾನು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುತ್ತಿದ್ದರು. ಲೇಪಾಕ್ಷಿಗೆ ಹಲವು ಬಾರಿ ಶಿವಣ್ಣ, ಪುನೀತ್ ಬಂದಿದ್ದರು. ನಟ ಪುನೀತ್ ಇಲ್ಲ ಅನ್ನೋದೇ ಅಚ್ಚರಿಯಾಗುತ್ತಿದೆ. ನಟ ಪುನೀತ್ ನಮ್ಮ ಜೊತೆ ಇರದೇ ಇರಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾರೆ. ನಟ ಪುನೀತ್ ಇಲ್ಲದಿರುವುದು ನನಗೆ ವೈಯಕ್ತಿಕವಾಗಿ ನಷ್ಟ" ಎಂದು ಬಾಲಕೃಷ್ಣ ಕಂಬನಿ ಮಿಡಿದಿದ್ದರು.

  61 ವರ್ಷ ವಯಸ್ಸಿನ ಬಾಲಕೃಷ್ಣ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ 'ಅಖಂಡ' ಹೆಸರಿನ ಸಿನಿಮಾವನ್ನು ಪೂರ್ತಿಗೊಳಿಸಿದ್ದು ಬೊಯಾಪಾಟಿ ಶ್ರೀನು ನಿರ್ದೇಶನದ ಈ ಸಿನಿಮಾ ನವೆಂಬರ್ 17 ರಂದು ಬಿಡುಗಡೆ ಆಗಲಿದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಬಾಲಕೃಷ್ಣ ಟಾಕ್ ಶೋ ಒಂದನ್ನು ನಡೆಸಿಕೊಡುತ್ತಿದ್ದಾರೆ. ಟಾಕ್ ಶೋ ಒಟಿಟಿ ಫ್ಲ್ಯಾಟ್‌ಫಾರ್ಮ್ ಆದ 'ಆಹಾ'ನಲ್ಲಿ ಪ್ರಸಾರವಾಗಲಿದೆ. 'ಅಖಂಡ' ಸೇರಿ ಬಾಲಕೃಷ್ಣ 106 ಸಿನಿಮಾಗಳಲ್ಲಿ ನಟಿಸಿದ್ದಾರೆ. 107ನೇ ಸಿನಿಮಾಕ್ಕೆ ಸಹಿ ಹಾಕಿದ್ದು ಆ ಸಿನಿಮಾವನ್ನು ಗೋಪಿಚಂದ್ ಮಾಲಿನೇನಿ ನಿರ್ದೇಶನ ಮಾಡಲಿದ್ದಾರೆ.

  English summary
  Actor Nandamuri Balakrishna under gone shoulder surgery in Care hospital Hyderabad. He was suffering from shoulder surgery from last few months.
  Wednesday, November 3, 2021, 9:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X