For Quick Alerts
  ALLOW NOTIFICATIONS  
  For Daily Alerts

  ನಾನಿ 'ಅಂಟೆ ಸುಂದರಾನಿಕಿ' ಟಿವಿ ಪ್ರೀಮಿಯರ್ ಟಿಆರ್‌ಪಿ ನೋಡಿದ್ರೆ ನಿಮಗೂ ಶಾಕ್ ಆಗುತ್ತೆ!

  |

  ನ್ಯಾಚುರಲ್ ಸ್ಟಾರ್ ನಾನಿ ಹಾಗೂ ನಜ್ರಿಯಾ ನಜೀಮ್ ಅಭಿನಯದ 'ಅಂಟೆ ಸುಂದರಾನಿಕಿ' ಇದೇ ವರ್ಷದ ಜೂನ್ 10ರಂದು ತೆರೆಕಂಡಿತ್ತು. 'ಮೆಂಟಲ್ ಮದಿಲೊ' ಹಾಗೂ 'ಬ್ರೊಚೆವರೆವರುರಾ' ಎಂಬ ಹಿಟ್ ಹಾಗೂ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದ್ದ ವಿವೇಕ್ ಆತ್ರೇಯಾ ನಿರ್ದೇಶನ ಈ ಚಿತ್ರಕ್ಕಿತ್ತು.

  ಹೀಗೆ ಒಳ್ಳೆಯ ನಟ, ನಟಿ ಮತ್ತು ನಿರ್ದೇಶಕನ ಕಾಂಬಿನೇಷನ್ ಇದ್ದ ಈ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲಿದೆ ಎಂದೇ ಲೆಕ್ಕಾಚಾರ ಹಾಕಿದ್ದರು ಬಾಕ್ಸ್ ಆಫೀಸ್ ಪಂಡಿತರು. ಆದರೆ 30 ಕೋಟಿ ವೆಚ್ಚದೊಂದಿಗೆ ತಯಾರಾಗಿದ್ದ ಅಂಟೆ ಸುಂದರಾನಿಕಿ ಸಿನಿಮಾ 38 ಕೋಟಿ ಗಳಿಕೆ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಐಎಂಡಿಬಿಯಲ್ಲಿ 10ಕ್ಕೆ 7.6 ಅಂಕಗಳನ್ನು ಪಡೆದುಕೊಂಡಿರುವ ಈ ಚಿತ್ರ ಒಂದೊಳ್ಳೆ ಫ್ಯಾಮಿಲಿ ಎಂಟರ್ ಟೈನರ್ ಕೂಡ ಆಗಿದೆ.

  ಈಗಿನ ಸಿನಿಪ್ರೇಕ್ಷಕರು ಇಷ್ಟಪಡುವಂತಹ ಕಥೆ ಹಾಗೂ ಚಿತ್ರಕಥೆ ಇದ್ದ ಈ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಆದರೆ ಚಿತ್ರ ನಂತರದ ದಿನಗಳಲ್ಲಿ ನಿರೀಕ್ಷಿಸಿದ್ದ ಪ್ರದರ್ಶನ ಕಾಣುವಲ್ಲಿ ವಿಫಲವಾಯಿತು ಮತ್ತು ಹಲವೆಡೆ ವಿತರಕರಿಗೆ ಚಿತ್ರ ನಷ್ಟವನ್ನು ಕೂಡ ಉಂಟು ಮಾಡಿತು. ಹೀಗೆ ಚಿತ್ರಮಂದಿರದಲ್ಲಿ ಇದ್ದಾಗ ಅರ್ಹ ಫಲಿತಾಂಶವನ್ನು ಪಡೆಯುವಲ್ಲಿ ವಿಫಲವಾದ ಅಂಟೆ ಸುಂದರಾನಿಕಿ ಚಿತ್ರ ಇತ್ತೀಚಿಗಷ್ಟೆ ಜೆಮಿನಿ ಟಿವಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಿತ್ತು. ಈ ಪ್ರೀಮಿಯರ್ ಪ್ರಸಾರದ ಟಿಆರ್ ಪಿ ರೇಟಿಂಗ್ ಹೊರಬಿದ್ದಿದ್ದು ಚಿತ್ರ ಕೇವಲ 1.88 ಟಿಆರ್ ಪಿ ಪಡೆದುಕೊಳ್ಳುವುದರ ಮೂಲಕ ಎಲ್ಲರನ್ನು ಅಚ್ಚರಿಗೆ ಒಳಗಾಗುವಂತೆ ಮಾಡಿದೆ.

  ಓರ್ವ ಜನಪ್ರಿಯ ನಟ ಹಾಗೂ ಜನಪ್ರಿಯ ನಟಿ ಮತ್ತು ಪ್ರತಿಭಾವಂತ ನಿರ್ದೇಶಕ ಕೆಲಸ ಮಾಡಿರುವಂತಹ ಚಿತ್ರ ಇಷ್ಟು ಕಳಪೆ ಟಿಆರ್ ಪಿ ಪಡೆಯುವುದೆಂದರೆ ನಿಜಕ್ಕೂ ಶಾಕಿಂಗ್ ಎಂದು ಹಲವಾರು ಮಂದಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ ಚಿತ್ರವನ್ನು ಓಟಿಟಿಯಲ್ಲಿ ಹಲವು ಸಿನಿಪ್ರಿಯರು ನೋಡಿದ ಕಾರಣ ಟಿವಿಯಲ್ಲಿ ಚಿತ್ರ ಹೆಚ್ಚು ಟಿ ಆರ್ ಪಿ ಗಳಿಸಲಿಲ್ಲ ಎಂದೂ ಸಹ ಕೆಲ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  Nani and Nazriya Nazim starrer Ante Sundaraniki registered 1.88 low TRP on it's TV premiere
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X