'ಪುಷ್ಪ' ಚಿತ್ರದಲ್ಲಿ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರ ನಾನು ಮಾಡಬೇಕಿತ್ತು!

ಸುಕುಮಾರ್ ನಿರ್ದೇಶನದ 'ಪುಷ್ಪ' ಸರಣಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿದೆ. ಚಿತ್ರದ 3ನೇ ಭಾಗ ಮಾಡುವ ಬಗ್ಗೆಯೂ ಚಿತ್ರತಂಡ ಸುಳಿವು ಕೊಟ್ಟಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟನೆಯ ಸಿನಿಮಾ ಹೊಸ ದಾಖಲೆ ಬರೆದಿದ್ದು ಗೊತ್ತೇಯಿದೆ.

'ಪುಷ್ಪ' ಚಿತ್ರದ ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಪುಷ್ಪರಾಜ್ ಆಗಿ ಅಲ್ಲು ಅರ್ಜುನ್, ಶ್ರೀವಲ್ಲಿಯಾಗಿ ರಶ್ಮಿಕಾ, ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ ಆಗಿ ನೆಗೆಟಿವ್ ರೋಲ್‌ನಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿ ಗೆದ್ದಿದ್ದಾರೆ. ಮೊದಲಿಗೆ ಈ ಕಥೆಯನ್ನು ಸುಕುಮಾರ್ ವೆಬ್ ಸೀರಿಸ್ ಮಾಡಲು ನಿರ್ಧರಿಸಿದ್ದರು. ಬಳಿಕ ಸಿನಿಮಾ ರೂಪ ಸಿಕ್ಕಿತ್ತು. ಈ ಚಿತ್ರದಲ್ಲಿ ಮಹೇಶ್ ಬಾಬು ನಟಿಸಬೇಕಿತ್ತು ಎನ್ನುವ ಊಹಾಪೋಹ ಕೂಡ ಇದೆ.

Nara Rohit Reveals He Was First Choice for Fahadh Faasil s Role in Pushpa

ಒಂದು ಸಿನಿಮಾ ಎಂದುಕೊಂಡಾಗ ಕಥೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಕಲಾವಿದರ ವಿಚಾರದಲ್ಲಿ ಕೂಡ ಸರ್ವೇಸಾಧಾರಣ. ಚಿತ್ರೀಕರಣ ಆರಂಭಿಸಿದ ಬಳಿಕ ಕಲಾವಿದರ ಬದಲಾವಣೆ ಆಗಿರುವುದು ಇದೆ. ಚಿತ್ರದಲ್ಲಿ ರಕ್ತಚಂದನ ಸ್ಮಗ್ಲರ್ ಪುಷ್ಪರಾಜ್ ಹಾಗೂ ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ನಡುವಿನ ಮಾರಾಮಾರಿಯೇ ಹೈಲೆಟ್. ಫಹಾದ್ ಫಾಸಿಲ್ ನಟನೆಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಅಂದಹಾಗೆ ಫಹಾದ್ ಮಾಡಿರುವ ಭನ್ವರ್ ಸಿಂಗ್ ಪಾತ್ರ ನಾನು ಮಾಡಬೇಕಿತ್ತು. ಈ ಸಂಬಂಧ ಸುಕುಮಾರ್ ನನ್ನ ಜೊತೆ ಚರ್ಚೆ ನಡೆಸಿದ್ದರು ಎಂದು ತೆಲುಗು ನಟ ನಾರಾ ರೋಹಿತ್ ಹೇಳಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ನನ್ನ ಒಂದು ಫೋಟೊ ನೋಡಿ ಆ ಪಾತ್ರಕ್ಕೆ ಸೂಕ್ತ ಎಂದುಕೊಂಡು ನಿರ್ಮಾಪಕರಾದ ರವಿ ಸಂಪರ್ಕಿಸಿದ್ದರು. ಬಳಿಕ ನಿರ್ದೇಶಕ ಸುಕುಮಾರ್ ಸಹ ಮಾತನಾಡಿದ್ದರು.

ಕೋವಿಡ್ ಬಂತು. ಬಳಿಕ ಏನಾಯಿತೋ ಗೊತ್ತಿಲ್ಲ. ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡಬೇಕು ಎಂದುಕೊಂಡು ಫಹಾದ್ ಫಾಸಿಲ್ ಅವರನ್ನು ಆಯ್ಕೆ ಮಾಡಿಕೊಂಡರು ಅನ್ನಿಸುತ್ತದೆ. ಒಟ್ಟಾರೆ ಆ ಚಿತ್ರದಲ್ಲಿ ನಾನು ನಟಿಸುವ ಬಗ್ಗೆ ಚರ್ಚಿಸಿದ್ದಂತೂ ನಿಜ ಎಂದು ನಾರಾ ರೋಹಿತ್ ಹೇಳಿಕೊಂಡಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಸಹೋದರನ ಪುತ್ರ ನಾರಾ ರೋಹಿತ್. 15 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದಿದ್ದ ಇವರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಮಟ್ಟದ ಬ್ರೇಕ್ ಮಾತ್ರ ಸಿಕ್ಕಿಲ್ಲ.

Nara Rohit Reveals He Was First Choice for Fahadh Faasil s Role in Pushpa

ಎರಡು ಭಾಗಗಳಾಗಿ ತೆರೆಗೆ ಬಂದಿದ್ದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಕೊಳ್ಲೆ ಹೊಡೆದಿತ್ತು. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡ ಸಿನಿಮಾ ತೆರೆಗೆ ಬಂದಿತ್ತು. ಮೊದಲ ಭಾಗ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದರೆ ಎರಡನೇ ಭಾಗ 1600 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡು ಸಂಚಲನ ಸೃಷ್ಟಿಸಿತ್ತು. ಟಿಕೆಟ್ ದರ ಹೆಚ್ಚಿಸಿದ್ದು ಕೂಡ ಅದಕ್ಕೆ ವರವಾಗಿತ್ತು. ಪಾರ್ಟ್-1 ಕೊನೆಗೆ ಪುಷ್ಪರಾಜ್ ವರ್ಸಸ್ ಭನ್ವರ್ ಸಿಂಗ್ ನಡುವೆ ಏಟು ಎದುರೇಟು ಶುರುವಾಗಿತ್ತು. ಪಾರ್ಟ್‌-2ನಲ್ಲಿ ಅದೇ ಹೈಲೆಟ್ ಆಗಿತ್ತು. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಕ್ಕಿತ್ತು.

ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ಪ್ರೇಕ್ಷಕರ ಮುಂದೆ ಬಂದಿತ್ತು. ಅದಕ್ಕೆ ತಕ್ಕಂತೆ ಬಜೆಟ್, ಸ್ಟಾರ್ ಕಾಸ್ಟ್ ಸಂಭಾವನೆ ಎಲ್ಲವೂ ಹೆಚ್ಚಾಗಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಪಾರ್ಟ್-3 ಮಾಡುವ ಬಗ್ಗೆಯೂ ಸುಳಿವು ಸಿಕ್ಕಿದೆ. ಆದರೆ ಯಾವಾಗ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಎರಡನೇ ಭಾಗಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಹಾಗಾಗಿ 3ನೇ ಭಾಗದ ಬಗ್ಗೆ ಅಷ್ಟೇನು ನಿರೀಕ್ಷೆ ಇಲ್ಲ.

More from Filmibeat

English summary
Telugu actor Nara Rohit reveals he was initially considered for the role of SP Bhanwar Singh Shekhawat in Sukumar's 'Pushpa', later played by Fahadh Faasil
Read more about: pushpa tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X