Hi Nanna trailer: ತಂದೆ- ಮಗಳ ಭಾವನಾತ್ಮಕ ಕತೆ: ಮತ್ತೆ ಕ್ಲಾಸ್ ಚಿತ್ರದಲ್ಲಿ ನ್ಯಾಚುರಲ್ ಸ್ಟಾರ್ ನಾನಿ

'ದಸರಾ' ಸಿನಿಮಾ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ನಟನೆಯ 'ಹಾಯ್ ನಾನ್ನ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದ್ದು ಕನ್ನಡದಲ್ಲೂ ಟ್ರೈಲರ್ ಹೊರಬಿದ್ದಿದೆ. ಶೌರ್ಯುವ್ ನಿರ್ದೇಶನದ ಈ ಚಿತ್ರದಲ್ಲಿ ನಾನಿ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ.

ವೈರ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮೋಹನ್ ಚೆರುಕೂರಿ, ವಿಜಯೇಂದ್ರ ರೆಡ್ಡಿ ತೀಗಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ದಸರಾ' ಚಿತ್ರದಲ್ಲಿ ಸಿಕ್ಕಾಪಟ್ಟೆ ರಗಡ್ ಆಗಿ ಮಿಂಚಿದ್ದ ನಾನಿ ಈ ಚಿತ್ರದಲ್ಲಿ ಸಖತ್ ಕ್ಲಾಸ್ ಆಗಿ ಕಾಣಿಕೊಂಡಿದ್ದಾರೆ. ಚಿತ್ರದಲ್ಲಿ ನಾನಿ ಮಗಳ ಪಾತ್ರದಲ್ಲಿ ಹಿಂದಿ ಬಾಲನಟಿ ಬೇಬಿ ಕಿಯಾರಾ ಖನ್ನಾ ನಟಿಸಿದ್ದಾಳೆ. ಅಲ್ಲದೇ ವಿಶೇಷ ಪಾತ್ರದಲ್ಲಿ ಶ್ರುತಿ ಹಾಸನ್ ಮಿಂಚಲಿದ್ದು. ಜಯರಾಮ್ ಮತ್ತು ಪ್ರಿಯದರ್ಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Nani starrer hi Nanna trailer released

ಡಿಸೆಂಬರ್ 7ರಂದು 'ಹಾಯ್ ನಾನ್ನ' ಚಿತ್ರ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ಎಮೋಷನಲ್ ಕತೆಯ ಪ್ರಚಾರ ಪ್ರಾರಂಭವಾಗಿವೆ. ಪ್ರಚಾರದ ಭಾಗವಾಗಿ ಟ್ರೈಲರ್ ಬಿಡುಗಡೆಯಾಗಿದೆ. 2 ನಿಮಿಷ 40 ಸೆಕೆಂಡ್‌ನ ಈ ಟ್ರೇಲರ್‌ನಲ್ಲಿ ನಿರ್ದೇಶಕರು ಕಣ್ಣೀರಿಡುವ ಭಾವನಾತ್ಮಕ ವಿಷಯವನ್ನು ತೋರಿಸಿದ್ದಾರೆ.

