ದಸರಾ ಮೊದಲ ದಿನದ ಕಲೆಕ್ಷನ್ ಎಷ್ಟು? ನಾನಿ ಕೊನೆ ಚಿತ್ರದ ಒಟ್ಟಾರೆ ಕಲೆಕ್ಷನ್ ಒಂದೇ ದಿನದಲ್ಲಿ ಬಂತು!
ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹು ನಿರೀಕ್ಷಿತ ಸಿನಿಮಾ ದಸರಾ ನಿನ್ನೆ ( ಮಾರ್ಚ್ 30 ) ಶ್ರೀ ರಾಮನವಮಿ ಪ್ರಯುಕ್ತ ಚಿತ್ರಮಂದಿರಕ್ಕೆ ಕಾಲಿಟ್ಟಿದೆ. ನಾನಿ ನಟನೆಯ ಮೊದಲ ಪ್ಯಾನ್ ಇಂಡಿಯಾ ಚಿತ್ರವಾದ ದಸರಾಗೆ ನಿರ್ದೇಶಕ ಸುಕುಮಾರ್ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶ್ರೀಕಾಂತ್ ಓಡೆಲಾ.
ಶ್ರೀಕಾಂತ್ ಓಡೆಲಾ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿಯೇ ಬೃಹತ್ ಗೆಲುಗು ಕಂಡಿದ್ದಾರೆ. ದಸರಾಗೆ ಭರ್ಜರಿ ಓಪನಿಂಗ್ ದೊರೆತಿದ್ದು, ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬೆಳೆ ಬೆಳೆದಿದೆ. ಚಿತ್ರದಲ್ಲಿ ನಾನಿ ಧರಣಿ ಎಂಬ ತೆಲಂಗಾಣ ಹಳ್ಳಿ ಯುವಕನ ಪಾತ್ರ ನಿರ್ವಹಿಸಿದ್ದು, ನಾಯಕಿಯಾಗಿ ಕೀರ್ತಿ ಸುರೇಶ್ ಹಾಗೂ ಎರಡನೇ ನಾಯಕನಾಗಿ ದಿಯಾ ಚಿತ್ರದ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ.

ಇನ್ನು ಚಿತ್ರದ ಕಥೆಯಲ್ಲಿ ಹೊಸತನ ಇಲ್ಲದಿದ್ದರೂ ಕಥೆಯನ್ನು ಎಮೋಷನ್ ಹಾಗೂ ಭರ್ಜರಿ ಮೇಕಿಂಗ್ ಮೂಲಕ ಹೇಳುವುದರಲ್ಲಿ ನಿರ್ದೇಶಕ ಶ್ರೀಕಾಂತ್ ಗೆದ್ದಿದ್ದಾರೆ. ನಟ ನಾನಿ ನಟನೆಗಂತೂ ದೊಡ್ಡ ದೊಡ್ಡ ಪ್ರಶಸ್ತಿಗಳು ಹರಸಿ ಬರುವುದು ಖಚಿತ. ಇನ್ನು ಗ್ಲಾಮರಸ್ ನಟಿ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ಡಿಗ್ಲಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಭರ್ಜರಿಯಾಗಿ ನಟಿಸಿದ್ದಾರೆ. ಉಳಿದಂತೆ ದೀಕ್ಷಿತ್ ಶೆಟ್ಟಿ ಆಕ್ಟಿಂಗ್ ಸೂಪರ್, ಸಾಯಿಕುಮಾರ್, ಸಮುದ್ರಕಣಿ, ಶೈನ್ ಟಾಮ್ ಚಾಕೊ ಹಾಗೂ ಪೂರ್ಣ ನಟನೆ ಸಹ ಬೊಂಬಾಟ್. ಚಿತ್ರದ ಯಾವ ಪಾತ್ರವೂ ತುಸು ಚೆನ್ನಾಗಿ ನಟಿಸಬಹುದಿತ್ತು ಎನ್ನುವ ಅಭಿಪ್ರಾಯ ಮೂಡಲು ಅವಕಾಶ ಕೊಟ್ಟಿಲ್ಲ.
ಒಟ್ಟಿನಲ್ಲಿ ಹೊಸತನವಿಲ್ಲದ ಕಥೆಗೆ ಕಲಾವಿದರ ನಟನೆ, ವಿಶೇಷವಾಗಿ ನಾನಿ ನಟನೆ, ಭರ್ಜರಿ ಮೇಕಿಂಗ್, ಛಾಯಾಗ್ರಹಣ, ಸಂಕಲನ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಗೆಲುವಿನ ಮಾಲೆ ತೊಡಿಸಿವೆ. ಇನ್ನು ಮೊದಲಿಗೆ ಯುಎಸ್ಎಯಲ್ಲಿ ಬಿಡುಗಡೆಗೊಂಡ ದಸರಾ ಚಿತ್ರಕ್ಕೆ ಅಲ್ಲಿಂದಲೇ ಬ್ಲಾಕ್‌ಬಸ್ಟರ್ ಟಾಕ್ ಶುರುವಾಗಿತ್ತು. ಈ ಟಾಕ್ ದೇಶದಲ್ಲಿಯೂ ಮುಂದುವರಿದಿದ್ದು ಮೊದಲ ದಿನ ದಸರಾ ಅಬ್ಬರಿಸಿದೆ.

