ನಾನಿ 30 ಚಿತ್ರದ ಟೈಟಲ್ ರಿವೀಲ್, ಟೀಸರ್ ಬಿಡುಗಡೆ; ನಾನಿಗೆ 'ಹಾಯ್ ಅಪ್ಪ' ಎಂದ ಮೃಣಾಲ್ ಠಾಕೂರ್!

ಸಾಲು ಸಾಲು ಸಾಧಾರಣ ಹಾಗೂ ಫ್ಲಾಪ್ ಚಿತ್ರಗಳನ್ನು ನೀಡಿ ಬಾಕ್ಸ್ ಆಫೀಸ್ ಪೈಪೋಟಿಯಲ್ಲಿ ಹಿಂದೆ ಬಿದ್ದಿದ್ದ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಈ ವರ್ಷ ದಸರಾ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದಾರೆ.

ತಮ್ಮ ಸಿನಿ ಕೆರಿಯರ್‌ನಲ್ಲೇ ಇದೇ ಮೊದಲ ಬಾರಿಗೆ ನೂರು ಕೋಟಿ ಕ್ಲಬ್ ಚಿತ್ರವನ್ನು ನೀಡಿದ ನಾನಿ ತಾನೂ ಸಹ ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಸಿದರು. ಈ ಹಿಂದಿನ ಚಿತ್ರಗಳಲ್ಲಿ ಕ್ಲಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ನಾನಿ ದಸರಾ ಚಿತ್ರದಲ್ಲಿ ಪಕ್ಕಾ ಮಾಸ್ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡು ಮಿಂಚಿದರು.

Nani 30 titled as Hi Nanna and teaser released

ನಾನಿ ಮಾಸ್ ಲುಕ್‌ಗೆ ಸಿನಿ ರಸಿಕರು ಮಾರು ಹೋಗಿದ್ದರು. ಹೀಗೆ ದಸರಾ ಮೂಲಕ ಕಮ್‌ಬ್ಯಾಕ್ ಮಾಡಿದ ನ್ಯಾಚುರಲ್ ಸ್ಟಾರ್ ನಾನಿ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಮೂಡಿತ್ತು.

ಈ ಪ್ರಶ್ನೆಗೆ ಉತ್ತರಿಸಿದ್ದ ನಾನಿ ಮತ್ತೆ ಕ್ಲಾಸ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ರು. ತಂದೆ - ಮಗಳು ಒಟ್ಟಿಗೆ ಕುಳಿತಿದ್ದ ಪೋಸ್ಟರ್‌ವೊಂದನ್ನು ಹಂಚಿಕೊಳ್ಳುವ ಮೂಲಕ ತನ್ನ ಮುಂದಿನ ಚಿತ್ರ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸುವಂತಹ ಎಮೋಷನಲ್ ಎಂಟರ್‌ಟೈನರ್ ಆಗಿರಲಿದೆ ಎಂಬುದನ್ನು ನಾನಿ ತಿಳಿಸಿದ್ದರು. ಈ ಚಿತ್ರಕ್ಕೆ ಶೀರ್ಷಿಕೆ ಏನೆಂಬುದನ್ನು ಆರಂಭದಲ್ಲಿ ರಿವೀಲ್ ಮಾಡಿರಲಿಲ್ಲ.

ಆದರೆ ಇದೀಗ ಇಂದು ( ಜುಲೈ 13 ) ಚಿತ್ರಕ್ಕೆ ಶೀರ್ಷಿಕೆ ಏನು ಎಂಬುದನ್ನು ಚಿತ್ರತಂಡ ಬಿಚ್ಚಿಟ್ಟಿದೆ. ಹೌದು, ನಾನಿ 30 ಚಿತ್ರಕ್ಕೆ 'ಹಾಯ್ ನಾನ್ನ' ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಹಾಯ್ ನಾನ್ನ ಎಂಬ ತೆಲುಗು ಸಾಲಿನ ಅರ್ಥ 'ಹಾಯ್ ಅಪ್ಪ' ಎಂಬುದಾಗಿದೆ.

ಟೈಟಲ್ ಸಹ ಅಪ್ಪ ಹಾಗೂ ಮಗಳ ನಡುವಿನ ಬಾಂಧವ್ಯದ ಕಥೆಯನ್ನು ಹೇಳುವ ಚಿತ್ರವಿದು ಎಂಬ ಮಾಹಿತಿ ನೀಡುತ್ತಿದ್ದು, ಚಿತ್ರಕ್ಕೆ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಸೀತಾ ರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ನಟಿಸಿದ್ದು, ಇಂದು ಚಿತ್ರದ ಪುಟ್ಟ ಟೀಸರ್ ಸಹ ಬಿಡುಗಡೆಗೊಂಡಿದೆ.

ಮೊದಲಿಗೆ ನಾಯಕನ ಮಗಳು ತನ್ನ ಸ್ನೇಹಿತೆಯನ್ನು ಪರಿಚಯಿಸಿಕೊಡುವ ದೃಶ್ಯದೊಂದಿಗೆ ಈ ಟೀಸರ್ ಆರಂಭಗೊಂಡಿದ್ದು, ಆ ಹುಡುಗಿ ನನ್ನ ಸ್ನೇಹಿತೆ ಯಶ್ನಾ ಎಂದು ಮೃಣಾಲ್ ಠಾಕೂರ್ ಅನ್ನು ಪರಿಚಯಿಸಿದೆ. ಬಳಿಕ ನಾನ್ನ ಎಂದು ನಾಯಕ ನಾನಿಯನ್ನು ಪರಿಚಯಿಸಲಾಗಿದೆ.

ಹೀಗೆ ಮದುವೆಯಾಗಿರುವ ನಾಯಕ ಒಂದೊಡೆ ಹಾಗೂ ಆತನ ಮಗಳಿಗೆ ಪರಿಚಯವಿರುವ ನಾಯಕಿ ಮತ್ತೊಂದೆಡೆ. ಹಾಗಾದರೆ ಈ ಚಿತ್ರದ ಕಥೆ ಯಾವ ರೀತಿ ಇರಬಹುದು ಎಂದು ಸಿನಿ ರಸಿಕರು ಲೆಕ್ಕಾಚಾರ ಹಾಕಲು ಶುರು ಮಾಡುತ್ತಿದ್ದಂತೆ, ಟೀಸರ್‌ನಲ್ಲಿ ನಾಯಕ ಹಾಗೂ ನಾಯಕಿ ಪರಸ್ಪರ ಭೇಟಿಯಾಗುವ ದೃಶ್ಯವಿದೆ. ನಾಯಕಿ ನಾಯಕನ ಕೈಕುಲುಕಿ 'ಹಾಯ್ ನಾನ್ನ' ( ಹಾಯ್ ಅಪ್ಪ) ಎಂದು ಪರಿಚಯ ಮಾಡಿಕೊಳ್ತಾಳೆ. ಇಷ್ಟಕ್ಕೆ ಟೀಸರ್ ಮುಗಿದಿದ್ದು, ಚಿತ್ರ ಡಿಸೆಂಬರ್ 21ಕ್ಕೆ ತೆರೆಗೆ ಬರಲಿದೆ ಎಂದು ತೋರಿಸಲಾಗಿದೆ.

More from Filmibeat

English summary
Nani 30 titled as Hi Nanna and teaser released. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X