ತಂದೆ ತನ್ನ ಮಗಳಿಗೆ ಸುಳ್ಳು ಕತೆಗಳನ್ನು ಹೇಳುತ್ತಿರುತ್ತಾನೆ. ಮಗಳು ಕಥೆಯಲ್ಲಿನ ಪಾತ್ರಗಳನ್ನು ಕಲ್ಪಿಸಿಕೊಳ್ಳುತ್ತಾಳೆ. ವಾಸ್ತವವಾಗಿ, ಮಗುವಿಗೆ ತನ್ನ ತಾಯಿ ಯಾರೆಂದು ತಿಳಿದಿರುವುದಿಲ್ಲ. ಅದಕ್ಕೆ ಪ್ರತಿ ಕಥೆಯಲ್ಲೂ ಅಪ್ಪ, ಅಮ್ಮ ಎಲ್ಲಿ ಎಂದು ಕೇಳುತ್ತಿರುತ್ತಾಳೆ. ಆದರೆ, ಒಂದು ದಿನ ತಂದೆ ತನ್ನ ತಾಯಿಯ ಕಥೆಯನ್ನು ಮಗಳಿಗೆ ಹೇಳುತ್ತಾನೆ. ಆ ಕಥೆಯಲ್ಲಿ ಯಷ್ಣಾಳನ್ನು ತಾಯಿಯಾಗಿ ಆಕೆ ಕಲ್ಪಿಸಲಾಗಿದೆ. ಅಲ್ಲಿಂದ ಕಥೆ ತಿರುವು ಪಡೆದುಕೊಳ್ಳುವುದು ಟ್ರೇಲರ್‌ನಲ್ಲಿ ಗೊತ್ತಾಗುತ್ತದೆ. ಆಕೆ ಕೂಡ ಆತನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಇದು ಅವನ ಮೊದಲ ಪ್ರೇಯಸಿಯನ್ನು ನೆನಪಿಸುತ್ತದೆ. ಮುಂದೆ ಆತ ಮೊದಲು ಪ್ರೇಯಸಿಯಂತೆ ಈಕೆಯನ್ನು ಪ್ರೀತಿಸುತ್ತಾನೆ. ಮೊದಲು ಒಬ್ಬಳು ಬಿಟ್ಟು ಹೋಗಿದ್ದಾಳೆ. ಈಗ ಈಕೆ ಕೂಡ ಕಷ್ಟದ ಸಯಮದಲ್ಲಿ ಬಿಟ್ಟು ಹೋಗುತ್ತಾಳೆ. ಇದರಿಂದ ಆತನಿಗೆ ತನ್ನ ತಪ್ಪಿನ ಅರಿವಾಗಿ ಮುಂದೆ ಏನೆಲ್ಲಾ ಆಗುತ್ತೆ? ಅನ್ನೋದನ್ನು ಚಿತ್ರದಲ್ಲಿ ನೋಡಬೇಕು.

'ಹಾಯ್ ನಾನ್ನ' ಒನ್‌ಲೈನ್‌ ಸ್ಟೋರಿ ಟ್ರೈಲರ್‌ನಲ್ಲಿ ಗೊತ್ತಾಗಿದೆ. ಆದರೆ ಈ ಚಿತ್ರವನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ ಅನ್ನೊದನ್ನು ಕಾದು ನೋಡಬೇಕಿದೆ. ಕೊನೆಯಲ್ಲಿ ಇನ್ನು ಅಮ್ಮನ ಕಥೆ ಹೇಳಬೇಡ, ಮನೆಗೆ ಹೋಗೋಣ ಅಪ್ಪ ಎಂದು ಮಗಳು ಅಪ್ಪನನ್ನು ತಬ್ಬಿಕೊಳ್ಳುವ ದೃಶ್ಯ ಮನಮುಟ್ಟುವಂತಿದೆ. ಇಡೀ ಟ್ರೈಲರ್‌ನಲ್ಲಿ ಈ ದೃಶ್ಯ ಹೈಲೆಟ್.

ಈ ಹಿಂದೆ 'ಜೆರ್ಸಿ' ಚಿತ್ರದಲ್ಲಿ ನಾನಿ ಪುಟ್ಟ ಹುಡುಗನ ಜೊತೆ ತಂದೆ ಮಗನಾಗಿ ನಟಿಸಿ ಗೆದ್ದಿದ್ದರು. ಇಬ್ಬರ ಭಾವನಾತ್ಮಕ ಸನ್ನಿವೇಶಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಕಿಯಾರಾ ಜೊತೆ ನಾನಿ ತಂದೆ ಮಗಳಾಗಿ ಅದೇ ಮ್ಯಾಜಿಕ್ ರಿಪೀಟ್ ಮಾಡಲು ಮುಂದಾಗಿದ್ದಾರೆ.

ನಾನಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗೆಲ್ಲುತ್ತಿದ್ದಾರೆ. ಸಿನಿಮಾ ಸೋತರೂ ತಮ್ಮ ಪರ್ಫಾರ್ಮನ್ಸ್‌ನಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. 'ದಸರಾ' ಚಿತ್ರದಲ್ಲಿ ಮಾಸ್ ಹೀರೊ ಆಗಿಯೂ ಗೆದ್ದಿದ್ದರು. ಇದೀಗ ತಮ್ಮ ಗೆಲುವಿನ ಯಾತ್ರೆ ಮುಂದುವರೆಸುವ ಪ್ರಯತ್ನದಲ್ಲಿದ್ದಾರೆ. 'ಸರಿಪೋದ ಶನಿವಾರಂ' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Nani, mrunal thakur's hai nanna trailer out now;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X