ಇನ್ನು ನಾನಿ ನಟನೆಯ ಕಳೆದ ನಾಲ್ಕೈದು ಸಿನಿಮಾಗಳು ಬಾಕ್ಸ್ ಆಫೀಸ್ ಯಶಸ್ಸು ಕಂಡಿರಲಿಲ್ಲ. ನಾನಿ ಚಿತ್ರಗಳು ಮಾರುಕಟ್ಟೆಯಲ್ಲಿ ಸರಿಯಾದ ವ್ಯವಹಾರ ಮಾಡಿರಲಿಲ್ಲ. ಹೀಗಾಗಿಯೇ ದಸರಾ ಚಿತ್ರ ಬಿಡುಗಡೆಗೆ ಇನ್ನು ಎರಡು ದಿನಗಳು ಇದೆ ಎನ್ನುವವರೆಗೂ ಹೆಚ್ಚೇನೂ ಬುಕಿಂಗ್ ಆಗಿರಲಿಲ್ಲ. ಆದರೆ ಚಿತ್ರ ಬಿಡುಗಡೆಯಾಗಿ ಮೊದಲ ಶೋನಲ್ಲಿಯೇ ಬ್ಲಾಕ್‌ಬಸ್ಟರ್ ಎಂಬ ರಿಪೋರ್ಟ್ ಪಡೆದುಕೊಳ್ಳುತ್ತಿದ್ದಂತೆಯೇ ಸಂಜೆ ಹಾಗೂ ರಾತ್ರಿ ಪ್ರದರ್ಶನಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.
ಹೌದು ಮೊದಲ ದಿನದ ಸಂಜೆ ಹಾಗೂ ರಾತ್ರಿ ಪ್ರದರ್ಶನಗಳು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದವು. ಹೀಗೆ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿರುವ ನಾನಿ ನಟನೆಯ ದಸರಾ ಚಿತ್ರ ಮೊದಲ ದಿನದಂದು ಬರೋಬ್ಬರಿ 38.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಕಳೆದ ವರ್ಷ ಬಿಡುಗಡೆಗೊಂಡಿದ್ದ ನಾನಿ ನಟನೆಯ ಅಂಟೆ ಸುಂದರಾನಿಕಿ ಚಿತ್ರ ತನ್ನ ಲೈಫ್‌ಟೈಮ್‌ನಲ್ಲಿ ಮಾಡಿದ್ದ ಕಲೆಕ್ಷನ್ ಅನ್ನು ದಸರಾ ಮೊದಲ ದಿನದಲ್ಲಿಯೇ ಹಿಂದಿಕ್ಕಲಿದೆ. ಹೌದು, ಅಂಟೆ ಸುಂದರಾನಿಕಿ ಚಿತ್ರ ಒಟ್ಟಾರೆ 38 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದೀಗ ದಸರಾ ಮೊದಲ ದಿನವೇ 38.65 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಹಿಂದಿಕ್ಕಿದೆ.


Click it and Unblock the Notifications











